Advertisement

ಪತಂಜಲಿ ಕೋವಿಡ್ ಔಷಧಿಗೆ ಆಯುಷ್ ಸಚಿವಾಲಯದಿಂದ ತಡೆ: ವಿವರ ನೀಡಲು ಸೂಚನೆ

08:14 AM Jun 24, 2020 | Mithun PG |

ನವದೆಹಲಿ: ಕೋವಿಡ್ 19 ವೈರಸ್ ಹೊಡೆದೋಡಿಸಲು ಪತಂಜಲಿ ಬಿಡುಗಡೆ ಮಾಡಿದ ಔಷಧಿಗೆ ಕೇಂದ್ರ ಸರ್ಕಾರ ತಡೆಯೊಡ್ಡಿದೆ. ಏಳು ದಿನಗಳಲ್ಲಿ ಸೋಂಕಿತ ವ್ಯಕ್ತಿಯನ್ನು  ಗುಣಪಡಿಸುವ ಸಾಮರ್ಥ್ಯ ಈ ಔಷಧಿಗಿದೆಯೆಂದು ಹೇಳಿದ್ದ ಯೋಗ ಗುರು ಬಾಬಾ ರಾಮ್ ದೇವ್ ಅವರಿಗೆ ಈಗ ತೀವ್ರ ಹಿನ್ನಡೆಯಾಗಿದ್ದು, ಆಯಷ್ ಸಚಿವಾಲಯ ಔಷಧಿ ಸಂಶೊಧನೆ ಕುರಿತು ವಿವರ ಸಲ್ಲಿಸುವಂತೆ ಸೂಚನೆ ನೀಡಿದೆ.

Advertisement

ಮಾತ್ರವಲ್ಲದೆ ಪತಂಜಲಿ ಸಂಸ್ಥೆ ನಡೆಸಿದ ಸಂಶೋಧನೆಯನ್ನು ಸರಕಾರ ಪರಿಶೀಲನೆ ಮತ್ತು, ಅಧ್ಯಯನ ನಡೆಸಿದ ನಂತರೆವೇ ಅದನ್ನು ಮಾರುಕಟ್ಟೆಗೆ ಬಿಡಿಗಡೆ ಮಾಡಬೇಕು. ಅದರ ಜೊತೆಗೆ  ಔಷಧಿ ಕುರಿತು ಜಾಹೀರಾತು ನೀಡುವುದನ್ನು ನಿಲ್ಲಿಸಬೇಕು ಎಂದು ಆಯುಷ್ ಸಚಿವಾಲಯ ಆದೇಶಿಸಿದೆ.

ಕೊರೊನಿಲ್ ಔಷಧಿಗಳನ್ನು ದೇಶಾದ್ಯಂತ 280 ರೋಗಿಗಳ ಸಂಶೋಧನೆ ಮತ್ತು ಪ್ರಯೋಗಗಳ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಈ ಔಷಧದ ಬೆಲೆ 545 ರೂ. ಗಳು. ಇದನ್ನು ಒಂದು ವಾರದೊಳಗೆ ಭಾರತದಾದ್ಯಂತ ಮಾರಾಟ ಮಾಡಲಾಗುವುದು ಎಂದು ಬಾಬಾ ರಾಮ್ ದೇವ್ ತಿಳಿಸಿದ್ದರು.

ಈ ಬಗ್ಗೆ ಸ್ಪಷ್ಟನೆ ಕೇಳಿದ ಆಯುಷ್ ಸಚಿವಾಲಯವು, ಕೊರೋನಿಲ್ ಔಷಧ  ಸಂಶೋಧನೆಯ ಫಲಿತಾಂಶಗಳು, ಕ್ಲಿನಿಕಲ್ ಪ್ರಯೋಗಗಳು, ಸಂಶೋಧನೆ ನಡೆಸಿದ ಆಸ್ಪತ್ರೆಗಳು, ಪತಂಜಲಿ ಕಂಪನಿಯು  ಔಷಧಿ ಸಿದ್ದಪಡಿಸಲು ಅನುಮತಿ ಪಡೆದಿದೆಯೇ ಮತ್ತು ನೋಂದಾಯಿಸಿಕೊಂಡಿದೆಯೇ ಎಂಬ ವಿವರಗಳನ್ನು ನೀಡುವಂತೆ ಕೇಳಿದೆ.

Advertisement

ಇದರ ಜೊತೆಗೆ ಉತ್ತರಾಖಂಡದ ಹರಿದ್ವಾರದಲ್ಲಿ ತಯಾರಿಸಿದ ಆಯುರ್ವೇದ ಔಷಧಿಗಳ ಪರವಾನಗಿ ಮತ್ತು ಉತ್ಪನ್ನ ಅನುಮೋದನೆ ವಿವರಗಳನ್ನು ನೀಡುವಂತೆ ಅಲ್ಲಿನ ಸರಕಾರಕ್ಕೆ ಆಯುಷ್ ಸಚಿವಾಲಯ ಮನವಿ ಮಾಡಿದೆ.

ಈ ಕುರಿತು ಮಾತನಾಡಿದ ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ, ಎಲ್ಲಾ ಮಾದರಿಯ ಪರೀಕ್ಷೆಗಳನ್ನು ಶೇಕಡಾ 100 ರಷ್ಟು ಪೂರೈಸಲಾಗಿದೆ. ಈ ಕುರಿತ ಮಾಹಿತಿಯನ್ನು ಆಯುಷ್ ಸಚಿವಾಲಯಕ್ಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರನ್ನು ದಾರಿ ತಪ್ಪಿಸಲಾಗಿದೆ ಎಂದು ಪತಂಜಲಿ ವಿರುದ್ಧ ರಾಜಸ್ಥಾನ ಮತ್ತು ಹರ್ಯಾಣದಲ್ಲಿ ಎರಡು ಪೊಲೀಸ್ ದೂರುಗಳು ದಾಖಲಾಗಿವೆ. ಜೊತೆಗೆ ಐಸಿಎಂಆರ್ ಕೂಡ ಯೋಗ ಗುರು ಸಂಸ್ಥೆಯ ಔಷಧದ ಬಗ್ಗೆ ದೂರ ಉಳಿಯಲು ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next