Advertisement

ರಾಂಚಿಯಲ್ಲಿ ಕಾದಿದೆಯೇ ಸ್ಪಿನ್‌ ಪಿಚ್‌

11:06 AM Mar 15, 2017 | Team Udayavani |

ರಾಂಚಿ: ರಾಂಚಿಯ “ಜಾರ್ಖಂಡ್‌ ಕ್ರಿಕೆಟ್‌ ಅಸೋ ಸಿಯೇಶನ್‌ ಸ್ಟೇಡಿಯಂ’ (ಜೆಎಸ್‌ಸಿಎ) ಭಾರತದ 26ನೇ ಟೆಸ್ಟ್‌ ಕೇಂದ್ರವಾಗಿ ಉದಯವಾಗಲಿದೆ. ಭಾರತ- ಆಸ್ಟ್ರೇಲಿಯ ನಡುವೆ ಗುರುವಾರದಿಂದ ಆರಂಭವಾಗಲಿರುವ ಸರಣಿಯ 3ನೇ ಟೆಸ್ಟ್‌ ಪಂದ್ಯದ ಆತಿಥ್ಯಕ್ಕೆ ರಾಂಚಿ ಸಜ್ಜಾಗಿದೆ. ಇದು ಧೋನಿ ಊರಿ ನಲ್ಲಿ ನಡೆಯುವ ಪ್ರಥಮ ಟೆಸ್ಟ್‌ ಪಂದ್ಯ ವೆಂಬುದು ವಿಶೇಷ.

Advertisement

ಸದ್ಯ ಎಲ್ಲರೂ ಡಿಆರ್‌ಎಸ್‌ ಚರ್ಚೆ
ಯಲ್ಲೇ ಕಾಲ ಕಳೆಯುತ್ತಿರುವ ಹೊತ್ತಿನಲ್ಲಿ ರಾಂಚಿ ಟೆಸ್ಟ್‌ ಪಂದ್ಯದ ಕ್ಷಣ ಗಣನೆ ಆರಂಭವಾಗಿದೆ. ಈ ಹಿಂದಿನ ಪುಣೆ ಹಾಗೂ ಬೆಂಗಳೂರು ಟೆಸ್ಟ್‌ ವೇಳೆ ಅಲ್ಲಿನ ಪಿಚ್‌ಗಳೇ ಸುದ್ದಿಯಲ್ಲಿದ್ದವು. ಪುಣೆ ಟ್ರ್ಯಾಕ್‌ ಅತ್ಯಂತ ಕಳಪೆ ಎಂದು ಐಸಿಸಿ ತೀರ್ಪು ನೀಡಿದರೆ, ಬೆಂಗಳೂರು ಉತ್ತಮ ಪಿಚ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೂ ಚಿನ್ನಸ್ವಾಮಿ ಅಂಗಳ “ಟಿಪಿಕಲ್‌ ಟೆಸ್ಟ್‌ ಪಿಚ್‌’ಗಿಂತ ಭಿನ್ನವಾಗಿತ್ತು ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಹೀಗಿರು ವಾಗ ರಾಂಚಿಯಲ್ಲಿ ಏನು ಕಾದಿದೆ ಎಂಬ ಕುತೂಹಲ ಸಹಜ.
 
ಸ್ಪಿನ್ನರ್‌ಗಳದ್ದೇ ಮೇಲುಗೈ
ರಾಂಚಿ ಪಿಚ್‌ ಹೇಗಿದೆ ಎಂಬುದನ್ನು ಅರಿಯುವ ಪ್ರಯತ್ನ ಮಾಡುವ ಮುನ್ನ ಇಲ್ಲಿ ನಡೆದ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳತ್ತ ಗಮನ ಹರಿಸುವುದು ಸೂಕ್ತ. 2013ರಿಂದ ಮೊದಲ್ಗೊಂಡು 2016ರ ತನಕ ಇಲ್ಲಿ 4 ಏಕದಿನ ಪಂದ್ಯಗಳನ್ನು ಆಡಲಾಗಿದೆ. ಎರಡನ್ನು ಭಾರತ ಗೆದ್ದಿದೆ. ಒಂದರಲ್ಲಿ ನ್ಯೂಜಿಲ್ಯಾಂಡಿಗೆ ಶರಣಾಗಿದೆ. ಭಾರತ-ಆಸ್ಟ್ರೇಲಿಯ ನಡುವಿನ 2013ರ ಪಂದ್ಯ ಮಳೆಯಿಂದ ಸ್ಪಷ್ಟ ಫ‌ಲಿತಾಂಶ ದಾಖಲಿಸಿಲ್ಲ. ಈ 4 ಏಕದಿನ ಪಂದ್ಯಗಳ ವೇಳೆ 24 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾಗಿವೆ. 

ದೇಶಿ ಕ್ರಿಕೆಟ್‌ ಪಂದ್ಯಗಳ ವೇಳೆಯೂ ಸ್ಪಿನ್ನರ್‌ಗಳೇ ಮಿಂಚಿದ್ದಾರೆ. ಕಳೆದ ಋತುವಿನ ರಣಜಿ ಪಂದ್ಯಗಳಲ್ಲೂ ಸ್ಪಿನ್ನರ್‌ಗಳದೇ ಮೇಲುಗೈ ಆಗಿತ್ತು. ಸ್ಪಿನ್ನರ್‌ಗಳು 312.1 ಓವರ್‌ಗಳಿಂದ 34 ವಿಕೆಟ್‌ ಉರುಳಿಸಿದರೆ, ಪೇಸ್‌ ಬೌಲರ್‌ಗಳು 279.4 ಓವರ್‌ಗಳಿಂದ 28 ವಿಕೆಟ್‌ ಸಂಪಾದಿಸಿದ್ದಾರೆ. ಹೀಗಾಗಿ ಟೆಸ್ಟ್‌ ಪಂದ್ಯದ ವೇಳೆಯೂ ರಾಂಚಿ ಪಿಚ್‌ನಲ್ಲಿ ಸ್ಪಿನ್ನರ್‌ಗಳೇ ಮಿಂಚು ಹರಿಸುವ ಸಾಧ್ಯತೆ ಹೆಚ್ಚಿದೆ. 

ಇದಕ್ಕೆ ಬೆಂಗಳೂರು ಟೆಸ್ಟ್‌ ಕೂಡ ಸ್ಫೂರ್ತಿಯಾಗಬಹುದು. ಅಲ್ಲಿ ಜಡೇಜ ಮತ್ತು ಅಶ್ವಿ‌ನ್‌ ಸೇರಿಕೊಂಡು ಭಾರತವನ್ನು ಹಳಿಗೆ ತಂದಿದ್ದರು. ಪುಣೆಯಲ್ಲಿ ಗೆಲುವು ಸಾಧಿಸಿದರೂ ಬೆಂಗಳೂರಿನಲ್ಲಿ ಆಸ್ಟ್ರೇಲಿಯನ್ನರ ಸ್ಪಿನ್‌ ದೌರ್ಬಲ್ಯ ಬಯಲುಗೊಂಡಿತ್ತು. ಹೀಗಾಗಿ ರಾಂಚಿಯಲ್ಲೂ ಟರ್ನಿಂಗ್‌ ಟ್ರ್ಯಾಕ್‌ ನಿರ್ಮಾಣಗೊಳ್ಳುವುದರಲ್ಲಿ ಹೆಚ್ಚು ಅನುಕೂಲವಿದೆ ಎಂಬುದೊಂದು ಲೆಕ್ಕಾಚಾರ.

ತಂಡಗಳಲ್ಲಿ ಬದಲಾವಣೆ
ರಾಂಚಿಯಲ್ಲಿ ಎರಡೂ ತಂಡಗಳಲ್ಲಿ ಹೆಚ್ಚಿನ ಬದಲಾವಣೆಗಳಾಗುವ ಸಾಧ್ಯತೆ ನಿಚ್ಚಳಗೊಂಡಿದೆ. ಇದಕ್ಕೆ ಎರಡು ಕಾರಣಗಳಿವೆ. ಇಲ್ಲಿನ ಪಿಚ್‌ ಸ್ವರೂಪ ಹಾಗೂ ಗಾಯಾಳು ಆಟಗಾರರು.

Advertisement

ರಾಂಚಿ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುವುದು ಬಹುತೇಕ ಖಚಿತವಾದ್ದರಿಂದ ಹಾಗೂ ಆಸೀಸ್‌ ಬ್ಯಾಟ್ಸ್‌ಮನ್‌ಗಳು ಸ್ಪಿನ್‌ ಸುಳಿಗೆ ಬೀಳತೊಡಗಿದ್ದರಿಂದ ಭಾರತ ಮತ್ತೆ ತ್ರಿವಳಿ ಸ್ಪಿನ್‌ ದಾಳಿ ಸಂಘಟಿಸುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಗಿ ಅವಕಾಶ ಪಡೆದ ಕರುಣ್‌ ನಾಯರ್‌ ಮರಳಿ ಜಯಂತ್‌ ಯಾದವ್‌ ಅವರಿಗೆ ಸ್ಥಾನ ಬಿಟ್ಟುಕೊಡಬೇಕಾಗಬಹುದು. ಮುರಳಿ ವಿಜಯ್‌ ಮರಳಿ ಆರಂಭಿಕನ ಜವಾ ಬ್ದಾರಿ ವಹಿಸಿಕೊಳ್ಳುವುದು ಬಹುತೇಕ ಖಚಿತ. ಇದು ಭಾರತದ ಕತೆ.

ಆಸ್ಟ್ರೇಲಿಯದ ಗಾಯಾಳುಗಳ ಸಮಸ್ಯೆ ಬಿಗಡಾಯಿಸಿದೆ. ವೇಗಿ  ಸ್ಟಾರ್ಕ್‌, ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಈಗಾಗಲೇ ತಂಡದಿಂದ ಬೇರ್ಪ ಟ್ಟಿದ್ದಾರೆ. ಸ್ಟಾರ್ಕ್‌ ಬದಲು ಪ್ಯಾಟ್‌ ಕಮಿನ್ಸ್‌ ತಮ್ಮ “ಸೆಕೆಂಡ್‌ ಇನ್ನಿಂಗ್ಸ್‌’ ಆರಂಭಿಸುವುದನ್ನು ನಿರೀಕ್ಷಿಸ ಬಹುದು. ಮಾರ್ಷ್‌ ಬದಲು ಇನ್ನಷ್ಟೇ ಅಂತಾರಾಷ್ಟ್ರೀಯ ಪಂದ್ಯವಾಡಬೇಕಿ ರುವ ಲೆಗ್‌ ಸ್ಪಿನ್ನರ್‌ ಮಿಚೆಲ್‌ ಸ್ವೆಪ್ಸನ್‌ ಅವಕಾಶ ಪಡೆಯಬಹುದೇ, ಆಸೀಸ್‌ ತ್ರಿವಳಿ ಸ್ಪಿನ್‌ ದಾಳಿಯನ್ನು ನೆಚ್ಚಿಕೊಳ್ಳ ಬಹುದೇ ಎಂಬುದೆಲ್ಲ ಪ್ರಶ್ನೆಗಳು.

3ನೇ ವಿಶ್ವಯುದ್ಧ
ರಾಂಚಿಯಲ್ಲಿ ನಡೆಯುವ 3ನೇ ಟೆಸ್ಟ್‌ ಪಂದ್ಯವನ್ನು ಮೂರನೇ ವಿಶ್ವಯುದ್ಧ ಎಂದು ಆಸೀಸ್‌ ಪತ್ರಿಕೆ “ದಿ ಡೈಲಿ ಟೆಲಿಗ್ರಾಫ್’ ವರ್ಣಿಸಿದೆ. ಬೆಂಗಳೂರಿನಲ್ಲಿ ಈ ಯುದ್ಧ ಶುರು ವಾಗಿದೆ. ರಾಂಚಿಯಲ್ಲಿ ಮುಂದು ವರಿಯಲಿದೆ ಎಂದು ವರ್ಣಿಸಿದೆ.

ಮಾಧ್ಯಮದವರಿಂದ ಪಿಚ್‌ ವೀಕ್ಷಣೆ
ಮಂಗಳವಾರ ಬೆಳಗ್ಗೆ ಮಾಧ್ಯಮದವರಿಗೆ ಹಾಗೂ ಕ್ರಿಕೆಟಿಗರಿಗೆ ರಾಂಚಿ ಪಿಚ್‌ ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಯಿತು. ಆದರೆ ಆಸ್ಟ್ರೇಲಿಯ ಇದನ್ನು ಕಂಡು ತುಸು ಅಸಮಾಧಾನಗೊಂಡಿದೆ. ಆಸೀಸ್‌ ಪತ್ರಕರ್ತ ಆ್ಯಂಡ್ರೂé ರ್ಯಾಮೆÕ ತಮ್ಮ ಟ್ವಿಟರ್‌ನಲ್ಲಿ ಆಗಷ್ಟೇ ಪಿಚ್‌ನಿಂದ ಕತ್ತರಿಸಿದ ಹುಲ್ಲಿನ ರಾಶಿಯ ಫೋಟೋ ಒಂದನ್ನು ಪೋಸ್ಟ್‌ ಮಾಡಿದ್ದಾರೆ. ರಾಂಚಿ ಪಿಚ್‌ ಹುಲ್ಲಿನಿಂದ ಕೂಡಿದೆ ಎಂಬ ಆರಂಭಿಕ ವರದಿಗೆ ಇದು ಸಾಕ್ಷಿ ಎಂಬುದಾಗಿ ಬರೆದಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next