Advertisement
ಮುಖ್ಯಮಂತ್ರಿಗಳ ಅಭಯ: ಬಿಜೆಪಿಗೆ ಬಂದ ನಂತರ ಸಾಕಷ್ಟು ಸವಾಲು, ಸಮಸ್ಯೆಗಳನ್ನು ಎದುರಿಸಿದ್ದ ರಮೇಶ ಜಾರಕಿಹೊಳಿ ಅವರಿಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಚುನಾವಣೆ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ಮಾಡಿದರು. ಪ್ರಚಾರ ಹಾಗೂ ಗೆಲುವಿನ ಉಸ್ತುವಾರಿ ವಹಿಸಿ ಕೊಂಡರು. ಅದಕ್ಕೆ ಮುಖ್ಯಮಂತ್ರಿ ಯಡಿ ಯೂರಪ್ಪ ಬೆಂಬಲವಾಗಿ ನಿಂತರು.
Related Articles
Advertisement
ಮೂರನೇ ಸ್ಥಾನಕ್ಕೆ ಅಶೋಕ್: ಕಾಂಗ್ರೆಸ್ ಟಿಕೆಟ್‌ಗಾಗಿ ಕೊನೆಯ ಗಳಿಗೆಯವರೆಗೆ ಕಾದಿದ್ದ ಅಶೋಕ ಪೂಜಾರಿಗೆ ಕೊನೆಗೆ ಬಂದಿದ್ದು ನಿರಾಸೆಯ ಉತ್ತರ. ಹಟಕ್ಕೆ ಬಿದ್ದು, ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧೆ ಮಾಡಿದರು. ಆದರೆ ಮತದಾರರ ಮುಂದೆ ಪೂಜಾರಿ ಅವರ ಆಟ ನಡೆಯಲಿಲ್ಲ. ಹೀಗಾಗಿ ಕಳೆದ ಚುನಾವಣೆಯಲ್ಲಿ 2ನೇ ಸ್ಥಾನದಲ್ಲಿದ್ದ ಪೂಜಾರಿ ಈ ಬಾರಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ಗೆದ್ದವರುರಮೇಶ ಜಾರಕಿಹೊಳಿ (ಬಿಜೆಪಿ)
ಪಡೆದ ಮತ: 87,450
ಗೆಲುವಿನ ಅಂತರ: 29,006 ಸೋತವರು
ಲಖನ್ ಜಾರಕಿಹೊಳಿ (ಕಾಂಗ್ರೆಸ್)
ಪಡೆದ ಮತ: 58,444 ಅಶೋಕ್ ಪೂಜಾರಿ(ಜೆಡಿಎಸ್)
ಪಡೆದ ಮತ: 27,948 ರಮೇಶ್ ಗೆದ್ದದ್ದು ಹೇಗೆ?
-ಬಿಜೆಪಿಯ ಸಂಘಟಿತ ಪ್ರಚಾರ. ಕರಾರುವಾಕ್ ಕಾರ್ಯ ತಂತ್ರ. ಭರ್ಜರಿ ಕಾರ್ಯಕರ್ತರ ಪಡೆ -ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎರಡು ಬಾರಿಯ ಪ್ರಚಾರ. ಸಚಿವಗಿರಿ ಭರವಸೆ -ರಮೇಶ ಜಾರಕಿಹೊಳಿ ಅವರ ಪ್ರಭಾವ ಹಾಗೂ ಸಹೋದರರ ಆಂತರಿಕ ಹೊಂದಾಣಿಕೆ ಲಖನ್ ಸೋತದ್ದು ಹೇಗೆ?
-ಕಾಂಗ್ರೆಸ್ ನಾಯಕರಲ್ಲಿ ಚುನಾವಣೆಯ ಕೊನೆ ಹಂತದವರೆಗೂ ಕಾಡಿದ ಮನಸ್ತಾಪ ಮತ್ತು ಕೊನೆ ಕ್ಷಣದಲ್ಲಿ ಆದ ಬದಲಾವಣೆಗಳು -ಸಿದ್ದರಾಮಯ್ಯ ಹೊರತುಪಡಿಸಿ ಉಳಿದ ನಾಯಕರು ಪ್ರಚಾರದಿಂದ ದೂರ -ನಿರ್ಣಾಯಕ ಮತದಾರರು ಬಿಜೆಪಿ ಕಡೆ ವಾಲಿದ್ದು. ಸರಿಯಾಗಿ ಪ್ರಚಾರ ಮಾಡದೆ ಇರುವುದು ಮತ್ತು ಪಕ್ಷದಲ್ಲಿ ಸರಿಯಾದ ಬೆಂಬಲ ದೊರಕದಿರುವುದು ಈ ಗೆಲುವು ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಜಿಲ್ಲೆಯಲ್ಲಿ ಉಂಟಾದ ಪ್ರವಾಹದ ಸಂದರ್ಭವನ್ನು ಮರೆತು ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಅವರ ಈ ಋಣವನ್ನು ಯಾವತ್ತೂ ಮರೆಯುವುದಿಲ್ಲ. ಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಅವರ ಸೇವೆ ಮಾಡುತ್ತೇನೆ.
-ರಮೇಶ ಜಾರಕಿಹೊಳಿ, ಬಿಜೆಪಿ ವಿಜೇತ ಅಭ್ಯರ್ಥಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸಿದ್ದು, ಮುಂದೆ ಉತ್ತಮವಾಗಿ ಕೆಲಸ ಮಾಡಲಿ. ಹಳ್ಳಿಗಳನ್ನು ಅಭಿವೃದ್ಧಿ ಗೊಳಿಸಲಿ. ಯಾವುದೇ ಸಮಸ್ಯೆ ಬಂದರೂ ಬಾಲಚಂದ್ರ ನಮ್ಮ ಬಳಿ ಬನ್ನಿ ಅಂತಾ ಹೇಳಿದ್ದಾರೆ. ಇದನ್ನು ಸ್ವಾಗತ ಮಾಡುತ್ತೇವೆ.
-ಲಖನ್ ಜಾರಕಿಹೊಳಿ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ