Advertisement

ಮಹಿಳಾ ಏಷ್ಯಾಕಪ್‌ ಹಾಕಿ: ಭಾರತಕ್ಕೆ ರಾಣಿ ಸಾರಥ್ಯ

07:00 AM Oct 17, 2017 | Team Udayavani |

ನವದೆಹಲಿ: ಅ.28ರಿಂದ ಜಪಾನ್‌ನಲ್ಲಿ ಆರಂಭವಾಗಲಿರುವ ಮಹಿಳಾ ಏಷ್ಯಾ ಕಪ್‌ ಹಾಕಿ ಟೂರ್ನಿಯಲ್ಲಿ ಭಾರತ ತಂಡವನ್ನು ರಾಣಿ ರಾಂಪಾಲ್‌ ಮುನ್ನಡೆಸಲಿದ್ದಾರೆ. 18 ಆಟಗಾರ್ತಿಯರ ಭಾರತ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ಹಿರಿಯ ಗೋಲ್‌ಕೀಪರ್‌ ಸವಿತಾ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Advertisement

ಇತ್ತೀಚೆಗೆ ನಡೆದ ಯೂರೋಪ್‌ ಟೂರ್ನಿಯಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ತಂಡದಲ್ಲಿ ಕೆಲವು ಬದಲಾವಣೆ ಮಾಡಲಾಗಿತ್ತು. ಹಿರಿಯ ಆಟಗಾರ್ತಿಯರ ಜತೆಗೆ ಯುವ ಆಟಗಾರ್ತಿಯರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರಲ್ಲದೆ ಗುರ್ಜಿತ್‌ ಕೌರ್‌, ಸೋನಿಕಾ ನವಜೋತ್‌ ಕೌರ್‌, ವಂದನಾ ಕಟಾರಿಯಾ, ನಿಕ್ಕಿ ಪ್ರಧಾನ್‌ ತಂಡದಲ್ಲಿರುವ ಪ್ರಮುಖರಾಗಿದ್ದಾರೆ.

ಕೂಟದಲ್ಲಿ ಭಾರತ “ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಉಳಿದಂತೆ “ಎ’ ಗುಂಪಿನಲ್ಲಿ ಚೀನಾ, ಮಲೇಷ್ಯಾ, ಸಿಂಗಾಪುರ ತಂಡಗಳು ಸ್ಥಾನ ಪಡೆದಿವೆ. ಅ.28ಕ್ಕೆ ಭಾರತ ತಂಡ ಸಿಂಗಾಪುರ ತಂಡದ ಸವಾಲನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. 2018ರಲ್ಲಿ ನಡೆಯಲಿರುವ ವಿಶ್ವಕಪ್‌ ಹಿನ್ನೆಲೆಯಲ್ಲಿ ಭಾರತಕ್ಕೆ ಇದು ಮಹತ್ವದ ಟೂರ್ನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next