Advertisement

ಕಬ್ಬನ್‌ ಪಾರ್ಕಲ್ಲಿ ರಂಗೋಲಿ ರಂಗು

01:26 PM Nov 07, 2017 | |

ಬೆಂಗಳೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ನ.12ರಂದು ಕಬ್ಬನ್‌ಪಾರ್ಕ್‌ನಲ್ಲಿ ಪರಿಸರ ಪೂರಕವಾದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಪರಿಸರ ಸ್ನೇಹಿ ರಂಗೋಲಿ ಪುಡಿ ಮತ್ತು ಬಣ್ಣಗಳನ್ನು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರೇ ತರಬೇಕು.

Advertisement

ಆದರೆ, ಭಾಗವಹಿಸುವ ಎಲ್ಲರಿಗೂ ಪ್ರೋತ್ಸಾಹ ಬಹುಮಾನ, ಪ್ರಮಾಣ ಪತ್ರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಇದೆ. ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗುವುದು. ಜನಪದ ಕಲೆಯಾದ ರಂಗೋಲಿಯನ್ನು ಪ್ರೋತ್ಸಾಹಿಸಿ, ಉತ್ತೇಜಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ ಎಂದು ಕಬ್ಬನ್‌ಪಾರ್ಕ್‌ ನಡಿಗೆದಾರರ ಸಂಘದ ಅಧ್ಯಕ್ಷ ಎಸ್‌.ಉಮೇಶ್‌ ತಿಳಿಸಿದ್ದಾರೆ.

ಹೊರ ಜಿಲ್ಲೆಗಳಿಂದ ಸ್ಪರ್ಧೆಗೆ ಆಗಮಿಸುವ ಸ್ಪರ್ಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ಹೆಸರುಗಳನ್ನು ಮುಂಚಿತವಾಗಿಯೇ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ಮೊಬೈಲ್‌: 9880356178, 8722167904 ಸಂಪರ್ಕಿಸುವಂತೆ ಕೋರಿದ್ದಾರೆ.
 
ಮಕ್ಕಳ ದಿನಾಚರಣೆ: ತೋಟಗಾರಿಕೆ ಇಲಾಖೆ, ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನ.10ರಿಂದ 14ರವರೆಗೆ ಕಬ್ಬನ್‌ಉದ್ಯಾನದಲ್ಲಿ ಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಫ‌ಲಪುಷ್ಪ ಪ್ರದರ್ಶನ ನಡೆಯಲಿದ್ದು, ವಿವಿಧ ಜನಪದ ಕಲಾ ತಂಡಗಳಿಂದ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಜತೆಗೆ ಪುಸ್ತಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ತೋಟಗಾರಿಗೆ ಸಂಬಂಧಿಸಿದ ಮಹಡಿ ಉದ್ಯಾನ (ಟೆರೇಸ್‌ ಗಾರ್ಡನ್‌), ಕಿಚನ್‌ ಗಾರ್ಡನ್‌, ಹಳ್ಳಿಗಾಡಿನ ಪರಿಚಯ, ಕುಂಬಾರಿಕೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಾಲಭವನ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next