Advertisement

ಸಂಕಷ್ಟದಲ್ಲಿ  ಗುಜರಾತ್‌

11:11 AM Dec 09, 2017 | Team Udayavani |

ಜೈಪುರ: ಲೀಗ್‌ ಹಂತದಲ್ಲಿ ಭರ್ಜರಿ ನಿರ್ವಹಣೆ ನೀಡಿದ್ದ ಗುಜರಾತ್‌ ತಂಡ ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸಂಕಷ್ಟಕ್ಕೆ ಬಿದ್ದಿದೆ. ಬಂಗಾಲದ 354 ರನ್ನಿಗೆ ಉತ್ತರವಾಗಿ ಗುಜರಾತ್‌ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ 180 ರನ್ನಿಗೆ ಆರು ವಿಕೆಟ್‌ ಕಳೆದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯಲು ಇನ್ನುಳಿದ 4 ವಿಕೆಟ್‌ಗಳಿಂದ 174 ರನ್‌ ಗಳಿಸಬೇಕಾಗಿದೆ. 

Advertisement

ಆರು ವಿಕೆಟಿಗೆ 261 ರನ್ನುಗಳಿಂದ ದಿನದಾಟ ಆರಂಭಿಸಿದ ಬಂಗಾಲ ತಂಡವು 354 ರನ್‌ ಗಳಿಸಿ ಆಲೌಟಾಯಿತು. ಮೊದಲ ದಿನ ಅಜೇಯರಾಗಿ ಉಳಿದಿದ್ದ ಅಮಿತ್‌ ಮತ್ತು ಆಮಿರ್‌ ಘನಿ ಅವರು 7ನೇ ವಿಕೆಟಿಗೆ 58 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಬೇರ್ಪಟ್ಟರು. ಆಬಳಿಕ ಬಂಗಾಲ ಕುಸಿಯಿತು. ಅಮಿತ್‌ 36 ರನ್‌ ಹೊಡೆದರೆ ಘನಿ 49 ರನ್‌ ಗಳಿಸಿದರು.

ಬಿಗು ದಾಳಿ ಸಂಘಟಿಸಿದ ಈಶ್ವರ್‌ ಚೌಧರಿ 87 ರನ್ನಿಗೆ 5 ವಿಕೆಟ್‌ ಕಿತ್ತರು. ರನ್‌ ಖಾತೆ ತೆರೆಯುವ ಮೊದಲೇ ವಿಕೆಟನ್ನು ಕಳೆದುಕೊಂಡ ಗುಜರಾತ್‌ಗೆ 17 ರನ್‌ ತಲುಪಿದಾಗ ಇನ್ನೊಂದು ಹೊಡೆತ ಬಿತ್ತು. ಆಬಳಿಕ ನಾಯಕ ಪಾರ್ಥಿವ್‌ ಪಟೇಲ್‌ ಮತ್ತು ಭಾರ್ಗವ್‌ ಮೆರಾಯಿ ಮೂರನೇ ವಿಕೆಟಿಗೆ 107 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಆದರೆ ಈ ಜೋಡಿ ಮುರಿಯುತ್ತಲೇ ತಂಡ ಮತ್ತೂಮ್ಮೆ ಕುಸಿಯಿತು. ಮುಂದಿನ 20 ರನ್‌ ಗಳಿಸುವಷ್ಟರಲ್ಲಿ ತಂಡ ಇನ್ನೂ 4 ವಿಕೆಟ್‌ ಕಳೆದುಕೊಂಡು ಒದ್ದಾಡುವಂತಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next