Advertisement
125 ಕರಸೇವಕರಿಗೆ ಆಶ್ರಯ ನೀಡಿದಾಕೆ
Related Articles
Advertisement
ಶ್ರೀರಾಮನೇ ಪೂರ್ವಜನೆಂದ ಮುಸ್ಲಿಂ ಕರಸೇವಕ
ಶ್ರೀರಾಮ ಚಂದ್ರನನ್ನು ನಮ್ಮ ಪೂರ್ವಜನೆಂದು ಭಾವಿಸಿದ್ದ ಹಲವಾರು ಮಂದಿ ಮುಸ್ಲಲ್ಮಾನರು ಕೂಡ ಮಂದಿರ ಹೋರಾಟದಲ್ಲಿ ಕರಸೇವಕರಾಗಿ ಪಾಲ್ಗೊಂಡಿದ್ದರು. ಆ ಪೈಕಿ ಉತ್ತರ ಪ್ರದೇಶದ ಮಿರ್ಜಾಪುರದ ನಿವಾಸಿಯಾ ಗಿರುವ ಹಬೀಬ್ ಮೊಹಮ್ಮದ್ ಕೂಡ ಒಬ್ಬರು. 1990ರ ಸಂದರ್ಭದಲ್ಲಿ 5-6 ದಿನಗಳ ಕಾಲ ಅಯೋಧ್ಯೆಯಲ್ಲೇ ತಂಡದೊಂದಿಗೆ ಉಳಿದಿದ್ದ ಹಬೀಬ್ ಮಂದಿರ ಪರವಾಗಿ ಹೋರಾಟ ನಡೆಸಿದ್ದರು. ಇದೀಗ ಅವರಿಗೂ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ.
ಕರಸೇವಕ ದಲಿತ ದಂಪತಿಗೆ ಮಂದಿರ ಪೂಜೆಯ ಅವಕಾಶ
ಮಂದಿರ ಹೋರಾಟದಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರದ ನವಿ ಮುಂಬೈ ಮೂಲದ ದಲಿತ ದಂಪತಿ ವಿಟuಲ್ ಕಾಂಬ್ಳೆ ಹಾಗೂ ಅವರ ಪತ್ನಿ ಉಜ್ವಲಾ ಅವರಿಗೆ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಅಲ್ಲದೇ, ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿರುವ ಪ್ರಾಣ ಪ್ರತಿಷ್ಠೆ ಪೂಜೆಯಲ್ಲಿ ದೇಶದ 11 ದಂಪತಿ ಭಾಗಿಯಾಗಲಿದ್ದು, ಆ ಪೈಕಿ ವಿಟuಲ್ ಕಾಂಬ್ಳೆ ದಂಪತಿಯೂ ಇರಲಿದ್ದಾರೆ. ಮಂದಿರ ತಮ್ಮನ್ನು ನೆನಪಿಸಿಕೊಂಡು ಆಹ್ವಾನ ಕಳುಹಿಸಿರುವುದು ಕಂಡು ಕಣ್ಣು ತುಂಬಿ ಬಂದಿದೆ ಎಂಬುದು ಈ ದಂಪತಿಯ ಮಾತು.
ಗೋಧ್ರಾ: ಹತ ಕರಸೇವಕರ ಕುಟುಂಬಕ್ಕೆ ಆಮಂತ್ರಣ
2002ರಲ್ಲಿ ಗುಜರಾತ್‌ನ ಗೋಧ್ರಾದಲ್ಲಿ ಸಬರಮತಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪ್ರಾಣ ಕಳೆದುಕೊಂಡ 18 ಮಂದಿ ಕರಸೇವಕರ ಕುಟಂಬಕ್ಕೂ ಮಂದಿರದ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಮೃತಪಟ್ಟ ಎಲ್ಲಾ ಕರಸೇವಕ ನಿವಾಸದಿಂದ ಓರ್ವ ವ್ಯಕ್ತಿ ಸಮಾರಂಭದಲ್ಲಿ ಭಾಗವಹಿಸಬಹುದಾಗಿದೆ.
ಮೋದಿ ವೀಸಾಕ್ಕಾಗಿ ಹೋರಾಡಿದ ವೈದ್ಯ
ಮೋದಿ ಸಿಎಂ ಆಗಿದ್ದಾಗ ಅವರ ಯುಎಸ್ ಭೇಟಿಗೆ ಹೇರಿದ್ದ ನಿರ್ಬಂಧ ತೆರವುಗೊಳಿಸಿ, ಅವರ ವೀಸಾಗೆ ಒತ್ತಾಯಿಸಿದ ವೈದ್ಯ, ಕ್ಯಾನ್ಸರ್ ತಜ್ಞ ಭರತ್ ಬರಾಯಿ ಅವರಿಗೂ ಆಹ್ವಾನ ನೀಡಲಾಗಿದೆ.
700 ಶವ ಪರೀಕ್ಷೆ ನಡೆಸಿದ್ದ ಮಹಿಳೆ
ಛತ್ತೀಸ್‌ಗಢ ದಲ್ಲಿ ಕಳೆದ 18 ವರ್ಷಗಳಿಂದ 700 ಶವಗಳ ಪರೀಕ್ಷೆ ನಡೆಸಿರುವ ಆರೋಗ್ಯ ಕಾರ್ಯಕರ್ತೆ ಸಂತೋಷಿ ದುರ್ಗಾ ಅವರಿಗೂ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ.