Advertisement
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಅರ್ಜುನ್’ ಚಿತ್ರವನ್ನು ನಿರ್ದೇಶಿಸಿದ್ದ ಶಾಹುರಾಜ್ ಶಿಂಧೆ “ರಂಗ ಮಂದಿರ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ, ಚಿತ್ರದ ಆರಂಭದಲ್ಲಿ ಅತ್ಯಂತ ಸರಳವಾಗಿ ಮುಹೂರ್ತವನ್ನು ನಡೆಸಿದ ಚಿತ್ರತಂಡ, ಮುಹೂರ್ತದ ಕಾರ್ಯಕ್ರಮಕ್ಕೆ ತಗುಲುವ ವೆಚ್ಚವನ್ನು “ಕೊಡಗು ಅತಿವೃಷ್ಠಿ ಸಂತ್ರಸ್ಥರ ಪರಿಹಾರ ನಿಧಿ’ಗೆ ದೇಣಿಗೆಯಾಗಿ ನೀಡಿದೆ.
ನಾಯಕಿಯಾಗುತ್ತಿದ್ದಾರೆ. ಉಳಿದಂತೆ ತಾಯಿಯ ಪಾತ್ರದಲ್ಲಿ ವೀಣಾ ಸುಂದರ್, ಕುಡುಕನಾಗಿ ತಬಲ ನಾಣಿ, ಧರ್ಮಾಧಿಕಾರಿಯಾಗಿ ಸುಮನ್, ರಾಜಕಾರಣಿಯಾಗಿ ಅವಿನಾಶ್ ಇತರೆ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ರಂಗಾಯಣ ರಘು, ಅರುಣಾ ಬಾಲರಾಜ್, ವಿಜಯ್ ಚೆಂಡೂರ್, ಮೈಕೋ ನಾಗರಾಜ್, ಕಾರ್ತಿಕ್,ನಾಗೇಶ್, ರಾಜ್‌ದೀಪಕ್ ಶೆಟ್ಟಿ, ರಾಕ್‌ಲೈನ್ ಸುಧಾಕರ್, ವಿಕ್ಟರಿ ವಾಸು ಮೊದಲಾದ 80ಕ್ಕೂ ಹೆಚ್ಚು ಕಲಾವಿದರು “ರಂಗ ಮಂದಿರ’ದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶಾಹುರಾಜ್ ಶಿಂಧೆ, “ವಿಲಿಯಂ ಶೇಕ್‌ಸ್ಪಿಯರ್ ಹೇಳುವಂತೆ ಇಡೀ ಪ್ರಪಂಚವೇ ಒಂದು ರಂಗ ಮಂದಿರ ಇದ್ದಂತೆ. ಇಲ್ಲಿ ಆಡುವ ಪ ದಗಳೇ ರಂಗ ಗೀತೆಗಳು ಇದ್ದಂತೆ. ಪ್ರತಿದಿನ ನಾವು ಅನೇಕ ಜನರೊಂದಿಗೆ ಓಡಾಡುತ್ತೇವೆ. ಆದರೆ ನಮಗೆ ಅವರೆಲ್ಲರ ಪರಿಚಯವಿರುವುದಿಲ್ಲ. ಇಲ್ಲಿ ಮುಂದೆ ಏನು ನಡೆಯುತ್ತದೆ, ಹಿಂದೆ ಏನು ನಡೆಯುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ನಮಗೆ ಗೊತ್ತಿಲ್ಲದಂತೆ ಇನ್ನೊಬ್ಬರೊಂದಿಗೆ ಸಂಬಂಧ ಬೆಳೆದಿರುತ್ತದೆ. ಅದು
ಹೇಗೆ..? ಏನು..? ಎಂಬುದೇ ಚಿತ್ರದ ಕಥೆ. “ರಂಗ ಮಂದಿರ’ದಲ್ಲಿ ಮಾನವ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಟ್ಟಿದ್ದು, ಒಂದು ಉತ್ತಮ ಸಂದೇಶ ಕೂಡ ಚಿತ್ರದಲ್ಲಿದೆ’ ಎಂದರು.
Related Articles
Advertisement
ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಜೆಸ್ಸಿ ಗಿಫ್ಟ್ ಹಾಡುಗಳಿಗೆ ಸಂಗೀತವಿದೆ. ಈಗಾಗಲೆ ಚಿತ್ರದ ಅರ್ಧದಷ್ಟು ಚಿತ್ರೀಕರಣ ಮುಗಿದಿದ್ದು, ಬಾಕಿಯಿರುವ ಚಿತ್ರದ ಗೀತೆಗಳನ್ನು ವಿದೇಶದಲ್ಲಿ ಚಿತ್ರೀಕರಿಸಲು ಯೋಜಿಸಲಾಗಿದೆ.