Advertisement

ಮಲ್ಯ ಪಾತ್ರದಲ್ಲಿ ಗೋವಿಂದಾ?

06:00 AM May 05, 2018 | Team Udayavani |

ನವದೆಹಲಿ: ನಟ, ಮಾಜಿ ಸಂಸದ ಗೋವಿಂದಾ, ಸದ್ಯಕ್ಕೆ “ರಂಗೀ ಲಾ ರಾಜಾ’ ಎಂಬ ಚಿತ್ರದಲ್ಲಿ ಕರ್ನಾಟಕದ ಉದ್ಯಮಿ ವಿಜಯ್‌ ಮಲ್ಯ ಪಾತ್ರ ಮಾಡುತ್ತಿದ್ದಾರೆಂಬ ಊಹಾಪೋಹ ಎದ್ದಿದೆ.  ಇದಕ್ಕೆ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡು ತ್ತಿರುವ ಈ ಚಿತ್ರದ ಎರಡು ಸ್ಟಿಲ್ಸ್‌. ಒಂದು ಫೋಟೋದಲ್ಲಿ ಗೋವಿಂದಾ, ಮಲ್ಯರನ್ನು ಹೋಲುವ ಉದ್ಯ ಮಿಯ ಪೋಷಾಕಿನಲ್ಲಿದ್ದರೆ, ಮತ್ತೂಂದರಲ್ಲಿ ಗಡ್ಡಧಾರಿ ಸಾಧು ವಿನ ಪೋಷಾಕಿನಲ್ಲಿರು ವುದು ಪಾತ್ರಗಳ ಬಗೆಗಿನ ಕುತೂಹಲ ಹೆಚ್ಚಿಸಿದೆ. ಫೋಟೋಗಳ ಬಗ್ಗೆ ಚಿತ್ರ ತಂಡ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಬದಲಿಗೆ, ಈ ಚಿತ್ರ, ಗೋವಿಂದಾ ಅವರ ಹಿಂದಿನ ಕಾಮಿಡಿ ಚಿತ್ರಗಳಿಗಿಂತ ವಿಭಿನ್ನವಾಗಿ ಮೂಡಿಬರಲಿದೆ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next