Advertisement

ರಣಜಿ ಟ್ರೋಫಿ ವಿಳಂಬ ; ನ. 16ರ ಬದಲು ಜ. 5ಕ್ಕೆ ಆರಂಭ

12:16 AM Aug 21, 2021 | Team Udayavani |

ಹೊಸದಿಲ್ಲಿ : ಕೆಲವು ಕ್ರಿಕೆಟ್‌ ಮಂಡಳಿಗಳ ಸಲಹೆ ಮೇರೆಗೆ ಪ್ರಸಕ್ತ ಋತುವಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯನ್ನು ಒಂದೂವರೆ ತಿಂಗಳು ವಿಳಂಬವಾಗಿ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ. ನವಂಬರ್‌ 16ರ ಬದಲು ಮುಂದಿನ ವರ್ಷದ ಜನವರಿ 5ರಂದು ಆರಂಭಗೊಳ್ಳಲಿದೆ. ಮಾರ್ಚ್‌ 20ರ ತನಕ ಇದು ನಡೆಯಲಿದೆ.

Advertisement

ಅಭ್ಯಾಸ ಹಾಗೂ ತಯಾರಿಗೆ ಹೆಚ್ಚಿನ ಕಾಲಾವಕಾಶ ಬೇಕಿದೆ ಎಂಬ ರಾಜ್ಯ ಕ್ರಿಕೆಟ್‌ ಮಂಡಳಿಗಳ ಮನವಿಯನ್ನು ಪುರಸ್ಕರಿಸಿದ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ. ಎಲ್ಲ ಪಂದ್ಯಗಳು ಜೈವಿಕ ಸುರಕ್ಷಾ ವಲಯದಲ್ಲಿ ನಡೆಯಲಿವೆ, ಒಟ್ಟು 38 ತಂಡಗಳು ಕಣಕ್ಕಿಳಿಯಲಿವೆ ಎಂದು ಬಿಸಿಸಿಐ ಹೇಳಿದೆ.

2021-22ರ ದೇಶಿ ಕ್ರಿಕೆಟ್‌ ಋತು ಅ. 27ರಂದು “ಸಯ್ಯದ್‌ ಮುಷ್ತಾಕ್‌ ಅಲಿ’ ಟ್ರೋಫಿ ಟೂರ್ನಿಯೊಂದಿಗೆ ಆರಂಭಗೊಳ್ಳಲಿದೆ. ಐಪಿಎಲ್‌ ಮುಗಿದ ಬಳಿಕ ಈ ಟೂರ್ನಿ ನಡೆಯಲಿರುವುದರಿಂದ ಪ್ರಮುಖ ಆಟಗಾರರು ತಮ್ಮ ರಾಜ್ಯ ತಂಡಗಳಲ್ಲಿ ಆಡುವ ಸಾಧ್ಯತೆ ಇದೆ. ಡಿ. ಒಂದರಿಂದ 29ರ ವರೆಗೆ “ವಿಜಯ್‌ ಹಜಾರೆ’ ಏಕದಿನ ಕ್ರಿಕೆಟ್‌ ಟೂರ್ನಿ ನಡೆಯಲಿದೆ.

ಇದನ್ನೂ ಓದಿ :ದುಬಾೖನಲ್ಲಿ ಸಿಎಸ್‌ಕೆ ಅಭ್ಯಾಸ ಆರಂಭ : ಐಪಿಎಲ್‌ ಕೂಟಕ್ಕೆ ಇನ್ನೊಂದೇ ತಿಂಗಳು ಬಾಕಿ

ಕೊರೊನಾ ಮುನ್ನೆಚ್ಚರಿಕೆ
ಕೋವಿಡ್‌-19 ಮುಂಜಾಗ್ರತಾ ಕ್ರಮವಾಗಿ ದೇಶಿ ಕ್ರಿಕೆಟ್‌ ಆವೃತ್ತಿಯಲ್ಲಿ ಪ್ರತಿಯೊಂದು ತಂಡ ಕೇವಲ 20 ಆಟಗಾರರು ಹಾಗೂ 10 ಮಂದಿ ಸಹಾಯಕ ಸಿಬಂದಿಯನ್ನು ಹೊಂದಿರಬೇಕೆಂದು ಸೂಚಿಸಲಾಗಿದೆ.

Advertisement

ಕೊರೊನಾ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಪ್ರತಿಯೊಂದು ತಂಡವೂ ಪ್ರತ್ಯೇಕ ವೈದ್ಯರನ್ನು ಹೊಂದಿರಬೇಕೆಂದು ರಾಜ್ಯ ಕ್ರಿಕೆಟ್‌ ಮಂಡಳಿಗಳಿಗೆ ಸೂಚಿಸಲಾಗಿದ್ದು, ಎಲ್ಲ ಸದಸ್ಯರು ಕಡ್ಡಾಯವಾಗಿ ಕೋವಿಡ್‌ ಲಸಿಕೆ ಪಡೆದಿರಬೇಕು ಎಂದು ಬಿಸಿಸಿಐ ತಿಳಿಸಿದೆ.

ನಿರ್ದಿಷ್ಟ ಕ್ರಿಕೆಟ್‌ ಕೂಟದ ಆರಂಭಕ್ಕೂ 15 ದಿನ ಮೊದಲು ಅಂತಾರಾಜ್ಯ ವರ್ಗಾವಣೆ ಮತ್ತು ಅತಿಥಿ ಆಟಗಾರರ ನೋಂದಣಿ ಮಾಡಿಸಿಕೊಳ್ಳಬೇಕೆಂದೂ ಕ್ರಿಕೆಟ್‌ ನಿಯಂತ್ರಣ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next