Advertisement

ತೆಲುಗು ಮಾತನಾಡಿದ ಬಾಲಿವುಡ್‌ನ‌ ರಣಬೀರ್‌ ಕಪೂರ್‌

09:34 PM Sep 03, 2022 | Team Udayavani |

ಬಾಲಿವುಡ್‌ನ‌ ರಣಬೀರ್‌ ಕಪೂರ್‌ ಮತ್ತು ಅಲಿಯಾ ಭಟ್‌ ನಟಿಸಿರುವ “ಬ್ರಹ್ಮಾಸ್ತ್ರ’ ಸಿನಿಮಾ ಸೆ.9ರಂದು ಬಿಡುಗಡೆಯಾಗಲಿದೆ.

Advertisement

ಕನ್ನಡ, ತೆಲುಗು ಸೇರಿ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಸಿನಿ ತಂಡ ಶುಕ್ರವಾರ ರಾತ್ರಿ ಹೈದರಾಬಾದ್‌ನಲ್ಲಿ ಪ್ರಚಾರ ಕಾರ್ಯಕ್ರಮ ನಡೆಸಿದೆ.

ಅದರಲ್ಲಿ ನಟ ರಣಬೀರ್‌ ತೆಲುಗು ಭಾಷೆಯಲ್ಲಿಯೇ ಮಾತನಾಡಿ ದಕ್ಷಿಣ ಭಾರತೀಯರ ಮನಸ್ಸು ಕದಿಯುವ ಪ್ರಯತ್ನ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ತೆಲುಗು ಭಾಷೆಯನ್ನು ಇನ್ನಷ್ಟು ಚೆನ್ನಾಗಿ ಮಾತನಾಡುವುದಕ್ಕೆ ಕಲಿತು ಸುಲಲಿತವಾಗಿ ಮಾತನಾಡುವುದಾಗಿಯೂ ಅವರು ಜನರಿಗೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next