Advertisement

ಶಿವಮೊಗ್ಗದಲ್ಲಿ ಕರ್ನಾಟಕ-ರೈಲ್ವೇಸ್‌ ಮೇಲಾಟ

11:02 AM Dec 22, 2018 | |

ಶಿವಮೊಗ್ಗ: ಗುಜರಾತ್‌ ವಿರುದ್ಧ ಡ್ರಾ ಸಾಧಿಸಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಅಂಕ ಪಡೆದ ಬಳಿಕ ವಿನಯ್‌ ಕುಮಾರ್‌ ನೇತೃತ್ವದ ಕರ್ನಾಟಕ ತಂಡ “ಮಲೆನಾಡಿನ ಹೆಬ್ಟಾಗಿಲು’ ಶಿವಮೊಗ್ಗದಲ್ಲಿ ಶನಿವಾರದಿಂದ ಆರಂಭವಾಗಲಿರುವ ರಣಜಿ ಪಂದ್ಯದಲ್ಲಿ ರೈಲ್ವೇಸ್‌ ತಂಡವನ್ನು ಎದುರಿಸಲಿದೆ.

Advertisement

ರಾಜ್ಯ ತಂಡ ಪ್ರಸಕ್ತ ಕೂಟದಲ್ಲಿ ಒಟ್ಟು 5 ಪಂದ್ಯ ಆಡಿದೆ. ಒಂದನ್ನಷ್ಟೇ ಗೆದ್ದು, ಒಂದರಲ್ಲಿ ಸೋಲನುಭವಿಸಿದೆ. 3 ಪಂದ್ಯ ಡ್ರಾ ಕಂಡಿದೆ. 15 ಅಂಕ ಸಂಪಾದಿಸಿ 4ನೇ ಸ್ಥಾನದಲ್ಲಿದೆ. ರೈಲ್ವೇಸ್‌ ಅಂಕಪಟ್ಟಿಯಲ್ಲಿ ಕೊನೆಯಿಂದ ದ್ವಿತೀಯ ಸ್ಥಾನ ಪಡೆದಿದೆ.

ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿಗೆ ಆಯ್ಕೆಯಾಗಿರುವ ಮಾಯಾಂಕ್‌ ಅಗರ್ವಾಲ್‌ ರಾಜ್ಯ ತಂಡಕ್ಕೆ ಲಭ್ಯವಾಗುವುದಿಲ್ಲ. ತಾರಾ ಆಟಗಾರನ ಅನುಪಸ್ಥಿತಿ ರಾಜ್ಯದ ಆರಂಭಿಕ ಬ್ಯಾಟಿಂಗ್‌ ಕ್ರಮಾಂಕದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ತಾರಾ ಆಟಗಾರ ಮನೀಷ್‌ ಪಾಂಡೆ ತಂಡವನ್ನು ಕೂಡಿಕೊಂಡಿದ್ದಾರೆ. 

ಕರುಣ್‌ ನಾಯರ್‌ ಗಾಯಾಳು
ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಎಮರ್ಜಿಂಗ್‌ ಕ್ರಿಕೆಟ್‌ ಕೂಟದಲ್ಲಿ ಭಾಗವಹಿಸುತ್ತಿರುವುದರಿಂದ ಪ್ರತೀಕ್‌ 
ಜೈನ್‌ ಕೂಡ ಈ ಪಂದ್ಯದಿಂದ ಹೊರಗುಳಿಯಲಿದ್ದು, ಪ್ರಸಿದ್ಧ್ ಕೃಷ್ಣ ಅವಕಾಶ ಪಡೆಯಲಿದ್ದಾರೆ. ಗಾಯಾಳಾಗಿರುವ ಕರುಣ್‌ ನಾಯರ್‌ ಆಡುವುದಿಲ್ಲ ಎಂದು  ಕೆಎಸ್‌ಸಿಎ ತಿಳಿಸಿದೆ.

ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಆಯ್ಕೆ
ಯಾಗಿರುವ ದೇವದತ್ತ ಪಡಿಕ್ಕಲ್‌, ಶ್ರೇಯಸ್‌ ಗೋಪಾಲ್‌, ಎಸ್‌. ಶರತ್‌ ರಾಜ್ಯ ತಂಡದ ಭರವಸೆಗಳಾಗಿದ್ದಾರೆ. ರಾಜ್ಯದ ಬೌಲಿಂಗ್‌ ವಿಭಾಗ ಸದೃಢವಾಗಿದೆ. ವೇಗದ ವಿಭಾಗದಲ್ಲಿ ನಾಯಕ ವಿನಯ್‌ ಕುಮಾರ್‌ ಪ್ರಮುಖರಾಗಿದ್ದಾರೆ. ರೋನಿತ್‌ ಮೋರೆ, ಕೆ. ಗೌತಮ್‌ ಹಾಗೂ ಶ್ರೇಯಸ್‌ ಗೋಪಾಲ್‌ ತಂಡದ ಸ್ಟಾರ್‌ ಬೌಲರ್‌ಗಳಾಗಿದ್ದಾರೆ.

Advertisement

ಐಪಿಎಲ್‌ನಲ್ಲಿ ಆಡಿದ ಪ್ರಮುಖ ಆಟ ಗಾರರನ್ನು ಒಳಗೊಂಡಿದ್ದರೂ ರೈಲ್ವೇಸ್‌ ಇದು ವರೆಗೆ ಗೆದ್ದಿಲ್ಲ.  ಪ್ರಥಮ್‌ ಸಿಂಗ್‌ ಅವರಂತಹ ಅಪ್ರತಿಮ ಬ್ಯಾಟ್ಸ್‌ಮನ್‌ ಇದ್ದರೂ ರೈಲ್ವೇಸ್‌ಗೆ ಲಾಭವಾಗಿಲ್ಲ. ಗುಪ್ತಾ, ನಿತಿನ್‌ ಬಿಲ್ಲೆ, ಫ‌ಯಾಜ್‌ ಅಹ್ಮದ್‌ ಬ್ಯಾಟಿಂಗ್‌ನಲ್ಲಿ ವಿಫ‌ಲರಾಗುತ್ತಿದ್ದಾರೆ. ಆಲ್‌ರೌಂಡರ್‌ಗಳಾದ ಅರಿಂದಮ್‌ ಘೋಷ್‌, ಹರ್ಷ ತ್ಯಾಗಿ ಸ್ವಲ್ಪ ಮಟ್ಟಿಗೆ ಭರವಸೆ ಮೂಡಿಸಿದ್ದಾರೆ. ಅನುರೀತ್‌ ಸಿಂಗ್‌, ಮಧುರ್‌ ಖತ್ರಿ, ಕರಣ್‌ ಠಾಕೂರ್‌, ಅವಿನಾಶ್‌ ಯಾದವ್‌, ಮಂಜೀತ್‌ ಸಿಂಗ್‌, ಶಿವಕಾಂತ್‌ ಶುಕ್ಲಾ ರೈಲ್ವೇಸ್‌ನ ಪ್ರಮುಖ ಬೌಲರ್‌ಗಳಾಗಿ¨ªಾರೆ.

ಶಿವಮೊಗ್ಗದಲ್ಲಿ 2ನೇ ರಣಜಿ ಪಂದ್ಯ
ಇದು ಶಿವಮೊಗ್ಗದ ನವುಲೆ ಕ್ರೀಡಾಂಗಣದಲ್ಲಿ ನಡೆಯು ತ್ತಿರುವ ಎರಡನೇ ರಣಜಿ ಪಂದ್ಯ. 2017ರ ಅಕ್ಟೋಬರ್‌ನಲ್ಲಿ  ಕರ್ನಾಟಕ-ಹೈದರಾಬಾದ್‌ ಮುಖಾಮುಖೀಯಾಗಿದ್ದವು.

ವೀಕ್ಷಣೆಗೆ ಸುಸಜ್ಜಿತ ವ್ಯವಸ್ಥೆ
ವೀಕ್ಷಕರಿಗೆ ಕ್ರೀಡಾಂಗಣದ ಸುತ್ತಲೂ ಹುಲ್ಲುಹಾಸಿನ ಮೇಲೆ ಕೂರುವ ವ್ಯವಸ್ಥೆ ಮಾಡಲಾಗಿದೆ. 2 ದ್ವಾರಗಳ ಮೂಲಕ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಮೊದಲ ದ್ವಾರ ಸಾರ್ವಜನಿಕರಿಗೆ ಹಾಗೂ ಇನ್ನೊಂದು ದ್ವಾರ ಆಹ್ವಾನಿತರಿಗೆ ತೆರೆಯಲ್ಪಡಲಿದೆ.

ಕರ್ನಾಟಕ ತಂಡ 
ವಿನಯ್‌ ಕುಮಾರ್‌ (ನಾಯಕ), ಶ್ರೇಯಸ್‌ ಗೋಪಾಲ್‌ (ಉಪನಾಯಕ), ಡಿ. ನಿಶ್ಚಲ್‌, ಕೆ.ವಿ. ಸಿದ್ದಾರ್ಥ್, ಆರ್‌. ಸಮರ್ಥ್, ಮನೀಷ್‌ ಪಾಂಡೆ, ದೇವದತ್ತ ಪಡಿಕ್ಕಲ್‌, ಬಿ.ಆರ್‌. ಶರತ್‌, ಜೆ. ಸುಚಿತ್‌, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಪವನ್‌ ದೇಶಪಾಂಡೆ, ಶರತ್‌ ಶ್ರೀನಿವಾಸ್‌, ಕೆ. ಗೌತಮ್‌, ಪ್ರಸಿದ್ಧ್ ಕೃಷ್ಣ.

Advertisement

Udayavani is now on Telegram. Click here to join our channel and stay updated with the latest news.

Next