ಮಾಡುವುದರೊಂದಿಗೆ ಭಗವಂತನ ಕೃಪೆಗೆ ಪಾತ್ರರಾಗಿ ಮೋಕ್ಷಕ್ಕೆ ಅರ್ಹರಾಗಬೇಕೆಂದು ಗುರು ನಾಗರಾಜಾನಂದ ಸ್ವಾಮೀಜಿ ಹೇಳಿದರು.
Advertisement
ಸುಕ್ಷೇತ್ರ ತಾಲೂಕಿನ ಖಂಡೇರಾಯನಹಳ್ಳಿಯ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ನಡೆದ ಶ್ರೀ ಸಿದ್ಧಾರೂಢರ ಕಥಾಮೃತ ಪುರಾಣ ಪ್ರವಚನ ಮಂಗಲೋತ್ಸವದ ಅಂಗವಾಗಿ ಕಥಾಮೃತ ಪಾಲಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅರಿವಿನ ಜನ್ಮ ಪಡೆದಿರುವ ಸಕಲ ಮಾನವರು ಜೀವನದ ಮುಕ್ತಿಗಾಗಿ ಓಂ ನಮಃ ಶಿವಾಯ ಮಂತ್ರ ಪಠಣೆ ಸುಲಭ ಉಪಾಯವಾಗಿದೆ ಎಂದು ನುಡಿದರು.
ಕಾಮಧೇನುವಿನಂತೆ ಸಕಲ ಭೋಗ, ಭಾಗ್ಯಗಳು ಲಭಿಸುತ್ತವೆ ಎಂದರು. ನಾಲ್ಕು ವೇದಗಳ ಸಾರವೇ ಪಂಚಾಕ್ಷರಿ ಮಂತ್ರ. 7
ಕೋಟಿ ಮಂತ್ರಗಳಲ್ಲಿ ಬೀಜ ಮಂತ್ರವಾಗಿದೆ. ಇದನ್ನು ಜಪಿಸಲು ಸರ್ವರೂ ಅರ್ಹರಿದ್ದು, ಗೌಪ್ಯವಾಗಿದ್ದ ಈ ಉಪಾಯವನ್ನು ಶ್ರೀ ಸಿದ್ಧಾರೂಢರು ಕರುಣಿಸಿದ್ದಾರೆ. ಸುಖ ಪುಣ್ಯದ ಫಲವಾದರೆ, ದುಃಖ ಪಾಪದ ಫಲ. ದುಃಖವೆಂಬ ಸಂಸಾರ ಸಾಗರ ದಾಟಲು ಅಂಬಿಗನಂತೆ ಓಂ ನಮಃ ಶಿವಾಯ ಮಂತ್ರ ಸಹಾಯ ಮಾಡುತ್ತದೆ ಎಂದು ಶ್ರೀಗಳು ನುಡಿದರು. ಶ್ರೀ ಸದ್ಗುರು ಸಿದ್ಧಾರೂಢರ ಕಥಾಮೃತ ಪುರಾಣ ಓದುವುದರಿಂದ ಮತ್ತು ಕೇಳುವುದರಿಂದ ಧರ್ಮ, ಅರ್ಥ, ಕಾಮ, ಮೋಕ್ಷಗಳು ಸಿದ್ಧಿಸುವವು. ಈ ಪುರಾಣ ನಾಲ್ಕು ವೇದಗಳ, 6 ಶಾಸ್ತ್ರ, 18 ಪುರಾಣ, 25 ಆಗಮಗಳನ್ನು ಒಳಗೊಂಡಿರುವ ಪವಿತ್ರ ಚರಿತ್ರೆಯಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲಿ ಮನೆ ಮಾಡಿಕೊಂಡಿರುವ ದುಷ್ಟ ಗುಣಗಳನ್ನು ಸಂಹರಿಸಿ ಸುಗುಣವಂತರನ್ನಾಗಿಸುವ ಮಾರ್ಗವೇ ಸತ್ಸಂಗ. ಇಂತಹ ಸುಲಭ ಉಪಾಯವನ್ನು ಸಿದ್ಧಾರೂಢರು ಕರುಣಿಸಿದ್ದಾರೆ. ಅವರ ಕಥಾಮೃತವನ್ನು ತಿಂಗಳ ಪರ್ಯಂತ ಶ್ರವಣ ಮಾಡಿದ ನೀವೇ ಪುಣ್ಯವಂತರು ಎಂದು ಹೇಳಿದರು.
Related Articles
ಜಯಪ್ಪ ಚಳಗೇರಿ, ವಿದ್ಯಾಧರ ಹೆಡಿಯಾಲ, ಮಹಿಳೆಯರು ಮತ್ತು ಮಕ್ಕಳು ಮತ್ತಿತರರು ಇದ್ದರು.
Advertisement
ಶ್ರೀ ಸದ್ಗುರು ಸಿದ್ಧಾರೂಢರ ಕಥಾಮೃತ ಪುರಾಣ ಪ್ರವಚನ ಮಂಗಲೋತ್ಸವ ಬ್ರಾಹ್ಮಿ ಮಹೂರ್ತದಲ್ಲಿ ಸಿದ್ಧಾರೂಢರ ಮೂರ್ತಿಗೆ ಅಭಿಷೇಕ, ಶಿವಲಿಂಗುವಿಗೆ ರುದಾಭಿಷೇಕ, ಬಿಲ್ವಾರ್ಚನೆ, ವಿವಿಧ ಹೂವುಗಳಿಂದ ಅಲಂಕಾರ, ವಿಶೇಷ ಪೂಜೆಗಳು ನಡೆದವು. ನಂತರ ಸಿದ್ಧಾರೂಢರ ಮೂರ್ತಿ ಹಾಗೂ ಕಥಾಮೃತದ ಪಾಲಕಿ ಉತ್ಸವ ಬಾಜಾ ಭಜಂತ್ರಿ, ಸಮಾಳ, ಮಂಗಲ ವಾದ್ಯಗಳೊಂದಿಗೆ ಮಠದ ಪ್ರಮುಖ ಅಂಗಳದಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು. ತದನಂತರ ಮಹಾಪ್ರಸಾದ ಜರುಗಿತು.