Advertisement

‘The Indian House’ Movie: ರಾಮ್‌ಚರಣ್‌ ನಿರ್ಮಾಣದಲ್ಲಿ ʼದಿ ಇಂಡಿಯನ್‌ ಹೌಸ್‌ʼ

11:00 AM Jul 03, 2024 | Team Udayavani |

ತೆಲುಗಿನ ಸ್ಟಾರ್‌ ನಟ ರಾಮ್‌ಚರಣ್‌ ನಿರ್ಮಿಸುತ್ತಿರುವ ಹೊಸ ಚಿತ್ರದ ಮುಹೂರ್ತ ಮಂಗಳವಾರ ಹಂಪಿಯ ವಿರೂಪಾಕ್ಷ ಸನ್ನಿಧಿಯಲ್ಲಿ ನಡೆದಿದೆ.

Advertisement

“ದಿ ಇಂಡಿಯಾ ಹೌಸ್‌’ ಹೆಸರಿನಡಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ತೆಲುಗಿನ ನಿಖಿಲ್‌ ಸಿದ್ಧಾರ್ಥ್ ನಾಯಕನಾಗಿ ನಟಿಸಲಿದ್ದಾರೆ.

ದಿ ಕಾಶ್ಮೀರಿ ಫೈಲ್ಸ್, ಕಾರ್ತಿಕೇಯ-2 ನಂತಹ ಹಿಟ್‌ ಸಿನಿಮಾಗಳನ್ನು ನಿರ್ಮಿಸಿರುವ ಅಭಿಷೇಕ್‌ ಅಗರ್ವಾಲ್‌ ತಮ್ಮದೇ ಅಭಿಷೇಕ್‌ ಅಗರ್ವಾಲ್‌ ಆರ್ಟ್ಸ್ ಬ್ಯಾನರ್‌ ಹಾಗೂ ರಾಮ್‌ ಚರಣ್‌ ಒಡೆತನದ ವಿ ಮೆಗಾ ಪಿಕ್ಚರ್ಸ್‌ ಜಂಟಿಯಾಗಿ ಈ ಚಿತ್ರ ನಿರ್ಮಿಸುತ್ತಿದೆ.

ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಘಟನೆಗಳನ್ನು ಆಧರಿಸಿ “ದಿ ಇಂಡಿಯಾ ಹೌಸ್‌’ ವನ್ನು ಕಟ್ಟಿಕೊಡಲಾಗುತ್ತಿದೆ. ಸಿನಿಮಾದಲ್ಲಿ ನಾಯಕ ನಿಖಿಲ್‌ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್‌ ವಂಶಿ ಕೃಷ್ಣ ನಿರ್ದೇಶನದ ಸಿನಿಮಾದಲ್ಲಿ ನಟ ಅನುಪಮ್‌ ಖೇರ್‌ ನಟಿಸುತ್ತಿದ್ದಾರೆ. ನಿಖೀಲ್‌ ಸಿದ್ದಾರ್ಥ್ ಗೆ ಜೋಡಿಯಾಗಿ ಸಾಯಿ ಮಂಜ್ರೇಕರ್‌ ಬಣ್ಣ ಹಚ್ಚಲಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮೂಡಿ ಬರುತ್ತಿರುವ ಸಿನಿಮಾವಿದು. ಇಂದಿನಿಂದ ಶೂಟಿಂಗ್‌ ಶುರುವಾಗಲಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next