Advertisement

ವಿಂಡೀಸಿಗರಿಗೆ ಲಾರಾ, ಸರವಣ್‌ ತರಬೇತಿ

12:43 AM Aug 17, 2019 | Sriram |

ಆ್ಯಂಟಿಗುವಾ: ಏಕದಿನ ಮತ್ತು ಟಿ-20 ಸರಣಿಗಳನ್ನು ಕಳೆದುಕೊಂಡು ನಿರಾಶೆಗೊಂಡಿರುವ ವೆಸ್ಟ್‌ ಇಂಡೀಸ್‌ ತಂಡ ಟೆಸ್ಟ್‌ ನಲ್ಲಾದರೂ ಭಾರತಕ್ಕೆ ತಿರುಗಿ ಬೀಳುವ ಸನ್ನಾಹದಲ್ಲಿದೆ. ಇದಕ್ಕಾಗಿ ವೆಸ್ಟ್‌ ಇಂಡೀಸ್‌ನ ಕ್ರಿಕೆಟ್‌ ದಿಗ್ಗಜರಾದ ಬ್ರಿಯಾನ್‌ ಲಾರಾ ಮತ್ತು ರಾಮ್‌ನರೇಶ್‌ ಸರವಣ್‌ ತಂಡದ ನೆರವಿಗೆ ಧಾವಿಸಿದ್ದಾರೆ.

Advertisement

ವಿಂಡೀಸ್‌ ತಂಡ ಭಾರತದ ವಿರುದ್ಧ 2 ಟೆಸ್ಟ್‌ಗಳನ್ನು ಆಡಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಆ್ಯಂಟಿಗುವಾದಲ್ಲಿ ವಿಂಡಿಸಿಗರಿಗೆ ಪುಟ್ಟದಾದ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಆಡುವ ಬಳಗದಲ್ಲಿರುವ 13 ಮಂದಿ ಜತೆಗೆ ಲಾರಾ ಮತ್ತು ಸರವಣ್‌ ಕ್ರಿಕೆಟ್‌ ಕುರಿತಾಗಿರುವ ತಮ್ಮ ಜ್ಞಾನ, ಕೌಶಲ, ಅನುಭವ ಮತ್ತು ಪರಿಣತಿಗಳನ್ನು ಹಂಚಿಕೊಳ್ಳಲಿದ್ದಾರೆ.

ಇದೊಂದು ರೀತಿಯಲ್ಲಿ ಬ್ರೈನ್‌ಸ್ಟ್ರೋಮಿಂಗ್‌ ಸೆಶನ್‌ ಇದ್ದಂತೆ. ಅಂದರೆ ಕ್ರಿಕೆಟಿಗರನ್ನು ಮಾನಸಿಕವಾಗಿ ಸಜ್ಜುಗೊಳಿಸುವ ಕೆಲಸ. ದಿಗ್ಗಜರಿಬ್ಬರು ಮೈದಾನದಲ್ಲಿ ಮತ್ತು ಮೈದಾನದಾಚೆ ಈ ಕೆಲಸವನ್ನು ಮಾಡಲಿದ್ದಾರೆ. ಕ್ರಿಕೆಟ್‌ ಅಭ್ಯಾಸ ಮಾಡುವುದಕ್ಕಿಂತಲೂ ಕ್ರಿಕೆಟ್‌ ತಂತ್ರದ ಬಗ್ಗೆ ಹೇಳಿಕೊಡುವುದು ಅವರ ಕೆಲಸ.

Advertisement

Udayavani is now on Telegram. Click here to join our channel and stay updated with the latest news.

Next