Advertisement

ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮದುವೆ ಸಂಭ್ರಮ

07:15 PM Dec 28, 2020 | Adarsha |

ಬೆಂಗಳೂರು: ಖ್ಯಾತ ನಟ, ನಿರೂಪಕ, ನಿರ್ದೇಶಕ ರಮೇಶ್ ಅರವಿಂದ್ – ಅರ್ಚನಾ ದಂಪತಿಗಳ ಪುತ್ರಿ ನಿಹಾರಿಕಾ ಅವರು ತಮ್ಮ ಬಹುಕಾಲದ ಗೆಳೆಯ ಅಕ್ಷಯ್ ಜೊತೆ ಸೋಮವಾರ (ಡಿ.28) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisement

ಬೆಂಗಳೂರಿನ ಬನ್ನೇರುಘಟ್ಟ ಬಳಿ ಇರುವ ರೆಸಾರ್ಟ್ ಒಂದರಲ್ಲಿ ಈ ಶುಭಸಮಾರಂಭ ನಡೆದಿದ್ದು ,ಕೋವಿಡ್ ಹಿನ್ನೆಲೆಯಲ್ಲಿ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ವಿವಾಹ ಮಹೋತ್ಸವ ನೆರವೇರಿದೆ.

ಕಳೆದ  ಎರಡು ದಿನಗಳಿಂದ ನಿಹಾರಿಕಾ ಮದುವೆಯ ಸಂಭ್ರಮ ಜೋರಾಗಿದ್ದು, ಈ ಕುರಿತಾದ ಹಲವಾರು ಪೋಟೋಗಳನ್ನು ನಟ ರಮೇಶ್ ಅರವಿಂದ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ನಿಹಾರಿಕ ಹಾಗೂ ಅಕ್ಷಯ್ ಅವರು ಬಹುಕಾಲದ ಗೆಳೆಯರಾಗಿದ್ದು, ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ತದ ನಂತರ ತಮ್ಮ ಪ್ರೀತಿ ವಿಚಾರವನ್ನು ಕುಟುಂಬದವರ ಬಳಿ ತಿಳಿಸಿ  ಮನೆಯವರ ಒಪ್ಪಿಗೆ  ಪಡೆದುಕೊಂಡಿದ್ದರು.

Advertisement

ಇದನ್ನೂ ಓದಿ:ಪ್ರಾರಂಭೋತ್ಸವಕ್ಕೆ ಸಿದ್ಧತೆ ಕೈಗೊಳ್ಳಿ

ವಿವಾಹ ಮಹೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲು ಕುಟುಂಬದವರು ತಿರ್ಮಾನಿಸಿದ್ದರು ಆದರೆ ಕೋವಿಡ್ ಹಿನ್ನಲೆಯಲ್ಲಿ ಕೆಲವೇ ಕೆಲವು ಆಪ್ತರು ಹಾಗೂ ಕುಟುಂಬದ ಸದಸ್ಯರನ್ನು ಮಾತ್ರ ಆಮಂತ್ರಿಸಲಾಗಿತ್ತು.

ವಿವಾಹದ ಹಿಂದಿನ ದಿನ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಹಲವಾರು ತಾರೆಯರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಭಾಗಿಯಾಗಿದ್ದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಮಾರಂಭದ ಪೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಹೆಣ್ಣುಮಕ್ಕಳ ಮದುವೆ ಮಾಡುವಾಗ  ಅಪ್ಪ- ಅಮ್ಮ ಪಡುವ ಖುಷಿಗೆ ಪಾರವೆಲ್ಲಿ? ಅಕ್ಷಯ್ ನನ್ನು ಒರಿಸಿರುವ ನಿಹಾರಿಕೆಯ ಬಾಳು ಬೆಳಗಲಿ ಎಂದು ಮದು ಮಕ್ಕಳನ್ನು ಹರಸಿದರು.

Advertisement

Udayavani is now on Telegram. Click here to join our channel and stay updated with the latest news.

Next