Advertisement

ರಮ್ಯಾ ಕೊಟ್ಟ ಸವಾಲಿಗೆ ತಿರುಗೇಟು! ಫೋಟೋ ಫ‌ುಲ್‌ ವೈರಲ್‌ 

09:36 AM Aug 23, 2017 | |

ಬೆಂಗಳೂರು : ನಟಿ, ಕಾಂಗ್ರೆಸ್‌ ಸಾಮಾಜಿಕ ತಾಣಗಳ ಜವಾಬ್ದಾರಿ ಹೊತ್ತಿರುವ ರಮ್ಯಾ ಅವರು ಪ್ರಧಾನಿ ಮೋದಿ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿರುವ ಫೋಟೋ ಹುಡುಕಿ ಕೊಟ್ಟರೆ 25 ಸಾವಿರ ಕೊಡುವುದಾಗಿ ಹೇಳಿ  ಸಾವಾಲು ಹಾಕಿದ್ದ  ಪೋಸ್ಟ್‌ಗೆ ಟ್ವೀಟರ್‌ ಹಿಂಬಾಲಕನೋರ್ವ ಮಾಡಿರುವ ಪ್ರತಿಕ್ರಿಯೆ ವೈರಲ್‌ ಆಗಿದೆ.

Advertisement

ನವೀನ್‌ ಸಾಗರ್‌ ಎಂಬ ಯುವಕ ಟ್ವೀಟರ್‌ ನಲ್ಲಿ ರಮ್ಯಾ ನಟಿಸಿದ್ದ ತಮಿಳು ಚಿತ್ರವೊಂದರ ಹಸಿ ಬಿಸಿ ದೃಶ್ಯಗಳ ಚಿತ್ರಗಳನ್ನು ಜೋಡಿಸಿ ‘ರಮ್ಯಾ ನೆರೆ ಸಂತ್ರಸ್ತನೊಂದಿಗೆ ಇದ್ದು,ಅವರಿಗೆ ಇದಕ್ಕಾಗಿ 6 ಲಕ್ಷ ರೂಪಾಯಿ ನೀಡಿರುವ ಬಗ್ಗೆ ವರದಿಯಾಗಿದೆ. ಚಿತ್ರ ಫೋಟೋ ಶಾಪ್‌ ಮಾಡಲಾಗಿಲ್ಲ. ನೈಜ ಚಿತ್ರ’ ಎಂದು ಬರೆದಿದ್ದಾರೆ.

2008 ರಲ್ಲಿ ಬಿಡುಗಡೆಯಾದ ‘ಥೊಂಡಿಲ್‌’ ಎಂಬ ತಮಿಳು ಚಿತ್ರದಲ್ಲಿ ರಮ್ಯಾ ನಾಯಕ ಶ್ಯಾಮ್‌ ಜೊತೆಗೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. 

ಓಕೆ..ಒಂದು ವೇಳೆ ನೀವು ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ, ಗುಜರಾತ್ ಅಥವಾ ಬಿಹಾರದಲ್ಲಿ  ನೆರೆ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ ಫೋಟೋವನ್ನು (ಫೋಟೋಶಾಪ್ ಅಲ್ಲ) ಹುಡುಕಿ ಕೊಟ್ಟರೆ 25 ಸಾವಿರ ರೂಪಾಯಿ ನಗದು ನೀಡುವುದಾಗಿ ಸವಾಲು ಹಾಕಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next