ಉದಯವಾಣಿ ಸಮಾಚಾರ
ರಾಣಿಬೆನ್ನೂರ: ಪ್ರತಿಯೊಬ್ಬ ಮಾನವನು ಸತ್ಯ, ಪ್ರಾಮಾಣಿಕ, ನ್ಯಾಯ, ನೀತಿಯ ದಾರಿಯಲ್ಲಿಯೇ ಸಾಗಿ ಉತ್ತಮ ಹೆಸರು ಮಾಡಬೇಕು. ಅದರಲ್ಲೂ ದಾನ ಮಾಡುವ ಗುಣ ಬಹಳ ಶ್ರೇಷ್ಠ. ಅಂಥ ಸೇವೆಯಲ್ಲಿ ಮಂಜಯ್ಯ ಚಾವಡಿ ಅವರ
ಅಭಿಮಾನಿಗಳ ಬಳಗ ತೊಡಗಿದೆ ಎಂದು ಶ್ರೀ ಗುರು ಮಾರ್ಕಂಡೇಶ್ವರ ಪೀಠದ ಸದಾನಂದ ಸ್ವಾಮೀಜಿ ಹೇಳಿದರು.
ತುಮ್ಮಿನಕಟ್ಟಿ ಗ್ರಾಮದ ಶ್ರೀ ಸಂಗನಬಸವ ಶಾಲೆ ಆವರಣದಲ್ಲಿ ಶುಕ್ರವಾರ ಜೈ ಶ್ರೀ ರಾಮ್ ಎಂದೇ ಹೆಸರು ಪಡೆದಿರುವ ಮಂಜಯ್ಯ ಚಾವಡಿ ಅಭಿಮಾನಿಗಳ ಬಳಗದ ವತಿಯಿಂದ ತುಮ್ಮಿನಕಟ್ಟಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪೌಢಶಾಲೆಯ 3500 ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಮನುಷ್ಯರು ತಮ್ಮ ಜೀವಿತಾವಧಿಯಲ್ಲಿ ಮಾಡಬಾರದ್ದನ್ನು ಮಾಡಿ, ಇಹಲೋಕ ತ್ಯಜಿಸುತ್ತಾರೆ. ಕೆಲವರು ಬದುಕಿದಂತೆ ಅವರ ಅನುಪಮ ಸೇವೆ ಬಿಟ್ಟು ಹೋಗುತ್ತಾರೆ. ಅಂತವರಲ್ಲಿ ಮಂಜಯ್ಯ ಚಾವಡಿ ಅವರ ಅಭಿಮಾನಿಗಳ ಬಳಗದವರ ಸೇವೆ ಶ್ಲಾಘನೀಯವಾ ದದ್ದು ಎಂದು ಸ್ವಾಮೀಜಿ ತಿಳಿಸಿದರು.
ಗ್ರಾಪಂ ಅಧ್ಯಕ್ಷ ಮಂಜುನಾಥ ಹೊನ್ನಾಳಿ ಮಾತನಾಡಿ, ದಾನಿಗಳು ನೀಡಿದ ಪಠ್ಯಪುಸ್ತಕಗಳ ಸದುಪಯೋಗಪಡಿಸಿಕೊಂಡು ದೇಶವೇ ಕೊಂಡಾಡುವಂತಹ ಉತ್ತಮ ಪ್ರಜೆಯಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಜೈ ಶ್ರೀ ರಾಮ್ ಎಂದೇ ಹೆಸರು ಪಡೆದಿರುವ ಮಂಜಯ್ಯ ಚಾವಡಿ ಅಭಿಮಾನಿಗಳ ಬಳಗದ ಸದಸ್ಯರು 3500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್‌ಬುಕ್
ವಿತರಿಸಿದರು.
ಶ್ರೀ ಸಂಗನಬಸವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಕೃಷ್ಣಪ್ಪ ಕಂಬಳಿ, ರಂಗಪ್ಪ ಆಡಿನವರ, ರಮೇಶ ನಾಯಕ, ಸಿಆರ್‌ಸಿಪಿ ಆರ್.ಜಿ. ಲಮಾಣಿ, ಸುರೇಶ ರಡ್ಡೇರ, ಅಶೋಕ ಚವಡಣ್ಣನವರ, ಮಂಜಯ್ಯ ತಂದೆ ತಾಯಿಗಳಾದ ಮಹೇಶ್ವರಯ್ಯ ಚಾವಡಿ, ಸಾವಿತ್ರಾ ಚಾವಡಿ, ಎಸ್‌ಡಿಎಂಸಿ ಅಧ್ಯಕ್ಷೆ ಕವಿತ ಮರಿಗೌಡ್ರ, ಶ್ರೀನಿವಾಸ ಅರಗಟ್ಟಿ, ಕೃಷ್ಣಪ್ಪ ಜಾಡರ, ಮನೋಹರ ಹುಲ್ಮನಿ, ಅಪ್ಪು ಕಲಾಲ, ಮಂಜಣ್ಣ ಕಂಬಳಿ, ಪ್ರಕಾಶ ಮರಿಗೌಡರ, ರಮೇಶ ಪಾಟೀಲ, ಪ್ರಕಾಶ ಪಾಟೀಲ, ವಿನಾಯಕ ಕಮ್ಮಾರ, ತಿಪ್ಪೇಶ ಮಡಿವಾಳರ ಸೇರಿದಂತೆ ಗ್ರಾಮಸ್ಥರು ಮತ್ತು ಶಿಕ್ಷಕರು ಸೇರಿದಂತೆ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಂಜಣ್ಣ ಆಡಿನವರ ಪ್ರಾಸ್ತಾವಿಕವಾಗಿ ಮಾಡಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕವಿತಾ ಮರಿಗೌಡ್ರ ಸ್ವಾಗತಿಸಿದರು. ಷಣ್ಮುಖ ನಿರೂಪಿಸಿದರು. ಶಿಕ್ಷಕ ವಿನಾಯಕ
ಕಮ್ಮಾರ ವಂದಿಸಿದರು.