Advertisement
ತಾಲೂಕಿನಲ್ಲಿ ಪ್ರವಾಸಿ ತಾಣವಾಗಿ ನಿರ್ಮಾಣವಾಗುತ್ತಿರುವ ಈ ಕ್ಷೇತ್ರ ಮುಂದೊಂದು ದಿನ ಅತ್ಯಂತ ಭವ್ಯವಾಗಿ ಬೆಳೆಯಲಿದೆ. ಧಾರ್ಮಿಕ ಪುಣ್ಯಕ್ಷೇತ್ರವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮುಂದಿನ ಯೋಜನೆಗಳ ಕುರಿತಾದ ನೀಲನಕ್ಷೆಯಯನ್ನು ಜಿಲ್ಲಾಧಿಕಾರಿಗಳಿಗೆ ಸರಕಾರಿ ಮುಖ್ಯ ಸಚೇತಕ ಅಶೋಕ ಪಟ್ಟಣ ವಿವರಿಸಿದರು.
ಪಟ್ಟಣದ, ಪರಪ್ಪ ಜಂಗವಾಡ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ರಮೇಶ ಬಂಡಿವಡ್ಡರ, ಹನಮಂತ ಕೋಟಗಿ, ಸಂತೋಷ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿವಿಧ ಕಾಮಗಾರಿಗಳ ವೀಕ್ಷಣೆ: ಪಟ್ಟಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಪುರಸಭೆಯ ವ್ಯಾಪ್ತಿಯಲ್ಲಿ ಪಟ್ಟಣದ ವಿವಿಧ ವಾರ್ಡಗಳಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ಕಾಮಗಾರಿಗಳ ವೀಕ್ಷಣೆ ನಡೆಸಿದರು.
Related Articles
ಗುಣಮಟ್ಟದ ವರದಿ ಪಡೆದ ನಂತರವೇ ಬಿಲ್ ಸಂದಾಯ ಮಾಡಲಾಗುವದು. ಅಲ್ಲದೇ ನಗರೋತ್ಥಾನ ಯೋಜನೆಯಡಿ ಇನ್ನೂ 1.5 ಕೋಟಿ ಅನುದಾನದ ಕಾಮಗಾರಿಗಳಿಗೆ ವರ್ಕ್ ಆರ್ಡರ್ ನೀಡಿಲ್ಲ. ಅವುಗಳನ್ನು ಪರಿಶೀಲಿಸಿ ಕಾಮಗಾರಿ ಕೈಗೊಳ್ಳಲಾಗುವದು. ಅಲ್ಲದೇ ಶಾಸಕರೊಂದಿಗೆ ತಾಲೂಕಿನ ಅನೇಕ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿದ್ದು, ಅವುಗಳನ್ನು ಕೈಗೊಳ್ಳಲು ಕ್ರಮವಹಿಸುವುದಾಗಿ ತಿಳಿಸಿದರು.
Advertisement
ಈ ಮೊದಲು ರಾಮದುರ್ಗ ತಾಲೂಕನ್ನು ಬರ ಪಟ್ಟಯಿಂದ ಕೈಬಿಡಲಾಗಿತ್ತು. ಶಾಸಕರು ಸಚಿವರ ಗಮನಕ್ಕೆ ತಂದು ಬರಗಾಲ ತಾಲೂಕು ಘೋಷಣೆಗೆ ಶ್ರಮಿಸಿದ್ದಾರೆ. ಸದ್ಯದಲ್ಲಿಯೇ ಕೇಂದ್ರ ವೀಕ್ಷಣೆ ತಂಡ ಆಗಮಿಸಲಿದೆ ಎಂದರು.