Advertisement

ಭಾರತಕ್ಕೆ ರಾಣಿ ರಾಮ್‌ಪಾಲ್‌ ಸಾರಥ್ಯ

08:15 AM Feb 24, 2018 | |

ಹೊಸದಿಲ್ಲಿ: ಮುಂದಿನ ತಿಂಗಳು ಕೊರಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ವನಿತಾ ಹಾಕಿ ತಂಡವನ್ನು ಶುಕ್ರವಾರ ಪ್ರಕಟಿಸ ಲಾಗಿದೆ. ತಂಡವನ್ನು ಸ್ಟ್ರೈಕರ್‌ ರಾಣಿ ರಾಮ್‌ಪಾಲ್‌ ಮುನ್ನಡೆಸಲಿದ್ದಾರೆ. ಭಾರತ ತಂಡ ಸಿಯೋಲ್‌ನ “ಜಿಂಚುನ್‌ ನ್ಯಾಶನಲ್‌ ಆ್ಯತ್ಲೆಟಿಕ್‌ ಸೆಂಟರ್‌’ನಲ್ಲಿ ಕೊರಿಯಾ ವಿರುದ್ಧ ಮಾ. 3ರಿಂದ 12ರ ತನಕ 5 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. 

Advertisement

ಡಿಫೆಂಡರ್‌ ಸುನೀತಾ ಲಾಕ್ರಾ ತಂಡದ ಉಪನಾಯಕಿಯಾಗಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಫಾರ್ವರ್ಡ್‌ ಆಟಗಾರ್ತಿ ಪೂನಂ ರಾಣಿ ಮರಳಿದರೆ, ಪ್ರಧಾನ ಗೋಲ್‌ಕೀಪರ್‌ ಸವಿತಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಸವಿತಾ ಗೈರಲ್ಲಿ ರಜನಿ ಎಟಿಮರ್ಪು ಮತ್ತು ಸ್ವಾತಿ ಗೋಲ್‌ಕೀಪಿಂಗ್‌ ನಡೆಸಲಿದ್ದಾರೆ. ಸ್ವಾತಿ ಭಾರತ ತಂಡದ ಹೊಸ ಮುಖವಾಗಿದ್ದಾರೆ. ಅನುಭವಿ ದೀಪಿಕಾ ರಕ್ಷಣಾ ವಿಭಾಗದ ಮುಂಚೂಣಿಯಲ್ಲಿ ದ್ದಾರೆ. ಮಂಡಿ ಶಸ್ತ್ರಚಿಕಿತ್ಸೆ ಯಿಂದಾಗಿ ದೀಪಿಕಾ ಕಳೆದ ವರ್ಷ ಹೊರಗುಳಿದಿದ್ದರು.

ಐತಿಹಾಸಿಕ ಏಶ್ಯ ಕಪ್‌ ಗೆಲುವಿನ ಬಳಿಕ ಭಾರತದ ವನಿತೆಯರು ಕೈಗೊಳ್ಳುತ್ತಿರುವ ಮೊದಲ ವಿದೇಶ ಪ್ರವಾಸ ಇದಾಗಿದೆ. ನವಂಬರ್‌ನಲ್ಲಿ ನಡೆದ ಏಶ್ಯ ಕಪ್‌ ಫೈನಲ್‌ನಲ್ಲಿ ಭಾರತ 5-4ರಿಂದ ಚೀನವನ್ನು ಮಣಿಸಿತ್ತು.

ಭಾರತ ತಂಡ
ಗೋಲ್‌ಕೀಪರ್: ರಜನಿ ಎಟಿಮರ್ಪು, ಸ್ವಾತಿ. ಡಿಫೆಂಡರ್: ದೀಪಿಕಾ, ಸುನೀತಾ ಲಾಕ್ರಾ, ದೀಪ್‌ ಗ್ರೇಸ್‌ ಎಕ್ಕಾ, ಸುಮನ್‌ ದೇವಿ ತೌದಮ್‌, ಗುರ್ಜಿತ್‌ ಕೌರ್‌, ಸುಶೀಲಾ ಚಾನು. ಮಿಡ್‌ ಫೀಲ್ಡರ್: ಮೋನಿಕಾ, ನಮಿತಾ ಟೊಪ್ಪೊ, ನಿಕ್ಕಿ ಪ್ರಧಾನ್‌, ನೇಹಾ ಗೋಯಲ್‌, ಲಿಲಿಮಾ ಮಿಂಝ್, ಉದಿತಾ. ಫಾರ್ವರ್ಡ್ಸ್‌: ರಾಣಿ ರಾಮ್‌ಪಾಲ್‌, ವಂದನಾ ಕಟಾರಿಯಾ, ಲಾಲ್ರೆಂಸಿಯಾಮಿ, ನವಜೋತ್‌ ಕೌರ್‌, ನವನೀತ್‌ ಕೌರ್‌, ಪೂನಂ ರಾಣಿ.

Advertisement

Udayavani is now on Telegram. Click here to join our channel and stay updated with the latest news.

Next