Advertisement

ಗೋವಾ ವಿಧಾನಸಭೆಗೆ ರಾಣೆ ದಂಪತಿಗಳು : ಬಿಜೆಪಿಯ ಜೋಡಿಗೆ ಭರ್ಜರಿ ಜಯ

02:01 PM Mar 10, 2022 | Team Udayavani |

ಪಣಜಿ: ಗೋವಾದ ಸತ್ತರಿ ತಾಲೂಕಿನಲ್ಲಿ ಬಿಜೆಪಿಯ ರಾಣೆ ದಂಪತಿಗಳು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ ಮತ್ತೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

Advertisement

ವಾಳಪೈ ಕ್ಷೇತ್ರದಲ್ಲಿ ಸಚಿವ ವಿಶ್ವಜಿತ್ ರಾಣೆ, ಪರ್ಯೆ ಕ್ಷೇತ್ರದಲ್ಲಿ ಪತ್ನಿ ದಿವ್ಯಾ ರಾಣೆ ಜಯಗಳಿಸಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸುಲಭ ಗೆಲುವು ಸಾಧಿಸಿದೆ.

ವಾಳಪೈ ಮತ್ತು ಪರ್ಯೆ ಕ್ಷೇತ್ರವು ರಾಣೆ ಕುಟುಂಬದ ಭದ್ರಕೋಟೆ ಎಂದೇ ಹೇಳಲಾಗುತ್ತದೆ. ಪರ್ಯೆ ಕ್ಷೇತ್ರದಲ್ಲಿ ವಿಶ್ವಜಿತ್ ರಾಣೆಯವರ ತಂದೆ ಪ್ರತಾಪಸಿಂಗ್ ರಾಣೆ ಹಲವು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಪ್ರತಾಪಸಿಂಗ ರಾಣೆ ತಮ್ಮ ಸೊಸೆ ದಿವ್ಯಾ ರಾಣೆ ಎದುರು ಪರ್ಯೆ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಕಾಂಗ್ರೆಸ್ ಪಕ್ಷದಿಂದ ಸ್ಫರ್ಧಿಸಿದ್ದ ಪ್ರತಾಪ ಸಿಂಗ್ ರಾಣೆ ಕಣದಿಂದ ಹಿಂದಕ್ಕೆ ಸರಿದು ಸೊಸೆಯ ಗೆಲುವಿಗೆ ದಾರಿ ಮಾಡಿ ಕೊಟ್ಟಿದ್ದರು.

2017 ರಲ್ಲಿ ಕಾಂಗ್ರೇಸ್ ಪಕ್ಷದಿಂದ  ವಾಳಪೈ ಕ್ಷೇತ್ರದಿಂದ ವಿಶ್ವಜಿತ್ ರಾಣೆ ಸ್ಫರ್ಧಿಸಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು. ನಂತರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಸ್ಫರ್ಧಿಸಿ ವಿಶ್ವಜಿತ್ ರಾಣೆ ಜಯಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next