Advertisement

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

12:51 AM May 08, 2024 | Shreeram Nayak |

ಶಿವಮೊಗ್ಗ:ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ “ಈಶ್ವರಪ್ಪ ಕಣದಿಂದ ಹಿಂದೆ ಸರಿದಿದ್ದಾರೆ’ ಎಂಬ ಪತ್ರಿಕೆಯ ತುಣಕು ಹಾಗೂ ಬ್ರೇಕಿಂಗ್‌ ನ್ಯೂಸ್‌ ಮಾದರಿಯ ವೀಡಿಯೋ ಹರಿದಾಡಿದ್ದರಿಂದ ಕಂಗೆಟ್ಟ ಈಶ್ವರಪ್ಪ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Advertisement

ಈಶ್ವರಪ್ಪ ಕಣದಿಂದ ಹಿಂದೆ ಸರಿದಿದ್ದು, ಬಿಜೆಪಿಗೆ ಮತ ಹಾಕಿ ಎಂಬರ್ಥದಲ್ಲಿ ಎಡಿಟ್‌ ಮಾಡಿದ ವೀಡಿಯೋ ಹಾಗೂ ಪತ್ರಿಕೆಯಲ್ಲಿ ಪ್ರಕಟವಾದ ರೀತಿಯ ತುಣಕಿನ ಸ್ಕ್ರೀನ್‌ಶಾಟ್‌ ಹರಿಯಬಿಡಲಾಗಿತ್ತು. ಇದರಿಂದ ಮತದಾರ‌ರಿಗೆ ಗೊಂದಲ ಉಂಟಾಗಿತ್ತು. ಮತದಾನ ಆರಂಭವಾದ ಕೆಲವೇ ನಿಮಿಷಗಳಲ್ಲಿ ಖುದ್ದು ಈಶ್ವರಪ್ಪ ಅವರೇ ಅದು ನಕಲಿ ವೀಡಿಯೋ ಎಂದು ಸ್ಪಷ್ಟನೆ ನೀಡಿದರು. ಎಷ್ಟೋ ಕಡೆ ಈಶ್ವರಪ್ಪ ಅವರೇ ಬಿಜೆಪಿಗೆ ಮತ ಹಾಕಿ ಎಂದಿದ್ದಾರೆ ಎಂದು ಹೇಳಿ ಮತ ಹಾಕಿಸಿರುವ ಘಟನೆಗಳು ನಡೆದಿವೆ.

 

Advertisement

Udayavani is now on Telegram. Click here to join our channel and stay updated with the latest news.

Next