Advertisement

ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಅರಣ್ಯಕ್ಕೆ ದುಷ್ಕರ್ಮಿಗಳಿಂದ ಬೆಂಕಿ

10:27 PM Jan 30, 2024 | Team Udayavani |

ಕುಣಿಗಲ್: ತಾಲೂಕಿ ಪ್ರಸಿದ್ದ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಅರಣ್ಯ ಪ್ರದೇಶಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಕಾರಣ ಅರಣ್ಯ ಪ್ರದೇಶದ ಹಲವು ಭಾಗ ಹತ್ತಿ ಹುರಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

Advertisement

ಪಟ್ಟಣದಿಂದ ಸುಮಾರು ಏಳು ಕಿ.ಮೀ ದೂರದಲ್ಲಿ ಇರುವ ಮೆಣಸಿನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡತ್ತೇ ಇರುವ ಶ್ರೀ ರಂಗನಾಥಸ್ವಾಮಿ ಶ್ರೀ ಕ್ಷೇತ್ರದ ಅರಣ್ಯಕ್ಕೆ ಯಾರೋ ದುಷ್ಟಕರ್ಮಿಗಳು ಬೆಂಕಿ ಇಟ್ಟ ಕಾರಣ ಅರಣ್ಯದ ಹುಲ್ಲು, ಸಣ್ಣ ಪುಟ್ಟ ಗಿಡ ಗೆಂಟೆಗಳು ಸುಟ್ಟುಹೋಗಿವೆ. ವಿಷಯ ತಿಳಿದ ಅರಣ್ಯ ಸಿಬಂದಿಗಳು ಸ್ಥಳಕ್ಕೆ ದೌಡಾಯಿಸಿ, ಬೆಂಕಿಯನ್ನು ನಂದಿಸಿದ್ದಾರೆ.

ಈ ಪ್ರದೇಶದಲ್ಲಿ ಚಿರತೆ, ಮೊಲ‌, ನವಿಲು, ಹಾವುಗಳು ಸೇರಿದಂತೆ, ಹಲವಾರು ಪ್ರಾಣಿಗಳು ಇಲ್ಲಿ ವಾಸ ಮಾಡುತ್ತಿವೆ, ಬೆಂಕಿ ಕಾಣಿಸಿಕೊಂಡಿದ್ದರಿಂದ ವನ್ಯ ಜೀವಿಗಳು ಭಯ ಭೀತವಾಗಿವೆ.

ಬೆಟ್ಟದ ಅಕ್ಕ ಪಕ್ಕ ಪ್ರದೇಶದ ಕುರಿಗಾಯಿಗಳು ಹೊಸ ಹುಲ್ಲಿಗಾಗಿ ಒಣಗಿದ ಹುಲ್ಲಿಗೆ ಈ ರೀತಿ ಬೆಂಕಿ ಹಚ್ಚಿದ್ದಾರೆ, ನಮ್ಮ ಅರಣ್ಯ ಸಿಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ ವನ್ಯ ಜೀವಿಗಳಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಹುಲಿಯೂರುದುರ್ಗ ಆರ್ ಎಫ್ ಓ ಜಗದೀಶ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next