Advertisement
ಮಾನ್ಯ ಡಿಕೆಶಿ ಅವರೇ, ನಿಮ್ಮ ಹೇಳಿಕೆಯನ್ನು ಪಕ್ಷದ ವೇದಿಕೆಯಲ್ಲಿ ಪ್ರಶ್ನಿಸುತ್ತೇನೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ದೆಹಲಿ ವರಿಷ್ಠರ ಮುಂದೆಯೇ ನಿಮ್ಮ ನಾಯಕತ್ವದ ಪ್ರಶ್ನೆಗೆ ವೇದಿಕೆ ಸಿದ್ದವಾಗುತ್ತಿದೆಯೇ, ಅಸಹಾಯಕ ಡಿಕೆಶಿ? ಚುನಾವಣೆಯ ಹೊಸ್ತಿಲಲ್ಲಿ ಡಿ.ಕೆ. ಶಿವಕುಮಾರ್ ಜತೆ ಎಷ್ಟು ಮಂದಿ ನಿಲ್ಲಬಹುದು ಎಂದು ಕಾಂಗ್ರೆಸಿಗರು ಈಗಲೇ ನಿರ್ಧರಿಸಿರಬಹುದು.ಮೀರ್ ಸಾದಿಕ್ ಬಣದ ಜೊತೆಗೆ, ಅಸಹಾಯಕ ಡಿಕೆಶಿ ಅವರ ವಿರೋಧಿಗಳ ಸಾಲಿಗೆ ಈಗ ಮಾಜಿ ಸಂಸದೆ ರಮ್ಯಾ ಕೂಡಾ ಸೇರಿದ್ದಾರೆ. ಡಿಕೆಶಿ ಅವರೇ, ಸಹೋದರ ಡಿ.ಕೆ.ಸುರೇಶ್ ಅವರಾದರೂ ನಿಮ್ಮ ಜೊತೆ ನಿಲ್ಲಬಹುದೇ? ಎಂದು ಟ್ವೀಟ್ ಮೂಲಕ ಬಿಜೆಪಿ ಕಾಲೆಳೆದಿದೆ.
Related Articles
Advertisement
ಕಾಂಗ್ರೆಸ್ ಒಂದು ಒಡೆದ ಮನೆ. ಇಲ್ಲಿ ಯಾರ ಅಭಿಪ್ರಾಯವನ್ನು ಯಾರು ಸಮರ್ಥಿಸುತ್ತಾರೆ, ಯಾರು ವಿರೋಧಿಸುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ.ಎಂ.ಬಿ. ಪಾಟೀಲ್ ಹಾಗೂ ಅಶ್ವತ್ಥ್ ನಾರಾಯಣ ಅವರ ಭೇಟಿಯ ಬಗ್ಗೆ ಮಾತನಾಡಿದ #ಅಸಹಾಯಕಡಿಕೆಶಿ ಅವರೀಗ ತಮ್ಮ ಸ್ವಂತ ಮನೆಯಲ್ಲೇ ಉಪವಾಸ ಮಾಡುವ ಸ್ಥಿತಿಯಲ್ಲಿದ್ದಾರೆ.ಹೀಗೇಕಾಯಿತು ಡಿ.ಕೆ. ಶಿವಕುಮಾರ್ ಅವರೇ? ಅಕ್ರಮ ಸಂಪಾದನೆಯ ಹಣದ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಏನೋ ಸಾಧನೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಡಿ.ಕೆ. ಶಿವಕುಮಾರ್ ಅವರೀಗ ಅಸಹಾಯಕ ಡಿಕೆಶಿ ಆಗಿದ್ದಾರೆ. ಕೆಪಿಸಿಸಿ ಮನೆಯಲ್ಲಿ ಈಗ ಮೀರ್ ಸಾದಿಕ್ ಹಾವಳಿ ಜಾಸ್ತಿಯಾಗಿದ್ದು ನಿಜವೇ? ಗುಂಪುಗಾರಿಕೆ, ಬಣ, ಉಪಬಣ, ಆ ಬಣ ಈ ಬಣಗಳ ನಡುವೆಯೂ ಒಗ್ಗಟ್ಟಿನ ಮಂತ್ರವೇಕೆ? ಎಂದು ಟ್ವೀಟ್ ಮೂಲಕ ಸವಾಲೆಸೆದಿದೆ.