Advertisement

ರಣಹೇಡಿ: ಮಣ್ಣಿನ ಮಕ್ಕಳ ಬದುಕಿನ ಕಥನ!

09:55 AM Nov 26, 2019 | Naveen |

ರೈತ ದೇಶದ ಬೆನ್ನೆಲುಬು ಅಂತೆಲ್ಲ ಒಂದು ಕಡೆ ಕೊಂಡಾಡುತ್ತಿದ್ದರೆ ಇತ್ತ ರೈತರು ನಾನಾ ಸಮಸ್ಯೆಗಳs ಸುಳಿಗೆ ಸಿಕ್ಕು ಆಗಾಗ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಡೀ ದೇಶಕ್ಕೆ ಅನ್ನ ಕೊಡುವ ರೈತರೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂಬುದರ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ ಸಮಸ್ಯೆಯ ಮೂಲಕ ಯಾವುದೆಂಬುದು ಮುಖ್ಯವಾಹಿನಿಯ ಮಂದಿಗೆ ಗೊತ್ತಾಗುವುದೇ ಇಲ್ಲ. ಅಂಥಾ ಸೂಕ್ಷ್ಮ ವಿಚಾರಕ್ಕೆ ಬೆಳಕು ಚೆಲ್ಲಿರುವ ಚಿತ್ರ ರಣಹೇಡಿ. ಸುರೇಶ್ ನಿರ್ಮಾಣ ಮಾಡಿರುವ ಈ ಸಿನಿಮಾ ಇದೇ ತಿಂಗಳ 29ರಂದು ರಾಜ್ಯಾದ್ಯಂತ ತೆರೆ ಕಾಣಲು ರೆಡಿಯಾಗಿದೆ.

Advertisement

ಮನು ಕೆ ಶೆಟ್ಟಿಹಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರವನ್ನು ಈಗಾಗಲೇ ಕನ್ನಡದ ಸಹೃದಯಿ ಪ್ರೇಕ್ಷಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದು ರೈತರ ಕಥಾನಕ ಹೊಂದಿದ್ದರೂ ರಣಹೇಡಿ ಎಂಬ ಹೆಸರನ್ನು ಯಾಕಿಡಲಾಗಿದೆ ಅನ್ನೋ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ. ಆದರೆ ರೈತ ರಣಹೇಡಿಯಲ್ಲ ಯೋಧ ಎಂಬಂಥಾ ಕಥಾ ತಿರುಳನ್ನು ಈ ಸಿನಿಮಾ ಒಳಗೊಂಡಿದೆ ಎಂಬ ಸ್ಪಷ್ಟೀಕರಣವನ್ನು ಚಿತ್ರತಂಡ ಕೊಡುತ್ತದೆ. ಅಷ್ಟಕ್ಕೂ ರೈತರ ಬದುಕೇ ಒಂದು ಹೋರಾಟ. ಅದಕ್ಕೆ ತಕ್ಕುದಾಗಿಯೇ ಈ ಸಿನಿಮಾದಲ್ಲಿ ಮೈ ನವಿರೇಳಿಸುವಂಥಾ ಸಹಜ ಸುಂದರ ಸಾಹಸ ಸನ್ನಿವೇಶಗಳೂ ಇವೆಯಂತೆ.

ನಿರ್ದೇಶಕ ಮನು ಕೆ ಶೆಟ್ಟಿಹಳ್ಳಿ ಇಡೀ ಸಿನಿಮಾದುದ್ದಕ್ಕು ನೈಜತೆಗೆ ಹೆಚ್ಚು ಒತ್ತು ನೀಡಿದ್ದಾರೆ. ಅದರಲ್ಲಿಯೇ ಕಾಡುವಂಥಾ ಕಥೆಯನ್ನು ಕಟ್ಟಿ ಕೊಟ್ಟಿರುವ ಮನು ಒಂದಷ್ಟು ಸಹಜ ಸಾಹಸ ಸನ್ನಿವೇಶಗಳನ್ನೂ ಬೆರೆಸಿದ್ದಾರೆ. ಬೆರೆಸಿದ್ದಾರೆನ್ನುವುದಕ್ಕಿಂತಲೂ ಕಥೆಯೇ ಅಂಥಾದ್ದೊಂದು ಬೇಡಿಕೆ ಇಟ್ಟಿದೆ ಅನ್ನೋದೇ ಸೂಕ್ತ. ಎಲ್ಲವನ್ನೂ ನೈಜವಾಗಿ ರೂಪಿಸಿರೋ ಅವರು ಸಾಹಸ ಸನ್ನಿವೇಶಗಳನ್ನು ಕೂಡಾ ಅಷ್ಟೇ ಚೆಂದಗೆ ದೃಶ್ಯೀಕರಿಸಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next