Advertisement

ಮುಂದುವರಿದ ರಮೇಶ ಬೆಂಬಲಿಗರ ಆಕ್ರೋಶ !

08:45 PM Mar 05, 2021 | Team Udayavani |

ಬೆಳಗಾವಿ: ರಾಜಕೀಯವಾಗಿ ಬೆಳೆಯುತ್ತಿರುವ ಜಾರಕಿಹೊಳಿ ಕುಟುಂಬದ ಏಳ್ಗೆ ಸಹಿಸದೇ ಕೆಲವು ಕುತಂತ್ರಿಗಳು ಅವರ ಹೆಸರಿಗೆ ಕಪ್ಪು ಚುಕ್ಕೆ ತರುವ ಕೆಲಸ ನಡೆಸುತ್ತಿದ್ದು, ಸರ್ಕಾರ ಸೂಕ್ತ ತನಿಖೆ ನಡೆಸಿ ಕಾಣದ ಕೈಗಳನ್ನು ಜನರಮುಂದೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಹಾಗೂಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿದ ಪ್ರತಿಭಟನಾಕಾರರು, ರಮೇಶ ಜಾರಕಿಹೊಳಿಅವರ ತೇಜೋವಧೆ ಮಾಡುತ್ತಿರುವವರನ್ನು ಬಂಧಿ ಸಬೇಕು ಎಂದು ಆಗ್ರಹಿಸಿದರು.ಗೋಕಾಕ ಸೇರಿದಂತೆ ಜಿಲ್ಲೆಯಾದ್ಯಂತ ಜಾರಕಿಹೊಳಿ ಕುಟುಂಬ ಜನರ ಏಳ್ಗೆಗೆ ದುಡಿಯುತ್ತಿದೆ. ಅನೇಕ ವರ್ಷಗಳಿಂದಜನರಿಗಾಗಿ ಬದುಕಿರುವ ಈ ಕುಟುಂಬದ ಹೆಸರು ಹಾಳು ಮಾಡಲು ಕೆಲವು ಕುತಂತ್ರಿಗಳು ಕಾದು ಕುಳಿತಿದ್ದಾರೆ. ಅವರ ಏಳ್ಗೆ ಸಹಿಸಲಾಗದ ಶಕ್ತಿಗಳು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದರ ಹಿಂದೆ ನಿಂತು ಕುತಂತ್ರನಡೆಸಿದ್ದಾರೆ ಎಂದು ದೂರಿದರು.

ಎಪಿಎಂಸಿ ನಿರ್ದೇಶಕ ಆಸೀಫ ಮುಲ್ಲಾ ಮಾತನಾಡಿ, ರಮೇಶ ಜಾರಕಿಹೊಳಿಅವರು ಪ್ರಭಾವಿ ನಾಯಕರಾಗಿ ಬೆಳೆಯುತ್ತಿರುವುದರಿಂದ ಇಂಥ ನೀಚ ಕೃತ್ಯಮಾಡಿರುವ ಕಾಣದ ಕೈಗಳ ಹೆಸರು ಬಹಿರಂಗಪಡಿಸಬೇಕು. ಜನರ ಮುಂದೆ ತಮಗೆ ಕಪ್ಪುಚುಕ್ಕೆ ಬರಬಾರದು ಎಂಬ ಉದ್ದೇಶದಿಂದರಮೇಶ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಾವುದೋಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿಲ್ಲ. ರಾಜಕೀಯದಿಂದ ಈ ಕುಟುಂಬವನ್ನು ನಾಶಮಾಡುವ ದುರುದ್ದೇಶದಿಂದ ಇಂಥ ಕೆಲಸಮಾಡಲಾಗಿದೆ ಎಂದು ಆರೋಪಿಸಿದರು.

ಸರ್ಕಾರ ಕೂಡಲೇ ಈ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ಆವಿಡಿಯೋದಲ್ಲಿರುವ ಮಹಿಳೆ ಯಾರು,ಹೆಸರು, ವಿಳಾಸ ಬಹಿರಂಗಪಡಿಸಬೇಕು. ಈಮಹಿಳೆಯ ಕುಟುಂಬಸ್ಥರು ಜನರ ಮುಂದೆಬರಬೇಕು. ಇದರ ಹಿಂದಿರುವ ತಪ್ಪಿತಸ್ಥರುಮುಂದೆ ಬಂದು ಹೇಳಿಕೆ ನೀಡಬೇಕು.ವರಿಷ್ಠರೊಂದಿಗೆ ಚರ್ಚಿಸಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆನೀಡಿದರು.ಜಿಪಂ ಸದಸ್ಯ ಶಂಕರಗೌಡ ಪಾಟೀಲ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ರಾಜೇಂದ್ರ ಅಂಕಲಗಿ,ತಾಪಂ ಸದಸ್ಯ ಮಹಾಂತೇಶ ಅಲಾಬಾದಿ,ಮುಖಂಡರಾದ ಶಿವಾಜಿ ಸುಂಠಕರ,ವಿಜಯಾ ಹಿರೇಮಠ, ಪƒಥ್ವಿ ಸಿಂಗ್‌, ನಾನಪ್ಪಪಾರ್ವತಿ ಸೇರಿದಂತೆ ಬೆಳಗಾವಿ ಗ್ರಾಮೀಣಕ್ಷೇತ್ರದ ಕಾರ್ಯಕರ್ತರು, ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next