Advertisement
ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯರು ಒದಗಿಸಿದ ವೇಷಭೂಷಣ ತಂದು ಅವರ ಮಾರ್ಗದರ್ಶನದಲ್ಲೇ ಸ್ವತಃ ಬಣ್ಣಗಾರಿಕೆ, ವೇಷ ಮಾಡಿಕೊಂಡರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ರಾಜೇಂದ್ರ ವಾಂತಿಚ್ಚಾಲು, ಶ್ರೀಹರಿ ಮವ್ವಾರು, ಗಿರೀಶ ಅವರು ಸಹಕರಿಸಿದರು. ‘ಜಾಂಬವತೀ ಕಲ್ಯಾಣ’ ಆಖ್ಯಾನದ ಪ್ರದರ್ಶನದಲ್ಲಿ ಬಲರಾಮನಾಗಿ ಧ್ಯಾನ್ ರೈ, ನಾರದ ಮತ್ತು ಜಾಂಬವತಿಯಾಗಿ ಶ್ರೀಜಾ ಉದನೇಶ್, ಕೃಷ್ಣನಾಗಿ ಅಭಿಜ್ಞಾ ಭಟ್, ಜಾಂಬವಂತನಾಗಿ ಶಶಾಂಕ ಮೈರ್ಕಳ ತಮ್ಮ ಪ್ರತಿಭೆ ಮೆರೆದರು. ಹಿಮ್ಮೇಳದಲ್ಲಿ ಭಾಗವತರಾಗಿ ವಾಸುದೇವ ಕಲ್ಲೂರಾಯ, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ, ಮದ್ದಳೆಯಲ್ಲಿ ರಂಗಸಿರಿಯ ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಹಾಗೂ ಚಕ್ರತಾಳದಲ್ಲಿ ಶ್ರೀಶ ಕುಮಾರ ಪಂಜಿತ್ತಡ್ಕ ಸಹಕರಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ತಂಡಕ್ಕೆ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು. Advertisement
ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ರಂಗಸಿರಿ ಯಕ್ಷಗಾನ
10:55 AM Apr 14, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.