Advertisement

ದೆಹಲಿ ಕರ್ನಾಟಕ ಸಂಘದ ವತಿಯಿಂದ ರಾಣಿ ಅಬ್ಬಕ್ಕ ಉತ್ಸವ

02:28 PM Mar 17, 2018 | |

ಮುಂಬಯಿ: ದೆಹಲಿ ಕರ್ನಾಟಕ ಸಂಘವು ದೇಶದ ರಾಜಧಾನಿಯಲ್ಲಿ ಒಂದು ವಾರಗಳ ಕಾಲ ನಿರಂತರ ಕರ್ನಾಟಕದ ರಾಣಿ ಅಬ್ಬಕ್ಕನ ಉತ್ಸವವನ್ನು ಹಲವಾರು ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿರುವುದು ಶ್ಲಾಘನೀಯ, ಮುಖ್ಯವಾಗಿ ದೇಶದ ಇತರ ಭಾಷಿಗರಿಗೆ ರಾಣಿ ಅಬ್ಬಕ್ಕನನ್ನು ಪರಿಚಯಿಸುತ್ತಿರುವುದು ಅಗತ್ಯವಾಗಿ ಆಗಬೇಕಾದ ಕೆಲಸವಾಗಿದೆ ಎಂದು ರಾಜ್ಯಸಭಾ ಸದಸ್ಯ  ಆಸ್ಕರ್‌ ಫೆರ್ನಾಂಡೀಸ್‌ ಹೇಳಿದರು.

Advertisement

ರಾಣಿ ಅಬ್ಬಕ್ಕ ಉತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘಕ್ಕೆ ಭೇಟಿ ನೀಡಿ ಅಬ್ಬಕ್ಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಬಂದಿರುವ ಕಲಾವಿದರನ್ನು ಉದ್ದೇಶಿಸಿ ಮಾತನಾಡಿ, ಅಭಿನಂದಿಸಿ ಶುಭ ಹಾರೈಸಿ ಮಾತನಾಡಿದ ಇವರು, ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿರುವ ರಾಣಿ ಅಬ್ಬಕ್ಕನ ಒಂದು ನೆನಪನ್ನು ನಾವು ಈಗ ಮಾಡುತ್ತಿದ್ದೇವೆ. ಅವರ ಶೌರ್ಯ, ಸಾಹಸ, ಪ್ರತಿಭೆ ನಮ್ಮನ್ನು ಹುರಿದುಂಬಿಸುತ್ತದೆ. ಎಲ್ಲರಿಗೂ ಕೂಡಾ ಅಬ್ಬಕ್ಕನ ಒಂದು ಸಾಹಸಮಯ ಜೀವನ ಮಾರ್ಗದರ್ಶನವಾಗಲಿ. ನಮ್ಮದೇಶ ಬಹಳ ಶಕ್ತಿಯುತವಾದ ಹಾಗೂ ಸಂಪದ್ಭರಿತವಾದ ದೇಶವಾಗಿತ್ತು. ಆದರೆ ಹೊರಗಡೆಯಿಂದ ಬಂದವರು ಸಣ್ಣ ಸಣ್ಣ ರಾಜರನ್ನೆಲ್ಲಾ ಸೇರಿಸಿ ಬೇರೆಯವರನ್ನು ಸೋಲಿಸಿ ನಮ್ಮದೇಶವನ್ನೇ ಸಂಪೂರ್ಣವಾಗಿ ಆಕ್ರಮಿಸಿದರು. ನಂತರ ನಮ್ಮ ದೇಶದ ಸಂಪತ್ತನ್ನೇ ದೋಚಿಕೊಂಡು ಹೋದರು. ನಮ್ಮ ದೇಶದ ಸಂಪತ್ತು ಎಷ್ಟಿತ್ತು ಆ ಸಮಯದಲ್ಲಿ ಎಂದು ನಾವು ವಿಜಯನಗರ ಸಾಮ್ರಾಜ್ಯದ ಒಂದು ಪುಟವನ್ನು ಓದಿದರೆ ನಮಗೆ ಅದರಲ್ಲಿ ಗೊತ್ತಾಗುತ್ತದೆ ಎಂದು ರಾಜ್ಯಸಭಾ ಸದಸ್ಯರಾದ ಆಸ್ಕರ್‌ ಫೆರ್ನಾಂಡಿಸ್‌ ಅವರು ನುಡಿದರು. ಈ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ  ವಸಂತ ಶೆಟ್ಟಿ ಬೆಳ್ಳಾರೆ, ಜಂಟಿ ಕಾರ್ಯದರ್ಶಿ ಟಿ. ಪಿ. ಬೆಳ್ಳಿಯಪ್ಪ ಹಾಗೂ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಲಾಭಿಮಾನಿಗಳು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next