ಬೆಳಗಾವಿ: ಸಿಎಂ ಬಿ.ಎಸ್.ಯಡಿಯೂರಪ್ಪನವರು ಜಿಲ್ಲೆಗೆ ಆಗಮಿಸುವ ವೇಳೆಯೇ ಗೋಕಾಕದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಮಂಗಳವಾರ ಮಧ್ಯಾಹ್ನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದು ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಸುಮಾರು 15ಕ್ಕೂ ಹೆಚ್ಚು ಶಾಸಕರನ್ನು ರಾಜೀನಾಮೆ ಕೊಡಿಸುವ ಮೂಲಕ ದೋಸ್ತಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ರಮೇಶ ಜಾರಕಿಹೊಳಿ, ಈಗ ಬಿಜೆಪಿ ವಲಯದಲ್ಲಿ ಗುರುತಿಸಿಕೊಂ ಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಯಾಗಲು ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಗಮನದ ಸಂದರ್ಭದಲ್ಲಿಯೇ ರಮೇಶ ಅವರು, ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಯಡಿಯೂರಪ್ಪ ಬರುವವರೆಗೆ ಕಾಯುತ್ತ ನಿಂತಿದ್ದು ವಿಶೇಷವಾಗಿತ್ತು.
ವಿಮಾನ ನಿಲ್ದಾಣಕ್ಕೆ ಬಂದವರೇ ತಮ್ಮ ಬೆಂಬಲಿಗರ ಕೈ ಕುಲುಕಿ ಮಾಧ್ಯಮದವರ ಕಣ್ಣು ತಪ್ಪಿಸಿ ನೇರವಾಗಿ ಒಳಗೆ ಹೋದರು. ಯಡಿಯೂರಪ್ಪ ಬರುವಿಕೆಗಾಗಿ ಕಾಯುತ್ತ ನಿಂತಿದ್ದ ಬಿಜೆಪಿ ಮುಖಂಡರು, ರಮೇಶ ಅವರನ್ನು ಕಂಡು ಹೌಹಾರಿದರು. ರಮೇಶ ಜಾರಕಿಹೊಳಿ ಬಂದಿದ್ದು ಕುತೂ ಹಲಕ್ಕೆ ಕಾರಣವಾಯಿತು. ಅಲ್ಲಿಯೇ ಇದ್ದ ಬಿಜೆಪಿ ಮಹಾ ನಗರ ಅಧ್ಯಕ್ಷ ರಾಜೇಂದ್ರ ಹರಕುಣಿ ಹಾಗೂ ಮುಖಂಡ ಎಂ.ಬಿ.ಜಿರಲಿ ಜೊತೆ ಕೆಲ ಹೊತ್ತು ಹರಟೆ ಹೊಡೆದರು.
ಯಡಿಯೂರಪ್ಪ ಅವರು ವಿಮಾನದಿಂದ ಕೆಳಗಿಳಿಯು ತ್ತಿದ್ದಂತೆ ರಮೇಶ ಅವರು ತಾವು ನಿಂತಿದ್ದ ಸ್ಥಳದಿಂದ ನೇರವಾಗಿ ಮುಖ್ಯಮಂತ್ರಿ ಬಿಎಸ್‌ವೈ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬರುವ ದಿಕ್ಕಿನೆಡೆಗೆ ಹೋದರೂ ಅವರೊಂದಿಗೆ ಮುಖಾಮುಖೀಯಾಗದೆ ನಿಲ್ದಾಣದೊಳಗೆ ತೆರಳಿದರು. ನಂತರ ಮುಂಬೈಗೆ ಪ್ರಯಾಣ ಬೆಳೆಸಿದರು.
ಕತ್ತಿ ಸಹೋದರರು ಗೈರು: ಯಡಿಯೂರಪ್ಪ ಆಗಮನ ವೇಳೆ ಬಿಜೆಪಿಯ ಪ್ರಭಾವಿ ಶಾಸಕ ಉಮೇಶ ಕತ್ತಿ ಬಂದಿರ ಲಿಲ್ಲ. ಯಾವಾಗಲೂ ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಳ್ಳುತ್ತಿದ್ದ ಕತ್ತಿ ಸಹೋದರರು, ಈ ಬಾರಿ ಸ್ವಾಗತ ಕೋರಲೂ ಬಂದಿರಲಿಲ್ಲ. ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಮುನಿಸಿಕೊಂಡಿರುವ ಉಮೇಶ ಕತ್ತಿ, ಈಗ ಸಿಎಂ ಅವರನ್ನು ಭೇಟಿ ಮಾಡದೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.