Advertisement

ರಕ್ತದಾನ ಶ್ರೇಷ್ಠ: ಕೋಳಿವಾಡ 

03:57 PM Oct 21, 2018 | Team Udayavani |

ರಾಣಿಬೆನ್ನೂರ: ಮಾನವನ ಸರ್ವತೋಮುಖ ಅಭಿವೃದ್ಧಿಗೆ ಮಾನವ ಹಕ್ಕುಗಳಾಗಿವೆ. ದೇಶದ ಸಂವಿಧಾನದ ಕಲಂ 1 ರಿಂದ 12ರ ವರೆಗೆ ಮಾನವನ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಎಲ್ಲ ರಾಜ್ಯಗಳಲ್ಲೂ ಮಾನವ ಹಕ್ಕುಗಳು ಜಾರಿಯಲ್ಲಿವೆ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.

Advertisement

ಪ್ರವಾಸಿ ಮಂದಿರದ ಸಭಾಭವನದಲ್ಲಿ ಶನಿವಾರ ಮಾನವ ಹಕ್ಕುಗಳ ಜಿಲ್ಲಾ ಮತ್ತು ತಾಲೂಕು ಸಮಿತಿ ಘಟಕಗಳ ಉದ್ಘಾಟನಾ ಮತ್ತು ಲಯನ್ಸ್‌ ಹಾಗೂ ಲಯನೆಸ್‌ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಅಮೆರಿಕಾದಲ್ಲಿ 1948ರಲ್ಲಿಯೇ ಮಾನವ ಹಕ್ಕುಗಳು ಜಾರಿಯಾಗಿವೆ. ಪ್ರತಿಯೊಬ್ಬರೂ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನಡೆದುಕೊಳ್ಳಬೇಕು ಎಂದರು.

ದಾನಗಳಲ್ಲಿ ರಕ್ತದಾನ ಬಹಳ ಶ್ರೇಷ್ಠವಾಗಿದ್ದು, ಇದರಿಂದ ಒಂದು ಜೀವಕ್ಕೆ ಪ್ರಾಣ ಭಿಕ್ಷೆ ನೀಡಿದ ಸಂತೃಪ್ತಿ ನಿಮ್ಮದಾಗುವುದು. ಇಂದಿನ ವೈಜ್ಞಾನಿಕ ಯುಗದಲ್ಲಿ ಏನೆಲ್ಲ ಸಾಧಿ ಸಿದ್ದೇವೆ. ಆಕಾಶದಲ್ಲಿ ಹಾರಾಡುವುದು ಸೇರಿದಂತೆ ಗರ್ಭದಲ್ಲಿರುವ ಮಗುವಿನ ಹೃದಯ ಶಸ್ತ್ರಚಿಕಿತ್ಸೆ ಮಾಡಿ ಮಗುವಿನ ಪ್ರಾಣ ರಕ್ಷಿಸುವಷ್ಟು ಮುಂದುವರೆದಿದ್ದೇವೆ. ಆದರೆ, ಒಂದು ಹನಿ ರಕ್ತ ಉತ್ಪಾದಿಸುವ ಸಾಮರ್ಥ್ಯ ಯಾವ ಪ್ರಯೋಗಾಲಯದಿಂದಲೂ ಸಾಧ್ಯವಾಗಿಲ್ಲ ಎಂದರು.

ಎಲ್ಲ ಶಕ್ತಿಯನ್ನು ಮನುಷ್ಯನಿಗೆ ನೀಡಿದರೆ ನಮ್ಮನ್ನು ಮರೆಯುತ್ತಾನೆ ಎಂದು ದೇವರು ಅದೊಂದು ಶಕ್ತಿಯನ್ನು ತನ್ನ ಬಳಿ ಇಟ್ಟುಕೊಂಡಿದ್ದಾನೆ. ಹೀಗಾಗಿ ಎಂಥವರೂ ಸಹ ಆ ದೈವಕ್ಕೆ ಮೊರೆ ಇಡುತ್ತಿದ್ದಾರೆ. ದೇವರಿದ್ದಾನೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪರಮಾತ್ಮನ ಆಜ್ಞೆ ಇಲ್ಲದೆ ಒಂದು ಹುಲ್ಲಕಡ್ಡಿಯೂ ಅಲುಗಾಡದು ಎಂದು ಕೋಳಿವಾಡ ಹೇಳಿದರು.

ಮಾನವ ಹಕ್ಕುಗಳ ರಾಜ್ಯ ಸಮಿತಿ ಅಧ್ಯಕ್ಷ ಶ್ರೀನಿವಾಸಗೌಡ ಮಾತನಾಡಿ, ಮಾನವ ಹಕ್ಕುಗಳ ರಕ್ಷಣಾ ಸಮಿತಿ ರಚಿಸಿಕೊಂಡಿರುವ ಕೆಲವು ಸಂಸ್ಥೆಗಳು ಮಾನವ ಹಕ್ಕು ಉಲ್ಲಂಘನೆ ಮಾಡುವ ಮೂಲಕ ಬ್ಲಾಕ್‌ಮೇಲ್  ಮಾಡುತ್ತಿದ್ದು, ಇದು ಮೊದಲು ನಿಲ್ಲಲ್ಲಿ. ಆಗ ಮಾತ್ರ ಮಾನವ ಹಕ್ಕುಗಳಿಂದ ರಕ್ಷಣೆ ದೊರೆತಂತಾಗುವುದು. ನಾವು ಮೊದಲು ಮಾನವರಾಗಿ ಬದುಕೋಣ ಎಂದರು.

Advertisement

ರಾಜ್ಯ ಯುವ ಘಟಕದ ಅಧ್ಯಕ್ಷ ದೀಪಕ ಗೌಡ, ಜಿಲ್ಲಾ ಅಧ್ಯಕ್ಷ ನಾಗರಾಜ ಭಂಡಾರಿ, ತಾಲೂಕು ಅಧ್ಯಕ್ಷ ಪ್ರವೀಣ ಜಿ.ವಿ., ಪ್ರೊ| ಬಿ.ಬಿ. ನಂದ್ಯಾಲ, ಮಲ್ಲೇಶಪ್ಪ ಅರಕೇರಿ, ಗ್ರಾಮೀಣ ಸಿಪಿಐ ಸುರೇಶ, ಡಾ| ಅಶ್ವಿ‌ನಿ ಜಂಬಗಿ, ಗೀತಾ ಕಾಕೋಳ, ನಟಿ ಚಂಪಕಾ, ಗೀತಾ ಹುಲ್ಲತ್ತಿ, ವಿಶಾಲಕುಮಾರ ಕಲಾಲ, ಅಸ್ಲಂ ನಂದ್ಯಾಲ, ಕಿರಣಕುಮಾರ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು. ಭಾವನಾ ಸಂಗಡಿಗರು ಪ್ರಾರ್ಥಿಸಿದರು, ಪ್ರೊ| ಬಿ.ಬಿ.ನಂದ್ಯಾಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಅಸ್ಲಂ ನಂದ್ಯಾಲ ಸ್ವಾಗತಿಸಿ ವಂದಿಸಿದರು.

ಮಾನವ ಹಕ್ಕುಗಳ ರಕ್ಷಣಾ ಸಮಿತಿ ರಚಿಸಿಕೊಂಡಿರುವ ಕೆಲವು ಸಂಸ್ಥೆಗಳು ಮಾನವ ಹಕ್ಕು ಉಲ್ಲಂಘನೆ ಮಾಡುವ ಮೂಲಕ ಬ್ಲಾಕ್‌ಮೇಲ್  ಮಾಡುತ್ತಿದ್ದು, ಇದು ಮೊದಲು ನಿಲ್ಲಲ್ಲಿ. ಆಗ ಮಾತ್ರ ಮಾನವ ಹಕ್ಕುಗಳಿಂದ ರಕ್ಷಣೆ ದೊರೆತಂತಾಗುವುದು.
 ಶ್ರೀನಿವಾಸಗೌಡ, ಮಾನವ ಹಕ್ಕುಗಳ
  ರಾಜ್ಯ ಸಮಿತಿ ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next