Advertisement

ರಾಜ್ಯದ ಅಣೆಕಟ್ಟುಗಳ ಪುನಶ್ಚೇತನಕ್ಕೆ ಕೇಂದ್ರದಿಂದ 750 ಕೋಟಿ: ರಮೇಶ್‌ ಜಾರಕಿಹೊಳಿ

08:51 PM Nov 27, 2020 | sudhir |

ಬೆಂಗಳೂರು: ರಾಜ್ಯದ ಅಣೆಕಟ್ಟುಗಳ ಪುನಶ್ಚೇತನ ಹಾಗೂ ಸುಧಾರಣಾ ಯೋಜನೆಗಳ ಅನುದಾನದಲ್ಲಿ ಕರ್ನಾಟಕದ ಹಲವು ಅಣೆಕಟ್ಟುಗಳ ಸಬಲೀಕರಣಕ್ಕೆ ಕೇಂದ್ರ ಸರ್ಕಾರ 750 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ.
ರಾಜ್ಯದ ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರ ಪ್ರಯತ್ನದಿಂದ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಿದ್ದಾರೆ.

Advertisement

ಕೇಂದ್ರ ಜಲ ಶಕ್ತಿ ಆಯೋಗವು ದೇಶದ ಪ್ರಮುಖ ಆಣೆಕಟ್ಟುಗಳ ಸಬಲೀಕರಣಕ್ಕಾಗಿ ವಿಶ್ವ ಬ್ಯಾಂಕ್‌ ನೆರವಿನ ಡ್ರಿಪ್‌ ಯೋಜನೆ ಅಡಿಯಲ್ಲಿ ಗಾಯತ್ರಿ ಡ್ಯಾಂ, ತುಂಗಭದ್ರಾ ಡ್ಯಾಂ, ನಾರಾಯಣಪುರ ಮತ್ತು ಕೆಆರ್‌ಎಸ್‌ ಡ್ಯಾಂಗಳ ಸಬಲೀಕರಣ ಸೇರಿದಂತೆ 52 ಅಣೆಕಟ್ಟುಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ 150 ಕೋಟಿ ರೂ.ಗಳ ಬೇಡಿಕೆ ಇಟ್ಟಿತ್ತು.

ಇದನ್ನೂ ಓದಿ:ಪಬ್ ಜಿ ಹೊಸ ಆವೃತ್ತಿ ಭಾರತದಲ್ಲಿ ಈ ವರ್ಷಾಂತ್ಯ ಬಿಡುಗಡೆ ?: ಸಂಸ್ಥೆ ಹೇಳುವುದೇನು ?

ಶುಕ್ರವಾರ ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ರಮೇಶ್‌ ಜಾಕರಿಹೊಳಿ ಕೇಂದ್ರ ಸಚಿವರ ಗಮನ ಸೆಳೆದು 750 ಕೋಟಿ ರೂ. ಅನುದಾನ ಪಡೆಯಲು ಯಶಸ್ವಿಯಾಗಿದ್ದಾರೆ.

ಕೇಂದ್ರ ಸಚಿವರ ಸಭೆಯ ಬಳಿಕ ಮಾತನಾಡಿದ ಸಚಿವ ರಮೇಶ್‌ ಜಾರಕಿಹೊಳಿ, ರಾಜ್ಯದ ನೀರಾವರಿ ಯೋಜನೆಗಳನ್ನು ಕಾಲ ಮಿತಿಯಲ್ಲಿ ಅನುಷ್ಠಾನಗೊಳಿಸಲು ನಾವು ಬದ್ಧರಾಗಿದ್ದೇವೆ. ವಿಶ್ವ ಬ್ಯಾಂಕ್‌ ನೆರವಿನ ಯೋಜನೆಗಳ ಅನುದಾನಕ್ಕೆ ನಾವು ಮಾಡಿದ ಮನವಿಗೆ ಕೇಂದ್ರ ಸಚಿವರು ಸಮ್ಮತಿಸಿದದ್ದು, ಕಾರ್ಯಯೋಜನೆಯನ್ನು ಅಂತಿಮಗೊಳಿಸಿ ಅನುಮೋದನೆ ಪಡೆಯುತ್ತೇವೆ ಎಂದರು.

Advertisement

ಕೇಂದ್ರ ಸಚಿವರ ಜೊತೆ ನಡೆದ ಸಭೆಯಲ್ಲಿ ರಾಜ್ಯದ ಅಪರ್‌ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next