Advertisement

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

09:34 PM Nov 16, 2024 | Team Udayavani |

ಲಕ್ನೋ: ಗೆಲ್ಲಲೇಬೇಕಿದ್ದ ಉತ್ತರಪ್ರದೇಶ ವಿರುದ್ಧದ ರಣಜಿ ಪಂದ್ಯವನ್ನು ಡ್ರಾ ಮಾಡಿಕೊಂಡ ಕಾರಣ ಕರ್ನಾಟಕದ ರಣಜಿ ನಾಕೌಟ್‌ ಹಾದಿ ಬಹುತೇಕ ಕೊನೆಗೊಂಡಿದೆ.

Advertisement

ಗೆಲುವಿಗೆ 261 ರನ್‌ ಗುರಿ ಪಡೆದ ಕರ್ನಾಟಕ, ಪಂದ್ಯ ಕೊನೆಗೊಂಡಾಗ 5 ವಿಕೆಟಿಗೆ 178 ರನ್‌ ಗಳಿಸಿತ್ತು. ಇದು 5 ಪಂದ್ಯಗಳಲ್ಲಿ ಕರ್ನಾಟಕ ಸಾಧಿಸಿದ 4ನೇ ಡ್ರಾ ಫ‌ಲಿತಾಂಶ. ಬಿಹಾರ ವಿರುದ್ಧವಷ್ಟೇ ಜಯ ಸಾಧಿಸಿದೆ.

ಎಲೈಟ್‌ ಸಿ ವಿಭಾಗದಲ್ಲಿ ಕರ್ನಾಟಕವೀಗ 12 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ರನ್‌ರೇಟ್‌ ಮೈನಸ್‌ 0.061 ಆಗಿದೆ. ಹರಿಯಾಣ (20 ಅಂಕ), ಕೇರಳ (18 ಅಂಕ) ಮತ್ತು ಬಂಗಾಲ (14 ಅಂಕ) ಮೊದಲ 3 ಸ್ಥಾನದಲ್ಲಿವೆ. ಎಲ್ಲ ತಂಡಗಳಿಗೆ ಇನ್ನು 2 ಪಂದ್ಯ ಬಾಕಿ ಇದೆ.

ಉತ್ತರಪ್ರದೇಶ ವಿರುದ್ಧ 186 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಗಳಿಸಿದ ಹೊರತಾಗಿಯೂ ಕರ್ನಾಟಕ ಈ ಪಂದ್ಯವನ್ನು ಗೆಲ್ಲಲು ವಿಫ‌ಲವಾಯಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದ ಯುಪಿ 446 ರನ್‌ ಪೇರಿಸಿತು. 5ಕ್ಕೆ 325 ರನ್‌ ಗಳಿಸಿದಲ್ಲಿಂದ ಯುಪಿ ಅಂತಿಮ ದಿನದಾಟ ಮುಂದುವರಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಯುಪಿ-89 ಮತ್ತು 446. ಕರ್ನಾಟಕ-275 ಮತ್ತು 5 ವಿಕೆಟಿಗೆ 178 (ನಿಕಿನ್‌ 48, ಅಗರ್ವಾಲ್‌ 37, ಪಾಂಡೆ ಔಟಾಗದೆ 36).

Advertisement
Advertisement

Udayavani is now on Telegram. Click here to join our channel and stay updated with the latest news.

Next