Advertisement

ಚೆನ್ನಮ್ಮನ ಆದರ್ಶ ಯುವ ಪೀಳಿಗೆ ಪಾಲಿಸಲಿ

04:21 PM Oct 24, 2020 | Suhan S |

ಹಾಸನ: ಬ್ರಿಟಿಷರ ವಿರುದ್ಧ ಧ್ವನಿ ಎತ್ತುವ ಮೂಲಕ ಸ್ವಾಭಿಮಾನದ ಪ್ರತೀಕವಾಗಿರುವ ಕಿತ್ತೂರಿನ ವೀರ ಮಹಿಳೆ ರಾಣಿ ಚನ್ನಮ್ಮ ಅವರ ಆದರ್ಶ ಇಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡುವುದು ಅತ್ಯವಶ್ಯಕ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ‌ ಅವರು ಇಂದಿನ ‌ ಪೀಳಿಗೆಯಲ್ಲಿ ದೇಶಾಭಿಮಾನ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ. ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಅನೇಕ ದೇಶಭಕ್ತರ ಆದರ್ಶಗಳನ್ನು ಅವರಿಗೆ ತಿಳಿಸುವುದು ಅಗತ್ಯವಾಗಿದೆ ಎಂದ‌ರು.

ಜೀವನದಲ್ಲಿ ಅಳವಡಿಸಿಕೊಳ್ಳಿ: ರಾಣಿ ಚೆನ್ನಮ್ಮ ಅವರು ಮಹಿಳೆಯರೂ ಪುರುಷರಿಗೆ ಸರಿಸಮಾನ ಎಂಬ ಸಂದೇಶವನ್ನು ಸಾರಿ ಅದನ್ನು ಸಾಧಿಸಿ ಮಾದರಿಯಾಗಿದ್ದಾರೆ. ಜಯಂತಿಗಳು ಮಹಾ ಪುರುಷರ ಸಾಧನೆಗಳು ಹಾಗೂ ಅವರು ನಮ್ಮ ದೇಶಕ್ಕೆ ಕೊಡುಗೆಗಳನ್ನು ಮನವರಿಕೆ ಮಾಡಿಕೊಡುವುದಕ್ಕಾಗಿ ಆಚ‌ರಿಸ‌ಲಾಗುತ್ತಿದೆ. ಅವರ ‌ ಆದರ್ಶಗಳನ್ನು ಯುವ ಪೀಳಿಗೆ ಮರೆಯದೆ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಐಪಂ ಸಿಒ ಬಿ.ಎ.ಪರಮೇಶ್‌ ಮಾತನಾಡಿ, ಕೇವಲ 15 ವರ್ಷ  ವಯಸ್ಸಿ ವಿವಾಹ ‌ವಾಗಿದ್ದ ಚನ್ನಮ್ಮ, ಗಂಡ ಹಾಗೂ ಮಗುವನ್ನು ಕಳೆದುಕೊಂಡು, ದತ್ತು ಮಗುವನ್ನು ಪಡೆದು ರಾಜ್ಯದ ಆಳ್ವಿಕೆ ನಡೆಸಿದರು. ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರೂ, ಧೈರ್ಯಗೆಡದೆ ಅವರ ವಿರುದ್ಧ ಹೋರಾಡಿ ಜಯಗಳಿಸಿ, 2ನೇ ಬಾರಿಗೆ ತನ್ನವರ ಕುತಂತ್ರದಿಂದ ‌ ಬಲಿಯಾದ ಚೆನ್ನಮ್ಮನ ಕೀರ್ತಿ ಅಪಾರ. ಹಾಗಾಗಿಯೇ ಇಂದಿಗೂ ಅವರ ಹೋರಾಟ ಇತಿಹಾಸದ ಪಠ್ಯವಾಗಿದೆ ಎಂದರು.

ವೀರಶೈವ ಲಿಂಗಾಯತ ಸಮುದಾಯದ ‌ ಪ್ರಧಾನ ಕಾರ್ಯದ‌ರ್ಶಿ ಭುವನಾಕ್ಷ ಮಾತನಾಡಿ, ಬ್ರಿಟಿಷರು  ನಮ್ಮನ್ನು ದಾಸ್ಯದಲ್ಲಿಟ್ಟು  ಅವರ ವಿರುದ್ಧ ಧ್ವನಿ ಎತ್ತುವ ಸಾಹಸ ಮಾಡಿದ ಕೀರ್ತಿ ರಾಣಿ ಚೆನ್ನಮ್ಮನಿಗೆ ಸಲ್ಲುತ್ತದೆ. ಹಾಗಾಗಿ ಮುಂದಿನ ಪೀಳಿಗೆಗೆ ರಾಣಿ ಚನ್ನಮ್ಮನ ಆದರ್ಶ ದಾರಿದೀಪವಾಗಬೇಕು ಎಂದರು.

Advertisement

ವೀರ ಶೈವ ಸಮಾಜ ಮುಖಂಡ ಬಸವರಾಜು, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪಭಾಗಾಧಿಕಾರಿ ಬಿ.ಎ.ಜಗದೀಶ್‌, ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಂ.ಶಿವಣ್ಣ, ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ರಾಣಿ ಚೆನ್ನಮ್ಮನ ಹೋರಾಟ ಮಹಿಳೆಯರಿಗೆ ಮಾದರಿ :

ಹಾಸನ: ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಅಮರಳಾದ ರಾಣಿ ಚೆನ್ನಮ್ಮ ಮಹಿಳೆಯರಿಗಷ್ಟೇ ಅಲ್ಲ. ಪುರುಷರಿಗೂ ಮಾದರಿಯಾಗಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್‌.ಗುರುದೇವ್‌ ಹೇಳಿದರು.

ನಗರದ ಹೇಮಾವತಿ ಪ್ರತಿಮೆ ಮುಂಭಾಗ ವೀರಶೈವ ಲಿಂಗಾಯತ ಯುವ ಸೇನೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವೀರರಾಣಿ ಚೆನ್ನಮ್ಮ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡುಮಾತನಾಡಿದ ಅವರು, ಸಾಮಾಜಿಕವಾಗಿ, ರಾಜಕೀಯವಾಗಿ ಮಹಿಳೆಗೆ ಮುಕ್ತವಾದ ಅವಕಾಶವೇಇಲ್ಲದ ಕಾಲದಲ್ಲಿಪರಕೀಯರ ದಾಸ್ಯದ ವಿರುದ್ಧ ಸಿಡಿದೆದ್ದು, ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಅಧ್ಯಾಯವನ್ನೇ ರಾಣಿ ಚನ್ನಮ್ಮ ಅವರು ಬರೆದಿದ್ದಾರೆ. ದೇಶದ ಸ್ವಾತಂತ್ಯ ಹೋರಾಟದ ಕ್ರಾಂತಿಗೆ ಕಿಚ್ಚು ಹೊತ್ತಿಸಿದ ಪ್ರಪಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ವಿವರಿಸಿದರು.

ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ 1778 ಅಕ್ಟೋಬರ್‌ 23 ರಂದು ಜನಿಸಿದ ಮಲ್ಲಮ್ಮ ಅವರು, ಯುದ್ಧ ಕಲೆ ಹಾಗೂ ಭಾಷಾ ಪಾಂಡಿತ್ಯದಲ್ಲಿ ಪರಿಣಿತಿಯನ್ನು ಪಡೆದಿದ್ದರು. ಕಿತ್ತೂರಿನ ಮಲ್ಲಸರ್ಜ ದೇಸಾಯಿಯನ್ನು ಮದುವೆಯಾದ ಚೆನ್ನಮ್ಮ ಗಂಡನ ಅಕಾಲಿಕ ನಿಧನದ ನಂತರ ಸಂಸ್ಥಾನದ ರಾಜ್ಯ ಭಾರವನ್ನು ವಹಿಸಿಕೊಂಡು ನಾಡ ರಕ್ಷಣೆಗಾಗಿ ಹೋರಾಟ ನಡೆಸಿದ ದಿಟ್ಟ ಮಹಿಳೆ ಚೆನ್ನಮ್ಮ ಅವರು, ಕಿತ್ತೂರು ಎಂಬ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿಬ್ರಿಟಿಷರವಿರುದ್ಧಕೆಚ್ಚೆದೆಯಿಂದ ಹೋರಾಡಿ ಅಮರರಾದರು ಎಂದು ಸ್ಮರಿಸಿದರು.

ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ, ಜಯದೇವ ಸ್ವಾಮೀಜಿ, ವೀರಶೈವ ಲಿಂಗಾಯತ ಹಾಸನ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್‌, ಮುಖಂಡರಾದ ಬಿ.ಆರ್‌.ಉದಯಕುಮಾರ್‌, ಶೋಭನ್‌ ಬಾಬು, ವೀರಶೈವ ಲಿಂಗಾಯತ ಯುವ ಸೇನೆಯ ಜಿಲ್ಲಾಧ್ಯಕ್ಷ ಎನ್‌.ಲೋಕೇಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್‌.ಅವಿನಾಶ್‌, ಉಪಾ ಧ್ಯಕ್ಷಶರತ್‌ಭೂಷಣ್‌,ವೀರೇಶ್‌ಕುಮಾರ್‌, ಎಚ್‌.ಎನ್‌.ನಾಗೇಶ್‌ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next