Advertisement

ರಣಜಿ ಟ್ರೋಫಿ: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಕರ್ನಾಟಕ

10:49 PM Mar 06, 2022 | Team Udayavani |

ಚೆನ್ನೈ: ಪುದುಚೇರಿಗೆ ಫಾಲೋಆನ್‌ ಹೇರುವ ಮೂಲಕ ಇನ್ನಿಂಗ್ಸ್‌ ಗೆಲುವು ಸಾಧಿಸಿದ ಕರ್ನಾಟಕ, “ಎಲೈಟ್‌ ಸಿ’ ವಿಭಾಗದ ಅಗ್ರಸ್ಥಾನಿಯಾಗಿ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

Advertisement

ಕರ್ನಾಟಕ 3 ಪಂದ್ಯಗಳಿಂದ ಒಟ್ಟು 16 ಅಂಕ ಗಳಿಸಿತು.ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಉಳಿದ ತಂಡಗಳೆಂದರೆ ಮಧ್ಯಪ್ರದೇಶ, ಬಂಗಾಲ, ಮುಂಬಯಿ, ಉತ್ತರಾಖಂಡ, ಪಂಜಾಬ್‌ ಮತ್ತು ಉತ್ತರಪ್ರದೇಶ. ಉಳಿದಂತೆ ಜಾರ್ಖಂಡ್‌ ಮತ್ತು ನಾಗಾಲ್ಯಾಂಡ್‌ ಪ್ರೀ-ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸಲಿವೆ.

ಪುದುಚೇರಿ ವಿರುದ್ಧ ಕರ್ನಾಟಕ ಇನ್ನಿಂಗ್ಸ್‌ ಹಾಗೂ 20 ರನ್ನುಗಳಿಂದ ಗೆದ್ದು ಬಂದಿತು. ಕರ್ನಾಟಕದ 453ಕ್ಕೆ ಉತ್ತರವಾಗಿ ಪುದುಚೇರಿ 241ಕ್ಕೆ ಆಲೌಟ್‌ ಆಯಿತು. ಫಾಲೋಆನ್‌ ಬಳಿಕ 192ಕ್ಕೆ ಕುಸಿಯಿತು. ಶ್ರೇಯಸ್‌ ಗೋಪಾಲ್‌ 5, ಪ್ರಸಿದ್ಧ್ ಕೃಷ್ಣ 3 ವಿಕೆಟ್‌ ಉರುಳಿಸಿದರು. ಮೂಲತಃ ಕರ್ನಾಟಕದವರಾದ ಪವನ್‌ ದೇಶಪಾಂಡೆ ಅಜೇಯ 54 ರನ್‌ ಹೊಡೆದು ಪುದುಚೇರಿಯ ದ್ವಿತೀಯ ಸರದಿಯ ಟಾಪ್‌ ಸ್ಕೋರರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 8 ವಿಕೆಟಿಗೆ 453 ಡಿಕ್ಲೇರ್‌. ಪುದುಚೇರಿ-241 ಮತ್ತು 192 (ಪವನ್‌ ದೇಶಪಾಂಡೆ ಅಜೇಯ 54, ಸುಬೋತ್‌ ಭಾಟಿ 37, ಶ್ರೇಯಸ್‌ ಗೋಪಾಲ್‌ 82ಕ್ಕೆ 5, ಪ್ರಸಿದ್ಧ್ ಕೃಷ್ಣ 38ಕ್ಕೆ 3). ಪಂದ್ಯಶ್ರೇಷ್ಠ: ಪಡಿಕ್ಕಲ್‌.

Advertisement

Udayavani is now on Telegram. Click here to join our channel and stay updated with the latest news.

Next