Advertisement

ರಣಜಿ ಫೈನಲ್‌: ಛಲ ಬಿಡದ ಬಂಗಾಲ

10:09 AM Mar 14, 2020 | sudhir |

ರಾಜ್‌ಕೋಟ್‌: ರಣಜಿ ಫೈನಲ್‌ ಮುಖಾಮುಖೀಯಲ್ಲಿ ಆತಿಥೇಯ ಸೌರಾಷ್ಟ್ರ ವಿರುದ್ಧ ಮೊದಲ ಇನ್ನಿಂಗ್ಸ್‌ ಮುನ್ನಡೆಗೆ ಬಂಗಾಲ ಭಾರೀ ಪೈಪೋಟಿ ನಡೆಸಿದೆ. ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಸಾಹಸದಿಂದ 4ನೇ ದಿನದಾಟದ ಕೊನೆಗೆ 6 ವಿಕೆಟ್‌ ಕಳೆದುಕೊಂಡು 354 ರನ್‌ ಗಳಿಸಿದೆ. ಮುನ್ನಡೆಗೆ ಉಳಿದ 4 ವಿಕೆಟ್‌ಗಳ ನೆರವಿನಿಂದ 72 ರನ್‌ ಗಳಿಸಬೇಕಿದೆ. ಸೌರಾಷ್ಟ್ರ ಮೊದಲ ಇನ್ನಿಂಗ್ಸ್‌ನಲ್ಲಿ 425 ರನ್‌ ಪೇರಿಸಿತ್ತು.

Advertisement

ಸೆಮಿಫೈನಲ್‌ನಲ್ಲಿ ಕರ್ನಾಟಕವನ್ನು ಕಾಡಿದ ಅನುಸ್ತೂಪ್‌ ಮಜುಮಾªರ್‌ 58 ಮತ್ತು ಅರ್ನಾಬ್‌ ನಂದಿ 28 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮುರಿಯದ 7ನೇ ವಿಕೆಟಿಗೆ 91 ರನ್‌ ಪೇರಿಸಿ ಸೌರಾಷ್ಟ್ರದ ಮೇಲುಗೈಗೆ ಅಡ್ಡಿಯಾಗಿ ನಿಂತಿದ್ದಾರೆ.

ಬಂಗಾಲ ಸರದಿಯಲ್ಲಿ ಮಿಂಚಿದ ಉಳಿದ ಬ್ಯಾಟ್ಸ್‌ ಮನ್‌ಗಳೆಂದರೆ ಸುದೀಪ್‌ ಚಟರ್ಜಿ (81) ಮತ್ತು ವೃದ್ಧಿಮಾನ್‌ ಸಾಹಾ (64). ಇವರಿಬ್ಬರು 4ನೇ ವಿಕೆಟಿಗೆ 101 ರನ್‌ ಒಟ್ಟುಗೂಡಿಸಿ ಬಂಗಾಲದ ಹೋರಾಟವನ್ನು ಜಾರಿಯಲ್ಲಿರಿಸಿದರು. ಶುಕ್ರವಾರ ಪಂದ್ಯದ ಅಂತಿಮ ದಿನವಾಗಿದೆ.

ಅಂತಿಮ ದಿನದಾಟಕ್ಕೆ ಪ್ರೇಕ್ಷಕರಿಗೆ ಪ್ರವೇಶವಿಲ್ಲ
ಈ ಬಾರಿಯ ರಣಜಿ ಚಾಂಪಿಯನ್‌ ತಂಡದ ಸಂಭ್ರಮಕ್ಕೆ ಯಾವುದೇ ಪ್ರೇಕ್ಷಕರು ಸಾಕ್ಷಿಯಾಗಲಾರರು. ಕಾರಣ, ಕೊರೊನಾ ಭೀತಿಯಿಂದ ವೀಕ್ಷಕರಿಗೆ ಹೇರಲಾದ ನಿರ್ಬಂಧ. ಹೀಗಾಗಿ ಸೌರಾಷ್ಟ್ರ-ಬಂಗಾಲ ನಡುವಿನ ಶುಕ್ರವಾರದ ಕೊನೆಯ ದಿನದಾಟದ ವೇಳೆ ಸ್ಟೇಡಿಯಂ ಖಾಲಿ ಹೊಡೆಯಲಿದೆ.

“ಅಂತಿಮ ದಿನದಾಟಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಆಟಗಾರರ ಜತೆಗೆ ಪಂದ್ಯದ ಅಧಿಕಾರಿಗಳು ಮತ್ತು ಮಾಧ್ಯಮದವರಿಗಷ್ಟೇ ಪ್ರವೇಶ ಇರಲಿದೆ’ ಎಂದು ಬಿಸಿಸಿಐ ಜಿಎಂ ಸಾಬಾ ಕರೀಂ ಹೇಳಿದ್ದಾರೆ.

Advertisement

ದೇಶಿ ಕ್ರಿಕೆಟ್‌ ಖಾಲಿ ಸ್ಟೇಡಿಯಂನಲ್ಲಿ ನಡೆಯುವುದು ಭಾರತದಲ್ಲಿ ಮಾಮೂಲು. ಇಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌, ಐಪಿಎಲ್‌ ಹೊರತುಪಡಿಸಿ ಬೇರೆ ಪಂದ್ಯಗಳಿಗೆ ವೀಕ್ಷಕರು ಬರುವುದು ಅಷ್ಟರಲ್ಲೇ ಇದೆ. ಉಚಿತ ಪ್ರವೇಶ ನೀಡಿದರೂ ದೇಶಿ ಕ್ರಿಕೆಟ್‌ ಪಂದ್ಯಗಳನ್ನು ಆಸಕ್ತಿಯಿಂದ ವೀಕ್ಷಿಸುವವರ ಸಂಖ್ಯೆ ವಿರಳ. ಇದಕ್ಕೆ ಸೌರಾಷ್ಟ್ರ-ಬಂಗಾಲ ನಡುವಿನ ರಣಜಿ ಫೈನಲ್‌ ಕೂಡ ಹೊರತಾಗಿಲ್ಲ. ಹೀಗಾಗಿ ಕೊನೆಯ ದಿನ ವೀಕ್ಷಕರ ನಿರ್ಬಂಧ ಎನ್ನುವುದು ಒಂದು ಪ್ರಹಸನವಾದೀತು, ಅಷ್ಟೇ!

Advertisement

Udayavani is now on Telegram. Click here to join our channel and stay updated with the latest news.

Next