Advertisement

ಕಲಾ ದಿಗ್ಗಜರ ನಮ್ಮ ಜಿಲ್ಲೆಗೆ ರಂಗಾಯಣ: ಡಾ|ಜಯಮಾಲಾ 

09:12 AM Dec 01, 2018 | Harsha Rao |

ಉಡುಪಿ: ನಮ್ಮ ಜಿಲ್ಲೆ ಕಲಾವಿದರ ಆಗರ. ಸಾಂಸ್ಕೃತಿಕ ಮತ್ತು ಕಲಾಕ್ಷೇತ್ರದಲ್ಲಿ ಹಲವಾರು ದಿಗ್ಗಜರು ಇಲ್ಲಿ ಜನ್ಮ ತಾಳಿ¨ªಾರೆ. ಇಲ್ಲಿನ ಆವಶ್ಯಕತೆಯನ್ನು ಮನಗಂಡು ರಂಗಾಯಣವನ್ನು ಇಲ್ಲಿಗೆ ನೀಡಲಾಗಿದೆ ಎಂದು ಸಚಿವೆ ಡಾ| ಜಯಮಾಲಾ ಹೇಳಿದರು. 

Advertisement

ಅವರು ಶುಕ್ರವಾರ ಆದಿ ಉಡುಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತಗಳ ಆಶ್ರಯದಲ್ಲಿ ನಡೆದ ಜಿÇÉಾ ರಂಗಮಂದಿರ ಮತ್ತು ರಂಗಾಯಣದ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿ, ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಉಡುಪಿ ಜಿಲ್ಲೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಸಾಧಕರು ಸಿಕ್ಕಿದ್ದರು. ಇಂತಹ ಕಲಾವಿದರ, ಕಲಾಪೋಷಕರ ಜಿಲ್ಲೆಗೆ ರಂಗಮಂದಿರ ಮತ್ತು ರಂಗಾಯಣದ ಆವಶ್ಯಕತೆ ಇದೆ ಎನ್ನುವುದನ್ನು ಮನಗಂಡು ಇವನ್ನು ನೀಡಲಾಗಿದೆ. ಇವುಗಳ ಮೂಲಕ ಜಿಲ್ಲೆಯ ಕಲಾ ಪ್ರಪಂಚಕ್ಕೆ ಹೊಸ ಆಯಾಮ ಸಿಗಲಿದೆ ಎಂದರು.

ಜಿÇÉಾ ರಂಗಮಂದಿರಕ್ಕೆ 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈಗಾಗಲೇ 50 ಲ.ರೂ.ವನ್ನು ಜಿÇÉಾಡಳಿತ ಬಿಡುಗಡೆಗೊಳಿಸಿದೆ. ರಂಗಾಯಣಕ್ಕೆ 5 ಕೋ.ರೂ. ಅಂದಾಜು ವೆಚ್ಚವನ್ನು ಇರಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದರು.

ರಂಗಕರ್ಮಿ ಗೋಪಾಲಕೃಷ್ಣ ನಾಯಿರಿ ಮಾತನಾಡಿ, ನಮ್ಮ ನಾಟಕಗಳು ತಾಲೀಮು ಇಲ್ಲದೆ ಸೋಲುತ್ತಿವೆ. ರಂಗಾಯಣದಲ್ಲಿ ಸರಿ ಯಾದ ತಾಲೀಮು ಕೊಠಡಿ ಅಗತ್ಯ ಎಂದು ಸಚಿವರಲ್ಲಿ ಮನವಿ ಮಾಡಿದರು. 
ರಂಗಾಯಣಕ್ಕೆಂದೇ ನಿಗದಿಯಾದ ಸ್ಥಳದಲ್ಲಿ ಅದು ನಿರ್ಮಾಣವಾಗಲಿದೆ. ರಂಗಮಂದಿರಕ್ಕೆ ಇಲ್ಲಿಯೇ ಪಕ್ಕದಲ್ಲಿ ಇನ್ನೊಂದು ಸ್ಥಳವನ್ನು ಜಿಲ್ಲಾಧಿಕಾರಿ ಸೂಚಿಸಿದ್ದು, ಅಲ್ಲಿ ನಿರ್ಮಿಸುವ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ರಂಗಾಯಣ ನಿರ್ದೇಶಕ ಮಹೇಶ್‌ ಪಾಟೀಲ್‌, ರಂಗಸಮಾಜದ ಸದಸ್ಯರಾದ ಎಲ್‌. ಕೃಷ್ಣಪ್ಪ, ಉಮಾ ಬಾರಿಗಿಡದ, ಶ್ರೀಪಾದ ಭಟ್‌, ಸಹನಾ ಪಿಂಜಾರ, ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಮುಖ್ಯಸ್ಥ ಕೆರೆಮನೆ ಶಿವಾನಂದ ಹೆಗಡೆ, ನಾಟಕ ಅಕಾಡೆಮಿಯ ಸದಸ್ಯ ಬಾಸುಮ ಕೊಡಗು ಉಪಸ್ಥಿತರಿದ್ದರು. 

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಆರ್‌. ಚಂದ್ರಶೇಖರ್‌ ಸ್ವಾಗತಿಸಿದರು. ಇಲಾಖಾಸಿಬಂದಿ ಪೂರ್ಣಿಮಾ ನಿರೂಪಿಸಿದರು. 

ಗಡ್ಕರಿ ಬಳಿಯೇ ಹೋಗಬೇಕು
ಟೋಲ್‌ ಸಂಗ್ರಹ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸಚಿವ ಗಡ್ಕರಿ ಹತ್ತಿರ ಹೋಗಬೇಕು. ಸಚಿವ ರೇವಣ್ಣ ಅವರನ್ನೂ ಸೇರಿಸಿಕೊಂಡು ಮನವಿ ಮಾಡುವುದು. ಸರ್ವಿಸ್‌ ರಸ್ತೆ ಪೂರ್ಣ ಗೊಳಿಸುವ ವರೆಗೆ ಟೋಲ್‌ ವಿನಾಯಿತಿ 
ನೀಡುವಂತೆ ಕೇಳಿಕೊಳ್ಳಲಾಗುವುದು ಎಂದರು. 

ವಿಷ್ಣು ಸ್ಮಾರಕ; ಸಿಎಂ ಅಸಹಾಯಕ: ಜಯಮಾಲಾ
ನಟ ಸಾರ್ವಭೌಮ ಡಾ| ವಿಷ್ಣುವರ್ಧನ್‌ ಸ್ಮಾರಕದ ವಿಚಾರದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಅಸಹಾಯಕರಾಗಿದ್ದಾರೆ ಎಂದು ಸಚಿವೆ ಜಯಮಾಲಾ ಹೇಳಿದರು. 

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೂ ವಿಷ್ಣು ಸ್ಮಾರಕ ನಿರ್ಮಾಣದ ಇಚ್ಛೆ ಇದೆ. ವಿಷ್ಣು ಪತ್ನಿ ಭಾರತಿಯವರ ಬೇಸರವೂ ನಮಗೆ ತಿಳಿದಿದೆ. ವಿಷ್ಣುವರ್ಧನ್‌ ಹುಟ್ಟಿ, ಬೆಳೆದು, ಕೊನೆಯುಸಿರೆಳೆದ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಭಾರತಿ ಅವರ ಹೆಬ್ಬಯಕೆ. ಆದರೆ ಸ್ಥಳದ ಸಮಸ್ಯೆಯಿಂದಾಗಿ ಹಿನ್ನೆಡೆಯಾಗಿದೆ. ಇದನ್ನು ಪರಿಹರಿಸಲು ಸಾಕಷ್ಟು ಪ್ರಯತ್ನಗಳು ನಡೆದಿದ್ದು, ಭಾರತಿಯವರ ಅಭಿಪ್ರಾಯವನ್ನು ಪತ್ರರೂಪದಲ್ಲಿ ಪಡೆದಿದ್ದಾರೆ ಎಂದರು. 

ಅಂಬರೀಷ್‌ ಅವರ ಅಂತಿಮ ದರ್ಶನಕ್ಕೆ ನಟಿ ರಮ್ಯಾ ಗೈರು ಹಾಜರಾಗಿರುವ ಕುರಿತು ಪ್ರಶ್ನಿಸಿದಾಗ, ಇದಕ್ಕೆ  ರಾಜಕೀಯ ಕಾರಣಗಳು ಇರಲಿಕ್ಕಿಲ್ಲ. ಆರೋಗ್ಯ ಸರಿ ಇಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ವೈಕುಂಠ ಸಮಾರಾಧನೆಗೆ ಬರಬಹುದು ಎಂದು ಪ್ರತಿಕ್ರಿಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next