ಹೈದರಾಬಾದ್: ಮಾಧ್ಯಮ ರಂಗದ ಭೀಷ್ಮ ಎಂದೇ ಪ್ರಸಿದ್ದಿ ಪಡೆದಿರುವ ರಾಮೋಜಿ ಫಿಲ್ಮ್ ಸಿಟಿಯ ಸಂಸ್ಥಾಪಕ ರಾಮೋಜಿ ರಾವ್ ಅವರು ಇಂದು(ಶನಿವಾರ) ಮುಂಜಾನೆ ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇತ್ತೀಚಿಗೆ ಅವರನ್ನು ಹೈದರಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಈ ವೇಳೆ ಅರೋಗ್ಯ ಸ್ಥಿತಿ ಗಂಭೀರವಾಗಿದ್ದು ಇಂದು ಮುಂಜಾನೆ ಸುಮಾರು 3.45ಕ್ಕೆ ನಿಧನಹೊಂದಿರುವುದಾಗಿ ಕುಟುಂಬ ಮೂಲಗಳು ಮಾಹಿತಿ ನೀಡಿವೆ.
ಮಾಹಿತಿ ಪ್ರಕಾರ, ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಅವರ ನಿವಾಸಕ್ಕೆ ಕರೆತರಲಾಗುತ್ತಿದೆ. ಅಲ್ಲಿ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳು ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಲಿದ್ದಾರೆ.
ಖ್ಯಾತ ನಿರ್ಮಾಪಕರೂ ಆಗಿದ್ದ ಅವರು ಹೈದರಾಬಾದಿನಲ್ಲಿ ರಾಮೋಜಿ ಫಿಲಂ ಸಿಟಿ ಸ್ಥಾಪಿಸುವ ಮೂಲಕ ಚಿತ್ರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದರು. ಅಷ್ಟು ಮಾತ್ರವಲ್ಲದೆ ರಾಮೋಜಿ ಫಿಲಂ ಸಿಟಿ ಪ್ರೇಕ್ಷಣೀಯ ಸ್ಥಳವಾಗಿ ಮಾತ್ರವಲ್ಲದೆ ‘ಬಾಹುಬಲಿ’ ಸೇರಿದಂತೆ ಹಲವು ಚಿತ್ರಗಳು ಇಲ್ಲಿ ನಿರ್ಮಾಣಗೊಂಡಿತ್ತು.
ರಾಮೋಜಿ ರಾವ್ ಒಡೆತನದಲ್ಲಿ ಈನಾಡು ಪತ್ರಿಕೆ, ಈಟಿವಿ ನೆಟ್‌ವರ್ಕ್, ರಮಾದೇವಿ ಪಬ್ಲಿಕ್ ಸ್ಕೂಲ್, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಮತ್ತು ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್‌ಗಳು ಸೇರಿವೆ.
ರಾಮೋಜಿ ರಾವ್ ನಿಧನಕ್ಕೆ ಚಿತ್ರರಂಗದ ಹಿರಿಯ ನಾಯಕರು, ನಿರ್ದೇಶಕರು, ಸೇರಿದಂತೆ ರಾಜಕೀಯ ನಾಯಕರು ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: Horoscope: ವೃತ್ತಿರಂಗದಲ್ಲಿ ಮುನ್ನಡೆ. ಸ್ವತಂತ್ರ ಉದ್ಯಮಿಗಳಿಗೆ ಎದುರಾಳಿಗಳಿಂದ ಸ್ಪರ್ಧೆ