Advertisement
“ಸಿ’ ವಿಭಾಗದಿಂದ ಹೊರಬಿದ್ದ ಇತರ ತಂಡಗಳೆಂದರೆ ಗುಜರಾತ್ (25), ರೈಲ್ವೇಸ್ (24), ತ್ರಿಪುರ (17), ಪಂಜಾಬ್ (11), ಚಂಡೀಗಢ (6) ಮತ್ತು ಗೋವಾ (4).ಫೆ. 23ರಂದು ಕ್ವಾರ್ಟರ್ ಫೈನಲ್ಸ್ ಆರಂಭವಾಗಲಿದ್ದು, ಕರ್ನಾಟಕ “ಎ’ ವಿಭಾಗದ ಅಗ್ರಸ್ಥಾನಿ ವಿದರ್ಭವನ್ನು ಎದುರಿಸಲಿದೆ. ಉಳಿದ ಪಂದ್ಯಗಳಲ್ಲಿ ಮಧ್ಯ ಪ್ರದೇಶ- ಆಂಧ್ರಪ್ರದೇಶ, ಮುಂಬಯಿ -ಬರೋಡ, ತಮಿಳುನಾಡು -ಸೌರಾಷ್ಟ್ರ ಮುಖಾಮುಖಿ ಆಗಲಿವೆ.
296 ರನ್ನುಗಳ ಮೊದಲ ಇನ್ನಿಂಗ್ಸ್ ಹಿನ್ನಡೆಗೆ ಸಿಲುಕಿದ್ದ ಚಂಡೀಗಢ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಹೋರಾಟ ನಡೆಸಿತು. ಪಂದ್ಯ ಕೊನೆಗೊಳ್ಳುವಾಗ 5 ವಿಕೆಟಿಗೆ 236 ರನ್ ಮಾಡಿತ್ತು. ವಿಕೆಟ್ ನಷ್ಟವಿಲ್ಲದೆ 61 ರನ್ ಮಾಡಿದಲ್ಲಿಂದ ಚಂಡೀಗಢ ಅಂತಿಮ ದಿನದ ಆಟ ಮುಂದುವರಿಸಿತ್ತು. ಇದೇ ಮೊತ್ತಕ್ಕೆ ಶಿವಂ ಭಾಂಬ್ರಿ (33) ವಿಕೆಟ್ ಬಿತ್ತು. ದ್ವಿತೀಯ ವಿಕೆಟಿಗೆ ಮತ್ತೆ 61 ರನ್ ಒಟ್ಟುಗೂಡಿತು. ಆಗ ನಾಯಕ ಮನನ್ ವೋಹ್ರಾ (23) ಪೆವಿಲಿಯನ್ ಸೇರಿಕೊಂಡರು. ಎರಡೂ ವಿಕೆಟ್ ಶಶಿಕುಮಾರ್ ಪಾಲಾಯಿತು. 122ರ ಮೊತ್ತ ದಲ್ಲೇ ಆರಂಭಕಾರ ಅಸ್ಲಾನ್ ಖಾನ್ ಕೌಶಿಕ್‌ಗೆ ಲೆಗ್ ಬಿಫೋರ್ ಆದರು. ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ಅಸ್ಲಾìನ್ ಗಳಿಕೆ 63 ರನ್. ಇವರದು ಚಂಡೀಗಢ ಸರದಿಯ ಟಾಪ್ ಸ್ಕೋರ್ ಆಗಿತ್ತು.
ಐದೇ ರನ್ ಅಂತರದಲ್ಲಿ ಕುಣಾಲ್ ಮಹಾಜನ್ (1) ವಿಕೆಟ್ ಕಿತ್ತ ವಿ. ಕೌಶಿಕ್ ಕರ್ನಾಟಕದ ಗೆಲುವಿನ ಆಸೆಯನ್ನು ಚಿಗುರಿಸಿದರು. ಆಗ ಚಂಡೀಗಢ 127ಕ್ಕೆ 4 ವಿಕೆಟ್ ಕಳೆದುಕೊಂಡಿತ್ತು.
Related Articles
Advertisement
ಸಂಕ್ಷಿಪ್ತ ಸ್ಕೋರ್: ಚಂಡೀಗಢ-267 ಮತ್ತು 5 ವಿಕೆಟಿಗೆ 236 (ಅಸ್ಲಾìನ್ ಖಾನ್ 63, ಮಾಯಾಂಕ್ ಸಿಧು ಔಟಾಗದೆ 56, ಶಿವಂ ಭಾಂಬ್ರಿ 33, ಕರಣ್ ಕೈಲ ಔಟಾಗದೆ 25, ಮನನ್ ವೋಹ್ರಾ 23, ವಿ. ಕೌಶಿಕ್ 26ಕ್ಕೆ 2, ಶಶಿಕುಮಾರ್ ಕೆ. 55ಕ್ಕೆ 2).
ಕ್ವಾರ್ಟರ್ ಫೈನಲ್ಸ್(ಫೆ. 23-27)
1. ಕರ್ನಾಟಕ-ವಿದರ್ಭ
2. ಮಧ್ಯಪ್ರದೇಶ-ಆಂಧ್ರಪ್ರದೇಶ
3. ಮುಂಬಯಿ-ಬರೋಡ
4. ತಮಿಳುನಾಡು-ಸೌರಾಷ್ಟ್ರ