Advertisement

ವಾರ್ಷಿಕ ವಿಶ್ವ ಆ್ಯತ್ಲೀಟ್‌ ಪ್ರಶಸ್ತಿಗೆ ರಾಣಿ ರಾಮ್‌ಪಾಲ್‌ ಹೆಸರು

10:15 AM Jan 11, 2020 | Team Udayavani |

ಹೊಸದಿಲ್ಲಿ: ಭಾರತ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್‌ ವಿಶ್ವ ಹಾಕಿ ಒಕ್ಕೂಟ ನೀಡುವ ವರ್ಷದ ವಿಶ್ವ ಗೇಮ್ಸ್‌ ಆ್ಯತ್ಲೀಟ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಹಾಕಿ ಇಂಡಿಯಾ ರಾಣಿ ರಾಮ್‌ಪಾಲ್‌ ಹೆಸರನ್ನು ಶಿಫಾರಸು ಮಾಡಿದೆ.

Advertisement

ಪ್ರಶಸ್ತಿಗಾಗಿ ಆನ್‌ಲೈನ್‌ ಮೂಲಕ ಮತದಾನ ಮಾಡಲಾಗುತ್ತದೆ. ಜ. 30ರ ವರೆಗೆ ಮತದಾನ ಮಾಡಲು ಹಾಕಿ ಅಭಿಮಾನಿಗಳಿಗೆ ಅವಕಾಶವಿರುತ್ತದೆ.

ರಾಣಿಗೆ ವಿಶ್ವದ ಇತರ ರಾಷ್ಟ್ರಗಳ ಹಾಕಿ ಆಟಗಾರ್ತಿಯರಿಂದ ಸ್ಪರ್ಧೆ ಎದುರಾಗಲಿದೆ. ರಾಣಿ ರಾಮ್‌ಪಾಲ್‌ ನೇತೃತ್ವದಲ್ಲಿ ಭಾರತದ ಮಹಿಳಾ ಹಾಕಿ ತಂಡ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿರುವುದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next