Advertisement

ಪಾಕ್‌ ಸಿನಿಮಾದಲ್ಲಿ ನಟನೆ: ರಣಬೀರ್‌ ಕಪೂರ್‌ ಹೇಳಿಕೆಗೆ ಟೀಕೆ

12:18 AM Dec 15, 2022 | Team Udayavani |

ಜೆಡ್ಡಾ: “ಪಾಕಿಸ್ತಾನಿ ಚಿತ್ರದಲ್ಲಿ ನಟಿಸಲು ಸಿದ್ಧ. ಕಲೆಗೆ ಮತ್ತು ಕಲಾವಿದರಿಗೆ ಯಾವುದು ಗಡಿಗಳಿಲ್ಲ,’ ಎಂದು ಬಾಲಿವುಡ್‌ ನಟ ರಣಬೀರ್‌ ಹೇಳಿರುವುದು ಈ ವಿವಾದಕ್ಕೆ ಕಾರಣವಾಗಿದೆ.

Advertisement

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಪಾಕಿಸ್ತಾನದ ನಿರ್ದೇಶಕರೊಬ್ಬರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.

“ದಿ ಲಿಜೆಂಡ್‌ ಆಫ್ ಮೌಲಾ ಜಾಟ್‌’ ಸಿನಿಮಾಗಾಗಿ ಪಾಕಿಸ್ತಾನಿ ಚಿತ್ರೋದ್ಯಮಕ್ಕೆ ನನ್ನ ಅಭಿನಂದನೆಗಳು. ಕಳೆದ ಕೆಲವು ವರ್ಷಗಳಲ್ಲೇ ಇದು ದೊಡ್ಡ ಹಿಟ್‌ ಸಿನಿಮಾ. ನನಗೂ ತುಂಬ ಇಷ್ಟವಾಯಿತು. ಪಾಕ್‌ ಚಿತ್ರದಲ್ಲಿ ನಟಿಸಲು ನಾನು ಸಿದ್ಧ,’ ಎಂದರು.

ರಣಬೀರ್‌ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. “ದುಡ್ಡಿಗಾಗಿ ಇವರು ಏನು ಬೇಕಾದರೂ ಮಾಡುತ್ತಾರೆ. ಇವರಿಗೆ ದೇಶ ಪ್ರೇಮ ಇಲ್ಲ,’ ಎಂದು ಅನೇಕರು ಟೀಕಿಸಿದ್ದಾರೆ. 2016ರಲ್ಲಿ ಉರಿ ದಾಳಿಯ ನಂತರ ಭಾರತದಲ್ಲಿ ಪಾಕಿಸ್ತಾನಿ ಕಲಾವಿದರು ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next