Advertisement

ಕೆಆರ್‌ಎಸ್‌, ರಂಗನತಿಟ್ಟು, ಬಲ-ಎಡಮುರಿಗೆ ಪ್ರವಾಸಿಗರ ನಿಷೇಧ

05:31 PM Aug 08, 2021 | Team Udayavani |

ಶ್ರೀರಂಗಪಟ್ಟಣ: ಕೋವಿಡ್‌-19ರ 3ನೇ ಅಲೆ ತಡೆಗಟ್ಟಲು ವಿಶ್ವವಿಖ್ಯಾತ ಕೆಆರ್‌ಎಸ್‌ ಬೃಂದಾವನ ಸೇರಿ ಇತರೆ ಪ್ರವಾಸಿ ತಾಣಗಳಿಗೆ ಶನಿವಾರ
ಹಾಗೂ ಭಾನುವಾರ ಸೇರಿ ಇತರೆ ರಜಾದಿನಗಳಲ್ಲಿ ಪ್ರವೇಶ ನಿಷೇಧ ಮಾಡಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಹಶೀಲ್ದಾರ್‌ ಶ್ವೇತಾ ತಿಳಿಸಿದ್ದಾರೆ.

Advertisement

ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಕೆಆರ್‌ಎಸ್‌ ಬೃಂದಾವನ,ಬಲಮುರಿ ಎಡಮುರಿ, ಹಾಗೂ ರಂಗನತಿಟ್ಟು ಪಕ್ಷಿಧಾಮಕ್ಕೆ ಈ ನಿಯಮ
ಜಾರಿ ಮಾಡಲಾಗಿದೆ.

ಮುಂಜಾಗ್ರತೆ: ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ನೈಟ್‌ ಕರ್ಫ್ಯೂ ಜಾರಿಯಲ್ಲಿರುವುದರಿಂದಮೈಸೂರಿಗೆಹತ್ತಿರವಾದ
ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಮುಂಜಾಗ್ರತೆಯಾಗಿ ಈ ನಿಯಮ ಜಾರಿ ಮಾಡಿ
ಜಾಗ್ರತೆ ವಹಿಸಲಾಗಿದೆ.

ಇದನ್ನೂ ಓದಿ:ಮತ್ತೆ ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ : ಸುಖಪ್ರಿತ ಕೌರ್

ದೇಗುಲಗಳಿಗೂ ಪ್ರವೇಶ ನಿಷೇಧ: ಕಳೆದ ವಾರ ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ, ಶ್ರೀರಂಗನಾಥ ಹಾಗೂ ಆರತಿ ಉಕ್ಕಡ ದೇವಾಲಯಗಳಿಗೂ ಈ ನಿಯಮ ಅನ್ವಯ ಮಾಡಿ ಜಾರಿ ಮಾಡಲಾಗಿತ್ತು. ಅದರಂತೆ ‌ ಪ್ರವಾಸಿ ತಾಣಗಳಿಗೂ ನಿಯಮ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.

Advertisement

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೂ ಎಲ್ಲಾ ಪ್ರವಾಸಿ ತಾಣಗಳ ಬಳಿ ಮುನ್ನೆಚ್ಚರಿಕೆಯಾಗಿ ಈ ಮುಂಚೆ ನೋಟೀಸ್‌ಗಳನ್ನು ಪ್ರವೇಶ ದ್ವಾರದಲ್ಲಿ ಅಂಟಿಸಿ ಇತರ ಎಲ್ಲಾ ಕಚೇರಿಗಳಿಗೂ ನಿಷೇಧದ ಪ್ರತಿ ಮಾಡಿರುವುದಾಗಿ ಕಾವೇರಿ ನೀರಾವರಿ ನಿಗಮದ ಮಂಡ್ಯ ಜಿಲ್ಲೆಯ ಅಧೀಕ್ಷಕ
ಅಭಿಯಂತರ ವಿಜಯಕುಮಾರ್‌ ತಿಳಿಸಿದ್ದಾರೆ.

ಬಿಕೋ ಎನ್ನುತ್ತಿವೆ: ಪ್ರವೇಶ ನಿಷೇಧ ಮಾಡಿದ್ದ ರಿಂದ ಪ್ರವಾಸಿ ತಾಣಗಳಾದ ಕೆಆರ್‌ಎಸ್‌ ಬೃಂದಾವನ, ರಂಗನತಿಟ್ಟು ಪಕ್ಷಿಧಾಮ, ಬಲಮುರಿ, ಎಡಮುರಿ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next