ರಾಣಿಬೆನ್ನೂರ: ಗ್ರಾಮಾಂತರ ಪ್ರದೇಶದ ಹಳ್ಳಿಗಳ ಜನರು ನಿರ್ಭಯವಾಗಿ ಸಂಚರಿಸಲು ರೈಲು ಕ್ರಾಸಿಂಗ್ ಗೇಟ್‌ಗೆ, ರಸ್ತೆ ಕೆಳ ಸೇತುವೆಗಳ ನಿರ್ಮಾಣಕ್ಕೆ ಅನುದಾನ ನೀಡಿರುವ ಏಕೈಕ ಕೇಂದ್ರ ಸರ್ಕಾರ ಅಂದರೆ ಅದು ನರೇಂದ್ರ ಮೋದಿ ಸರ್ಕಾರ ಪ್ರಥಮವಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಶನಿವಾರ ತಾಲೂಕಿನ ಚಳಗೇರಿ ರೈಲು ನಿಲ್ದಾಣದ ಹತ್ತಿರ ಕರೂರ ಗೇಟ್‌ನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 213ರ ಬದಲಿಗೆ ನೂತನವಾಗಿ ನಿರ್ಮಿಸಲಾದ ರಸ್ತೆ ಮೇಲ್ಸೇತುವೆ ಮತ್ತು ಲೆವೆಲ್ ಕ್ರಾಸಿಂಗ್ ಗೇಟ್ ಬದಲಿಗೆ ನಿರ್ಮಿಸಲಾದ ರಸ್ತೆ ಮೇಲ್ಸೇತುವೆಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
145 ಕೋಟಿ ಅನುದಾನದಲ್ಲಿ ಕರೂರ ಗೇಟ್‌ನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 213 ರ ಬದಲಿಗೆ ನೂತನವಾಗಿ ನಿರ್ಮಿಸಲಾದ ರಸ್ತೆ ಮೇಲ್ಸೇತುವೆ ಮತ್ತು ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 250,252,256 ರ ಬದಲಿಗೆ ನಿರ್ಮಿಸಲಾದ ರಸ್ತೆ ಕೆಳ ಸೇತುವೆಗಳ ನಿರ್ಮಾಣ, ಯಲವಿಗಿಯ ಹೊಸ ರೈಲು ನಿಲ್ದಾಣ ನಿರ್ಮಾಣದ ಅಡಿಗಲ್ಲು ಸಮಾರಂಭ, ಕರಜಗಿ ಮತ್ತು ಬ್ಯಾಡಗಿ ನಿಲ್ದಾಣಗಳ ಹೊಸ ಕಟ್ಟಡ ನಿರ್ಮಾಣದ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಗುವುದು ಎಂದರು.
ಈ ಭಾಗದ ಬಹುಜನರ ಕನಸಾದ ರಾಣಿಬೆನ್ನೂರಿಂದ ಶಿಕಾರಿಪುರ ಮಾರ್ಗವಾಗಿ ಶಿವಮೊಗ್ಗಕ್ಕೆ ಹೊಸ ರೈಲು ಮಾರ್ಗ ರಸ್ತೆ ಕಾಮಗಾರಿಗೆ ಸದ್ಯ ಚಾಲನೆ ನೀಡಲಾಗುವುದು. ಈ ಕುರಿತು ಮೋದಿಯವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಕೋಟ್ಯಂತರ ಜನರು ರೈಲಿನಲ್ಲಿಯೇ ಪ್ರಯಾಣಿಸುತ್ತಿದ್ದು, ಇದು ಸಾರ್ವಜನರಿಗೆ ಅನುಕೂಲವಾಗಿದೆ. ಅಲ್ಲದೆ ಬಡವರಿಗಂತೂ ವರದಾನವಾಗಿದೆ ಎಂದರು.
ಶಾಸಕ ನೆಹರು ಓಲೇಕಾರ, ಮಾಜಿ ಶಾಸಕ ಶಿವರಾಜ ಸಜ್ಜನ, ನೈರುತ್ಯ ರೈಲ್ವೆ ಮೈಸೂರು ವಿಭಾಗದ ವ್ಯವಸ್ಥಾಪಕಿ ಅಪರ್ಣ ಗರಗ ಮಾತನಾಡಿದರು. ಕರೂರ ಗ್ರಾಪಂ ಅಧ್ಯಕ್ಷ ಚೋಳಪ್ಪ ಕಚ್ಚರಬಿ ಅಧ್ಯಕ್ಷತೆ ವಹಿಸಿದ್ದರು. ಚಳಗೇರಿ ಗ್ರಾಪಂ ಅಧ್ಯಕ್ಷ ಕರೇಗೌಡ ದೂಳೆಹೊಳಿ, ಜಿಪಂ ಸದಸ್ಯರಾದ ಮಂಗಳಗೌರಿ ಪೂಜಾರ, ಶಿವಾನಂದಪ್ಪ ಕನ್ನಪ್ಪಳವರ, ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ ಸದಸ್ಯ ರಾಮಣ್ಣ ಬೆನ್ನೂರ, ರತ್ನವ್ವ ಇಟಗಿ, ಹೊನ್ನಪ್ಪ ಮುಡದ್ಯಾವಣ್ಣನವರ. ಡಾ| ನಾಗೇಶ ಗೌಡರ ಸೇರಿದಂತೆ ಮತ್ತಿತರರು ಇದ್ದರು.