Advertisement

ಸಿ.ಡಿ ಲೇಡಿಯ ಆಡಿಯೋದಲ್ಲಿ ‘ಮಹಾನಾಯಕ’ ಹೆಸರು ಪ್ರಸ್ತಾಪ : ಯಾರು ಆತ ?  

09:05 PM Mar 26, 2021 | Team Udayavani |

ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಅವರದು ಎನ್ನಲಾಗಿರುವ ಸಿ.ಡಿ ಪ್ರಕರಣ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದೆ. ಸಿಡಿಯಲ್ಲಿರುವ ಯುವತಿ ತಮ್ಮ ಮನೆಯವರ ಜತೆ ಮಾತನಾಡಿದ್ದಾಳೆ  ಎನ್ನಲಾದ ಆಡಿಯೋ ಇದೀಗ ಬಹಿರಂಗವಾಗಿದ್ದು, ಇದರಲ್ಲಿ ಡಿ.ಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪವಾಗಿದೆ.

Advertisement

ಸದ್ಯ ರಿವೀಲ್ ಆಗಿರುವ ಆಡಿಯೋದಲ್ಲಿ ಯುವತಿ ಮಾತನಾಡುವಾಗ ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪಿಸಿದ್ದಾಳೆ. ಶಾಸಕ ರಮೇಶ್ ಜತೆ ಇರುವ ವಿಡಿಯೋದಲ್ಲಿರುವುದು ನಾನಲ್ಲ ಎಂದು ಮನೆಯವರ ಎದುರು ಕಣ್ಣೀರು ಹಾಕಿದ್ದಾಳೆ. 6 ನಿಮಿಷ 59 ಸೆಕೆಂಡ್ ಗಳ ಆಡಿಯೋದಲ್ಲಿ ಡಿಕೆ ಶಿವಕುಮಾರ್ ಅವರ ಹೆಸರು ಕೇಳಿ ಬಂದಿದೆ.

ಇನ್ನು ಈ ವಿಡಿಯೋ ಬಿಡುಗಡೆಯ ಹಿಂದೆ ಮಹಾನಾಯಕನ ಕೈವಾಡ ಇದೆ ಎಂದು ರಮೇಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರು ಹೇಳಿದ್ದರು. ಆದರೆ, ಈ ಮಹಾನಾಯಕ ಯಾರು ಎನ್ನುವ ರಹಸ್ಯ ಬಹಿರಂಗಗೊಂಡಿರಲಿಲ್ಲ. ಸದ್ಯ ರಿವೀಲ್ ಆಗಿರುವ ಆಡಿಯೋದಲ್ಲಿ ಡಿ.ಕೆ.ಶಿವಕುಮಾರ್ ಅವರ ಹೆಸರು ಪ್ರಸ್ತಾವಾಗಿರುವುದರಿಂದ ಇವರೇನಾ ಆ ಮಹಾ ನಾಯಕ ಎಂದು ಬಿಜೆಪಿ ಪ್ರಶ್ನಿಸಿದೆ.

ಇಂದು ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಆ ಪ್ರಕರಣದ ʼಸಂತ್ರಸ್ಥೆʼ ನೇರವಾಗಿ ಮಹಾನಾಯಕನ ಹೆಸರು ಪ್ರಸ್ತಾಪ ಮಾಡಿದ್ದಾಳೆ. ಮಹಾನಾಯಕ ನಮ್ಮ ಜೊತೆ ಇದ್ದಾನೆ ಎಂಬ ಮಾತುಗಳನ್ನಾಡಿದ್ದಾಳೆ. ಸದನದಲ್ಲಿ ಬೊಬ್ಬಿರಿದ ಮಹಾಶೂರರು ಈಗೇನು ಹೇಳುತ್ತಾರೆ? ಕಾಂಗ್ರೆಸ್‌ ಕಚೇರಿಯಲ್ಲೇ ಷಡ್ಯಂತ್ರ ನಡೆದಿದೆಯೇ!? ಎಂದು ಪಶ್ನಿಸಿದೆ.

Advertisement

ಮತ್ತೊಂದು ಟ್ವೀಟ್‍ನಲ್ಲಿ ‘ಆರಂಭದಿಂದಲೂ ಮಹಾನಾಯಕನ ಸುತ್ತಲೂ ಪ್ರಕರಣ  ಗಿರಕಿ ಹೊಡೆಯುತ್ತಿತ್ತು. ಮಹಾನಾಯಕನ ಮನೆಯ ಬಳಿಗೆ ನಾನು ಬಂದಿದ್ದೇನೆ ಎಂದು ಸಂತ್ರಸ್ಥೆ ಹೇಳಿಕೊಂಡಿದ್ದಾಳೆ. ಮಹಾನಾಯಕನಿಗೂ ಪ್ರಕರಣದ ಮಾಸ್ಟರ್‌ ಮೈಂಡ್‌ಗಳಿಗೂ ಇರುವ ಸಂಬಂಧವವನ್ನು ರಾಜ್ಯ ಕಾಂಗ್ರೆಸ್ ಬಹಿರಂಗಗೊಳಿಸಬೇಕೆಂದು ಟ್ವೀಟ್‍ನಲ್ಲಿ ಬಿಜೆಪಿ ಒತ್ತಾಯಿಸಿದೆ.

ರಮೇಶ್ ವಿರುದ್ಧ ದೂರು :

ಇನ್ನು ಇಂದು (ಶುಕ್ರವಾರ) ಯುವತಿಯ ಎರಡನೇ ವಿಡಿಯೋ ರಿಲೀಸ್ ಬಳಿಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next