ಶಿರಸಿ: ತಮಿಳು ನಾಡಿಗೆ ನೀರು ಬಿಡುವ ವಿಚಾರದಲ್ಲಿ ರಾಜ್ಯ ಸರಕಾರ ಕನ್ನಡಿಗರದ್ದಾ? ತಮಿಳರದ್ದಾ? ಕನ್ನಡಿಗರ ಪರವಾಗಿ ಧ್ವನಿ ಎತ್ತಿದವರನ್ನು ಬಂಧಿಸಿದ್ದು ಸರಿಯಲ್ಲ ಎಂದು ಕದಂಬ ಸೈನ್ಯದ ರಾಜ್ಯ ಅಧ್ಯಕ್ಷ ರಮೇಶ ಬೇಕ್ರಿ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ, ಪ್ರತಿಭಟನಾನಿರತರ ಜೊತೆ ಸಮಾಧಾನ ಮಾಡುವ ಬದಲು ದ್ವೇಷ ಮಾಡಿದೆ. ಮೇಕೆದಾಟಿಗೆ ನಮ್ಮ ಹಕ್ಕು ನಮ್ಮ ನೀರು ಎಂದು ಡಿ ಕೆ ಶಿವಕುಮಾರ್ ಯಾಕೆ ಈಗ ಹೇಳುವದಿಲ್ಲ? ಸಿಎಂ ಉಪ ಮುಖ್ಯಮಂತ್ರಿಗಳಿಗೆ ಜವಬ್ದಾರಿ ಮಾಡಿದ್ದಾರೆ. ಸರಕಾರ ಜನರ ವಿಶ್ವಾಸ ಪಡೆಯುತ್ತಿಲ್ಲ ಎಂದೂ ಹೇಳಿದರು.
ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು. ಎರಡೂ ರಾಜ್ಯಗಳ ತೇವಾಂಶ ಅಳಿಯಬೇಕಿತ್ತು. ಕೇಂದ್ರವು ರಾಷ್ಟ್ರೀಯ ಜಲ ನೀತಿ ನಿರೂಪಿಸಬೇಕು. ಸಂಕಷ್ಟ ನೀತಿ ನಿರೂಪಿಸಬೇಕು. ಇದು ಯಾವುದೇ ಪಕ್ಷದ ಸೋಲು ಅಲ್ಲ. ಎಲ್ಲ ಪಕ್ಷಗಳು ಒಂದಾಗಿ ಕಾವೇರಿ ಪರ ನಿಲ್ಲಬೇಕು. ರೈತರು ಭಯದಲ್ಲಿ ಜೀವನ ನಡೆಸುವ ಸ್ಥಿತಿ ಇದೆ. ೮ ಜಿಲ್ಲೆಗಳಿಗೆ ಸಮಸ್ಯೆ ಇದೆ. ತಮಿಳು ನಾಡಿನಲ್ಲಿ ನೀರಿದೆ ಎಂದೂ ಹೇಳಿದರು.
ನಾಟಕದ ಕಂಪನಿ ಆಗಿದರ ನಾಯಕರ ಧ್ವನಿ. ಹೋರಾಟಕ್ಕೆ ಅಕ್ಷರಶಃ ಧ್ವನಿಯಾಗಬೇಕು ಎಂದು ಹೇಳಿದರು.
ಡಾ. ರಾಜಕುಮಾರ್ ಬಿಟ್ಟರೆ ಯಾರಿಗೂ ಕನ್ನಡ ಪರ ಧ್ವನಿ ಇಲ್ಲ. ಕನ್ನಡಿಗರಿಂದ ಬೆಳೆದ ಕೆಲವರು ಟ್ವಿಟ್ಟರ್ ಹೇಳಿಕೆ ಮಾತ್ರ ಆಗಿದೆ ಎಂದೂ ಹೇಳಿದರು.
ರಾಜ್ಯ ಸಂಚಾಲಕ ಮೋಹನದಾಸ ನಾಯಕ, ರಾಜ್ಯ ಉಪಾಧ್ಯಕ್ಷ ಡಾ. ದೇವನಳ್ಳಿ ದೇವರಾಜ ಇತರರು ಇದ್ದರು.
ಇದನ್ನೂ ಓದಿ: World Tourism Day:ಪ್ರಕೃತಿ ಸೃಷ್ಟಿಸಿದ ಸ್ವರ್ಗ, ಚಾರಣ ಪ್ರಿಯರ ನೆಚ್ಚಿನ ತಾಣ “ಕೊಡಚಾದ್ರಿ”