Advertisement

ವಿರೋಧಿ ಅಲೆ ಮೆಟ್ಟಿ ನಿಂತ ಜಿಗಜಿಣಗಿ ಡಬಲ್‌ ಹ್ಯಾಟ್ರಿಕ್‌

03:51 AM May 24, 2019 | Sriram |

ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲು ಹಾಗೂ ಕೇಸರಿ
ಭದ್ರಕೋಟೆ ಎನಿಸಿರುವ ವಿಜಯಪುರ ಕ್ಷೇತ್ರದಿಂದ ಕೇಂದ್ರ ಸಚಿವ
ರಮೇಶ ಜಿಗಜಿಣಗಿ ಹ್ಯಾಟ್ರಿಕ್‌ ಬಾರಿಸಿದ್ದಾರೆ.

Advertisement

ಆ ಮೂಲಕ ತಮ್ಮ ರಾಜಕೀಯ ಜೀವನದ ಲೋಕಸಭೆ ಚುನಾವಣೆಯಲ್ಲಿ ಡಬಲ್‌ ಹ್ಯಾಟ್ರಿಕ್‌ ವಿಜಯದ ಮೂಲಕ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ
ಡಾ| ಸುನೀತಾ ಚವ್ಹಾಣ ಹೀನಾಯ ಸೋಲು ಅನುಭವಿಸುವಂತೆ
ಮಾಡಿದ್ದಾರೆ.

ಚುನಾವಣೆ ಘೋಷಣೆಗೆ ಮುನ್ನವೇ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಕ್ಷೇತ್ರದಲ್ಲಿ ಜಿಪಂ ಕ್ಷೇತ್ರವಾರು ಬಿರುಸಿನ ಪ್ರಚಾರ ನಡೆಸಿದ್ದರು. ಎರಡು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಮಾಡಿ,ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದರೂ ಜಿಲ್ಲೆಗೆ ಹೇಳಿಕೊಳ್ಳುವಂಥ ಒಂದೇ ಒಂದು ಅಭಿವೃದಿಟಛಿ ಕೆಲಸ ಮಾಡಿಲ್ಲ ಎಂಬ ಆಕ್ಷೇಪ ಕೇಳಿ ಬಂದಿತ್ತು. ವಿಪಕ್ಷಗಳಿಗಿಂತ ಸ್ವಪಕ್ಷದ ನಾಯಕ, ಇದೇ ಕ್ಷೇತ್ರದಲ್ಲಿ ಎರಡು ಬಾರಿ ಲೋಕಸಭೆ ಪ್ರವೇಶಿಸಿ, ಕೇಂದ್ರದಲ್ಲಿ ಸಚಿವರೂ ಆಗಿದ್ದ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೇ ಜಿಗಜಿಣಗಿ ವಿರುದಟಛಿ ಬಹಿರಂಗ ಟೀಕೆ ಮಾಡತೊಡಗಿದ್ದರು.

ಚುನಾವಣೆ ಪೂರ್ವದಲ್ಲೇ ನನ್ನ ಮುಖ ನೋಡಿ ಓಟು ಹಾಕಬೇಡಿ, ಮೋದಿ ಮುಖ ನೋಡಿ ಓಟ್‌ ಕೊಡಿ ಎಂದು ಸ್ವಯಂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮನವಿ ಮಾಡಿಕೊಂಡಿದ್ದರು. ಅಷ್ಟರ ಮಟ್ಟಿಗೆ ತಮ್ಮ ವಿರುದ್ಧ  ಇರುವ ಅಲೆಯನ್ನು ಮೋದಿ ಅಲೆಯಾಗಿ ಪರಿವರ್ತಿಸಿಕೊಳ್ಳುವಲ್ಲಿ ಜಿಗಜಿಣಗಿ ಯಶಸ್ವಿಯಾಗಿದ್ದಾರೆ. ಯುವ ಮತದಾರರು, ಬಿಜೆಪಿ ಸಾಂಪ್ರದಾಯಿಕ ಮತಗಳ ಜೊತೆಗೆ ಮೋದಿ ಅಲೆ ಜಿಗಜಿಣಗಿ ಅವರನ್ನು ಗೆಲುವಿನ ದಡ ಸೇರಿಸುವಲ್ಲಿ ನೆರವಾಗಿದೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಮೈತ್ರಿ ಪಕ್ಷಗಳ ಸ್ಥಾನ ಹೊಂದಾಣಿಕೆ ಸಂದರ್ಭದಲ್ಲಿ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಪಡೆದು ಸಮರ್ಥರಿಗೆ ನೀಡಲು ಯೋಜಿಸಲಾಗಿತ್ತು.

ಇದಕ್ಕಾಗಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಮೂಲ ಅಸ್ಪೃೃಶ್ಯ ಸಮುದಾಯಕ್ಕೆ ಸೇರಿದ ಮಾಜಿ ಶಾಸಕರಾದ ಪ್ರೊ| ರಾಜು ಅಲಗೂರು, ವಿಠಲ ಕಟಕದೊಂಡ ಟಿಕೆಟ್‌ ಸಿಗುತ್ತದೆ ಎಂಬ ನಿರೀಕ್ಷೆ ಹೆಚ್ಚಿತ್ತು. ಜೆಡಿಎಸ್‌ನ ಪ್ರಬಲ ಆಕಾಂಕ್ಷಿ ಸಿದ್ದು ಕಾಮತ್‌ಗೂ ಕೂಡ ಟಿಕೆಟ್‌ ಸಿಗಲಿಲ್ಲ. ಇದರಿಂದಾಗಿ ಮೂಲ ಅಸ್ಪೃಶ್ಯ ಎಡ-ಬಲ ಸಮುದಾಯಗಳೆಲ್ಲ ಒಗ್ಗೂಡಿದ್ದು ಕೂಡ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಕ್ಷೇತ್ರ
ಹೊಂದಾಣಿಕೆ ಹಾಗೂ ಜೆಡಿಎಸ್‌ ಅಭ್ಯರ್ಥಿ ಘೋಷಣೆ ವಿಷಯದಲ್ಲಿ ವಿಳಂಬ, ಹಿರಿಯ ರಾಜಕೀಯ ಚತುರ ಜಿಗಜಿಣಗಿ ವಿರುದಟಛಿ ರಾಜಕೀಯಕ್ಕೆ ಹೊಸಬರಾದ ಡಾ| ಸುನಿತಾ ಚವ್ಹಾಣ ಅವರನ್ನು ಕಣಕ್ಕಿಳಿಸಿದ್ದು ಸಮರ್ಥ ಹಾಗೂ ಪ್ರಬಲ ಅಭ್ಯರ್ಥಿ ಇಲ್ಲದ್ದು, ಬಿಜೆಪಿ ಗೆಲುವಿಗೆ ಸಹಕಾರಿ ಆಯ್ತು.

Advertisement

ಮೋದಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ಪರಿ ನೋಡಿ
ವಿಜಯಪುರ ಕ್ಷೇತ್ರದ ಮತದಾರರು ಮೋದಿ ಕೈ ಬಲ ಪಡಿಸಲು
ನನ್ನನ್ನು ಮತ್ತೂಮ್ಮೆ ಆಯ್ಕೆ ಮಾಡಿದ್ದಾರೆ. ಸಚಿವ ಸ್ಥಾನದ
ಆಕಾಂಕ್ಷಿಯಲ್ಲ, ಇದನ್ನು ಪಕ್ಷ ನಿರ್ಧರಿಸುತ್ತದೆ.
– ರಮೇಶ ಜಿಗಜಿಣಗಿ, ವಿಜೇತ ಅಭ್ಯರ್ಥಿ, ವಿಜಯಪುರ

ಕಾಂಗ್ರೆಸ್‌ ಮೈತ್ರಿ ನಮಗೆ ಫ‌ಲ ನೀಡದೇ ನಕಾರಾತ್ಮಕ ಪರಿಣಾಮ ಬೀರಿದ್ದರಿಂದ ಹಿನ್ನಡೆಗೆ ಕಾರಣವಾಯಿತು. 40 ವರ್ಷ ರಾಜಕೀಯ ಮಾಡಿದ ಜಿಗಜಿಣಗಿ ವಿರುದ್ಧ ಗ್ರಾಪಂ ಚುನಾವಣೆಯನ್ನು ಎದುರಿಸದ
ನಾನು ಪ್ರಬಲ ಪೈಪೋಟಿ ನೀಡಿದ್ದೇನೆ.
– ಡಾ| ಸುನೀತಾ ಚವ್ಹಾಣ,
ಪರಾಜಿತ ಜೆಡಿಎಸ್‌
ಅಭ್ಯರ್ಥಿ, ವಿಜಯಪುರ

ಗೆಲುವಿಗೆ 3 ಕಾರಣ
– ಕ್ಷೇತ್ರದಾದ್ಯಂತ ಮೋದಿ ಅಲೆ ಹೆಚ್ಚಾದ್ದು, ಕಾರ್ಯಕರ್ತರ ವ್ಯವಸ್ಥಿತ ಪ್ರಚಾರ ಫ‌ಲ ನೀಡಿತು
– ಮೈತ್ರಿ ಪಕ್ಷದಿಂದ ಪ್ರಬಲ ಸ್ಪರ್ಧಿ ಇಲ್ಲದೇ ಇರುವುದು ಜಿಗಜಿಣಗಿಗೆ
ವರವಾಯಿತು
– ವಿರೋಧಿ ಅಲೆ ಇದ್ದರೂ ಸಭ್ಯ ರಾಜಕಾರಣಿ ಎಂಬ ಅಭಿಮತ ಕೊನೆವರೆಗೂ ಕೈ ಹಿಡಿಯಿತು

ಸೋಲಿಗೆ 3 ಕಾರಣ
– ಕ್ಷೇತ್ರ ಹೊಂದಾಣಿಕೆ ಹಾಗೂ ಅಭ್ಯರ್ಥಿ ಘೋಷಣೆ ವಿಳಂಬ
– ಮೈತ್ರಿ ಪಕ್ಷಗಳ ನಾಯಕರು-ಕಾರ್ಯಕರ್ತರ ಹೊಂದಾಣಿಕೆ ಕೊರತೆ
– ಕ್ಷೇತ್ರದ ಮತದಾರ ಹೊಸ ಮುಖವನ್ನು ಒಪ್ಪದಿರುವುದು

Advertisement

Udayavani is now on Telegram. Click here to join our channel and stay updated with the latest news.

Next