Advertisement

ದೇಶದ 46ನೇ ವರಿಷ್ಠ ನ್ಯಾಯಮೂರ್ತಿಯಾಗಿ ಜಸ್ಟಿಸ್‌ ರಂಜನ್‌ ಗೊಗೋಯಿ

11:24 AM Oct 03, 2018 | udayavani editorial |

ಹೊಸದಿಲ್ಲಿ : ಜಸ್ಟಿಸ್‌ ರಂಜನ್‌ ಗೊಗೋಯಿ ಅವರು ಭಾರತದ 46ನೇ, ನೂತನ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Advertisement

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಜಸ್ಟಿಸ್‌ ಗೊಗೋಯಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ ಪ್ರಮಾಣ ವಚನ ಬೋಧಿಸಿದರು. 

ಜಸ್ಟಿಸ್‌ ಗೊಗೋಯಿ ಅವರು 2019ರ ನವೆಂಬರ್‌ 17ರ ವರೆಗೆ ಸಿಜೆಐ ಆಗಿ ಕಾರ್ಯನಿರ್ವಸುತ್ತಾರೆ. ಅಯೋಧ್ಯೆಯ ವಿವಾದಾತ್ಮಕ  ರಾಮಜನ್ಮಭೂಮಿ ನಿವೇಶನದ ಹಕ್ಕು ಮತ್ತು ಅಸ್ಸಾಂನಲ್ಲಿನ ಎನ್‌ಆರ್‌ಸಿ ಸೇರಿದಂತೆ ಹಲವು ಅತ್ಯಂತ ಪ್ರಮುಖ ಪ್ರಕರಣಗಳು ಜಸ್ಟಿಸ್‌ ಗೊಗೋಯಿ ಅವರ ಮುಂದೆ ಇತ್ಯರ್ಥಕ್ಕೆ  ಬರಲಿವೆ. 

1954ರ ನವೆಂಬರ್‌ 18ರಂದು ಜನಿಸಿದ್ದ ಗೊಗೋಯಿ ಅವರು ದೇಶದ 46ನೇ ವರಿಷ್ಠ ನ್ಯಾಯಮೂರ್ತಿ ಆಗಿದ್ದಾರೆ. ಮಾಜಿ ಸಿಜೆಐ ದೀಪಕ್‌ ಮಿಶ್ರಾ ಅವರ ಅಧಿಕಾರಾವಧಿಯು ನಿನ್ನೆ ಅ.2ರಂದು ಕೊನೆಗೊಂಡಿದೆ. 2019ರ ನ.17ರಂದು ಸಿಜೆಐ ಆಗಿ ತಮ್ಮ ಕಾರ್ಯಭಾರವನ್ನು ಮುಗಿಸುವ ಒಂದು ದಿನ ಮುನ್ನ ಗೊಗೋಯಿ ಅವರು 65ರ ಹರೆಯದ ಪೂರೈಸಲಿದ್ದಾರೆ.  

ಗೊಗೋಯಿ ಅವರ ತಂದೆ ಕೇಶಬ್‌ ಚಂದ್ರ ಗೊಗೋಯಿ ಅವರು 1982ರಲ್ಲಿ ಅಸ್ಸಾಂ ಮುಖ್ಯಮಂತ್ರಿಯಾಗಿದ್ದರು ಮತ್ತು ಕಾಂಗ್ರೆಸ್‌ನ ರಾಜಕಾರಣಿಯಾಗಿ ಪ್ರಖ್ಯಾತರಾಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next