Advertisement

ಪಕ್ಷದ ಮಾಜಿ ಸಂಸದರು, ಶಾಸಕರ ಜತೆ ಸುರ್ಜೇವಾಲಾ, ಡಿಕೆಶಿ ಸಂವಾದ

09:44 PM May 14, 2021 | Team Udayavani |

ಬೆಂಗಳೂರು: ಬೀದರ್‌, ಕೊಪ್ಪಳ, ರಾಯಚೂರು, ಕಲಬುರಗಿ ಲೋಕಸಭೆ ವ್ಯಾಪ್ತಿಯ ಮಾಜಿ ಸಂಸದರು, ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ಜತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಶುಕ್ರವಾರ ಸಂವಾದ ನಡೆಸಿದರು.

Advertisement

ಸದಾಶಿನಗರದ ನಿವಾಸದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ ಅವರು, ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನ, ಕೊರೊನಾ ಹಿನ್ನೆಲೆಯಲ್ಲಿ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.

ರಾಜ್ಯ ಸರ್ಕಾರದ ಕೊರೊನಾ ನಿರ್ವಹಣೆ ವೈಫಲ್ಯ ವಿರುದ್ಧ ವಿಧಾನಸಭೆ ಕ್ಷೇತ್ರಾವಾರು ಹೋರಾಟ ರೂಪಿಸಲಾಗುವುದು. ಸ್ಥಳೀಯವಾಗಿ ಇರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಬೇಕು. ಮಾಜಿ ಸಂಸದರು, ಶಾಸಕರು ಹಾಗೂಹಾಲಿ ಶಾಸಕರು, ವಿಧಾನಪರಿಷತ್‌ ಸದಸ್ಯರು ವೈಯಕ್ತಿಕವಾಗಿ ಕೊರೊನಾ ಪೀಡಿತರು ಹಾಗೂ ಕುಟುಂಬದವರಿಗೆ ಸಾಧ್ಯವಾದಷ್ಟೂ ನೆರವು ಒದಗಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ :ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ 9.5 ಕೋಟಿ ಜನರಿಗೆ ಎಂಟನೇ ಕಂತು ಬಿಡುಗಡೆ : ಕಟೀಲ್

Advertisement

Udayavani is now on Telegram. Click here to join our channel and stay updated with the latest news.

Next