ನವಿ ಮುಂಬಯಿ: ರಂಗ ಭೂಮಿ ಫೈನ್‌ಆರ್ಟ್ಸ್ ಇದರ 26 ನೇ ವಾರ್ಷಿಕ ಮಹಾ ಸಭೆಯು ಜು. 23 ರಂದು ಪೂರ್ವಾಹ್ನ ನೆರೂಲ್ ಶ್ರೀ ಶನೀಶ್ವರ ಮಂದಿರದ ಕಿರು ಸಭಾಗೃಹದಲ್ಲಿ ಸಂಸ್ಥೆಯ ಅಧ್ಯಕ್ಷ ವಿ. ಕೆ. ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ ಕಳೆದ ಮಹಾ ಸಭೆಯ ಮುಖ್ಯಾಂಶಗಳು, ವರ್ಷದ ವಾರ್ಷಿಕ ವರದಿ ಮತ್ತು 2016-17 ಸಾಲಿನ ಲೆಕ್ಕ ಪತ್ರ ಮಂಡನೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ಸದಸ್ಯರಿಂದ ಮಂಜೂರು ಪಡೆಯಲಾಯಿತು. 2017-2018 ನೇ ಸಾಲಿನ ಲೆಕ್ಕ ಪರಿಶೋಧಕರಾಗಿ ಎಂ. ಆರ್. ಅಮೀನ್ ಚಾರ್ಟೆಡ್ ಅಕೌಂಟೆಂಟ್ಸ್ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು. ಅನಂತರ ನಡೆದ ಮೂರು ವರ್ಷದ ಅವಧಿಗೆ ಆಡಳಿತ ಮಂಡಳಿ ಆಯ್ಕೆಯ ಚುನಾವಣಾ ಪ್ರಕ್ರಿಯೆಯಲ್ಲಿ ಸಂಸ್ಥೆಯ ಹಿರಿಯ ಸದಸ್ಯ ತಾರಾನಾಥ್ ಶೆಟ್ಟಿ ಪುತ್ತೂರು ಇವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ನೇಮಿಸಲಾಯಿತು.
ಜಗದೀಶ್ ಶೆಟ್ಟಿ ಪನ್ವೇಲ್ ಅವರು ಉಪಾಧ್ಯಕ್ಷರಾಗಿ ನೇಮಕಗೊಂಡರು. ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರೆ ರೂಪಾ ಶೆಟ್ಟಿ ಕೋಶಾಧಿಕಾರಿಯಾಗಿ, ಜತೆ ಕಾರ್ಯದರ್ಶಿಯಾಗಿ ತಾರಾ ಆರ್. ಬಂಗೇರ, ಜೊತೆ ಕೋಶಾಧಿಕಾರಿಯಾಗಿ ಚಂದ್ರಹಾಸ್ ಶೆಟ್ಟಿ ದೆಪ್ಪುಣಿಗುತ್ತು ಅವರು ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ವಿ. ಕೆ. ಸುವರ್ಣ ಪಡುಬಿದ್ರಿ, ಅದ್ಯಪಾಡಿಗುತ್ತು ಕರುಣಾಕರ ಎಸ್. ಆಳ್ವ, ಅನಿಲ್ ಕುಮಾರ್ ಹೆಗ್ಡೆ ಪೆರ್ಡೂರು, ಜಗದೀಶ್ ಶೆಟ್ಟಿ ಬೆಳ್ಕಲೆ, ರಘು ಮೂಲ್ಯ, ಸತೀಶ್ ಎರ್ಮಾಳ್, ಕೃಷ್ಣ ಕೋಟ್ಯಾನ್, ರಘುನಾಥ್ ಬಂಗೇರ, ನಿತೇಶ್ ಶೆಟ್ಟಿ, ಉಷಾ ಶೆಟ್ಟಿ, ಗೀತಾ ಶೆಟ್ಟಿ, ತಾರಾ ಕೆ. ಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು.
ಚುನಾವಣಾ ಅಧಿಕಾರಿ ಪ್ರಭಾಕರ್ ಪೂಜಾರಿ ಸದಸ್ಯರ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಮಹಾ ಸಭೆಯ ವೇದಿಕೆಯಲ್ಲಿ ಶ್ರೀ ಶನೀಶ್ವರ ಮಂದಿರ ನೆರೂಲ್ ಇದರ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಮೂಕಾಂಬಿಕ ಮಂದಿರ ಘನ್ಸೋಲಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಕೋಟ್ಯಾನ್, ಅಯ್ಯಪ್ಪ ಭಕ್ತ ವೃಂದ ಚಾರಿಟೆಬಲ… ಟ್ರಸ್ಟ್ ನೆರೂಲ್ ಇದರ ಕಾರ್ಯಾಧ್ಯಕ್ಷ ಕೃಷ್ಣ ಎಂ. ಪೂಜಾರಿ, ಸಂಸ್ಥೆಯ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಅನಿಲ್ ಕುಮಾರ್ ಹೆಗ್ಡೆ, ಕಾರ್ಯದರ್ಶಿ ಜಗದೀಶ್ ಶೆಟ್ಟಿ ಪನ್ವೇಲ್, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ, ತಾರಾನಾಥ್ ಶೆಟ್ಟಿ ಪುತ್ತೂರು, ಕೋಶಾಧಿಕಾರಿ ಪ್ರಭಾಕರ್ ಹೆಗ್ಡೆ, ಜೊತೆ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ದೆಪ್ಪುಣಿಗುತ್ತು ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಶನೀಶ್ವರ ಮಂದಿರ ಇದರ ವಿಶ್ವಸ್ಥರಾದ ಕರುಣಾಕರ್ ಆಳ್ವ, ವಿಶ್ವನಾಥ್ ಪೂಜಾರಿ, ಪುನೀತ್ ಕುಮಾರ್ ಶೆಟ್ಟಿ, ಮಣಿಕಂಠಂ ಸೇವಾ ಸಂಘಂ ನೆರೂಲ್ ಇದರ ಅಧ್ಯಕ್ಷ ಕಿಶೋರ್ ಎಂ. ಶೆಟ್ಟಿ, ತುಳು ಕೂಟ ಐರೋಲಿ ಇದರ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರಿ, ತುಳು ಕನ್ನಡ -ವೆಲ್ಫೆàರ್ ಅಸೋಸಿಯೇಶನ್ ಕಾಮೋಟೆ ಇದರ ಅಧ್ಯಕ್ಷ ರವಿ ಪೂಜಾರಿ ಬೋಳ, ಹಿರಿಯರಾದ ಕೆ. ಕೆ. ಶೆಟ್ಟಿ, ಹರೀಶ್ ಪೂಜಾರಿ, ಬಂಟ್ಸ್ ಸಂಘ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ಅಧ್ಯಕ್ಷೆ ಗುಣಾವತಿ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದು ತಮ್ಮ ಸಲಹೆ ಸೂಚನೆ ನೀಡಿದರು. ತಾರಾ ಬಂಗೇರ ಇವರ ಪ್ರಾರ್ಥನೆಯೊಂದಿಗೆ ಮಹಾ ಸಭೆಯು ಪ್ರಾರಂಭಗೊಂಡಿತು. ಕಾರ್ಯದರ್ಶಿ ಜಗದೀಶ್ ಶೆಟ್ಟಿ ಪನ್ವೇಲ…ವಂದಿಸಿದರು. ವಿ. ಕೆ. ಸುವರ್ಣ ಅವರ ಪ್ರಾಯೋಜಕತ್ವದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.