Advertisement

ಉತ್ತಮ ಸಮಾಜ ನಿರ್ಮಾಣಕ್ಕೆ ರಾಮಾಯಣ ಮಾರ್ಗದರ್ಶಿ: ಕನಕಪ್ಪ ದಂಡಗುಲಕರ್‌

11:41 AM Oct 21, 2021 | Team Udayavani |

ಶಹಾಬಾದ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ ಎಂದು ವಾಡಿ-ಶಹಾಬಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್‌ ಹೇಳಿದರು.

Advertisement

ಬುಧವಾರ ನಗರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾಲ್ಮೀಕಿ ರಾಮಾಯಣ ದೇಶ-ಭಾಷೆಗೆ ಸೀಮಿತಗೊಳ್ಳದೇ ಜಾಗತಿಕವಾಗಿ ಆರಾಧಿಸಲ್ಪಟ್ಟಿದೆ. ಜನಸಮುದಾಯದ ಸಮಸ್ಯೆಗಳು, ಸಂಕಟಗಳು, ಸವಾಲುಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಸಿಗುತ್ತದೆ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ಕಲಿಯಬಹುದಾಗಿದೆ ಎಂದು ಹೇಳಿದರು.

ಮಂಡಲ ಉಪಾಧ್ಯಕ್ಷರಾದ ದುರ್ಗಪ್ಪ ಪವರ, ಮಹಾದೇವ ಗೊಬ್ಬುರಕರ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಚಂದ್ರಕಾಂತ ಗೊಬ್ಬುರಕರ, ಚಂದ್ರಕಾಂತ ಸುಬೇದಾರ ಮಾತನಾಡಿದರು.

ಇದನ್ನೂ ಓದಿ: ಮೈಸೂರಿನಲ್ಲಿ ಧಾರಾಕಾರ ಮಳೆ: ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

Advertisement

ಉಪಾಧ್ಯಕ್ಷರಾದ ಶಶಿಕಲಾ ಸಜ್ಜನ, ಬಸವರಾಜ ತರನಳ್ಳಿ, ಪ್ರಧಾನ ಕಾರ್ಯದರ್ಶಿ ಸಿದ್ರಾಮ ಕುಸಾಳೆ, ಖಜಾಂಚಿ ಅಣ್ಣೆಪ್ಪ ದಸ್ತಾಪುರ, ಪ್ರಮುಖರಾದ ಭೀಮರಾವ್‌ ಸಾಳೂಂಕೆ, ಚಂದ್ರಕಾಂತ ಗೋಬ್ಬುರಕರ, ಸೂರ್ಯಕಾಂತ ವಾರದ, ಸುಭಾಷ ಜಾಪೂರ, ಅನಿಲ ಬೋರಗಾಂವಕರ, ನಿಂಗಣ್ಣ ಹುಳಗೋಳಕರ, ಮೋಹನ ಘಂಟ್ಲಿ, ವಿರೇಶ ಬಂದಳ್ಳಿ, ತಿಮ್ಮಣ್ಣ ಕುರ್ಡೇಕರ, ಶ್ರೀನಿವಾಸ ದೇವಕರ, ಡಿ.ಸಿ. ಹೊಸಮನಿ, ಪ್ರಾ ಧಿಕಾರ ಅಧ್ಯಕ್ಷ ಕನಕಪ್ಪ ದಂಡಗುಲಕರ, ಸದಸ್ಯರಾದ ಬಸವರಾಜ ಬಿರಾದಾರ, ಲತಾ ಸಂಜಿವ, ನಗರಸಭೆ ಸದಸ್ಯರಾದ ಜಗದೇವ ಸುಬೇದಾರ, ಶಿವಾಜಿ ರೆಡ್ಡಿ, ದತ್ತಾ ಫಂಡ, ಆಶ್ರಯ ಸಮಿತಿ ಸದಸ್ಯ ಚಂದ್ರಕಾಂತ ಸುಬೇದಾರ, ದತ್ತು ಗಂಟಿ, ಯುವ ಮೋರ್ಚಾ ಅಧ್ಯಕ್ಷ ದಿನೇಶ ಗೌಳಿ, ಉಮೇಶ ನಿಂಬಾಳಕರ, ಅಮಿತ್‌ಸಿಂಗ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಶ್ರೀ ಸೂಡಿ, ಆರತಿ ಕೂಡಿ, ಪಾರ್ವತಿ ಮಠಪತಿ, ಬಸಮ್ಮ, ಪಾರ್ವತಿ ಮೈತ್ರಿ ಹಾಗೂ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next