Advertisement

ವಿಮಾನ ನಿಲ್ದಾಣ ಖಾಸಗೀಕರಣ ಖಂಡಿಸಿ ನ.9ರಂದು ಪ್ರತಿಭಟನೆ: ರಮಾನಾಥ ರೈ

07:07 PM Nov 05, 2020 | sudhir |

ಮಂಗಳೂರು: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಮಂಗಳೂರಿನ ಪ್ರತಿಷ್ಠಿತ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಸಂಸ್ಥೆ ಅದಾನಿ ಗ್ರೂಪಿಗೆ ವಹಿಸಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ತೀವ್ರ ಹೋರಾಟವನ್ನು ನಡೆಸಲು ಉದ್ದೇಶಿಸಿದ್ದು, ನ. 9ರಂದು ಕೆಂಜಾರುನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್‌ ಸಭಾಭವನದಲ್ಲಿ ನ.5 ರಂದು ಜರಗಿದ ಜಿಲ್ಲಾ ಕಾಂಗ್ರೆಸ್‌ ಸಮಿತಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ಪಂಡಿತ್‌ ಜವಾಹರ್‌ ಲಾಲ್‌ ನೆಹರು, ಶ್ರೀನಿವಾಸ್‌ ಮಲ್ಯರ ದೂರದೃಷ್ಟಿತ್ವದಲ್ಲಿ ನಿರ್ಮಾಣಗೊಂಡ ಬಜ್ಪೆ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪಿಗೆ ಮಾರಾಟ ಮಾಡಿರುವುದು ಜಿಲ್ಲೆಗೆ ಬಗೆದ ದ್ರೋಹವಾಗಿದೆ. ಪರಿಶಿಷ್ಟ ವರ್ಗದವರು ಅಂದು ಕೊಡುಗೆಯಾಗಿ ನೀಡಿರುವ ಸ್ಥಳದಲ್ಲಿ ನಿರ್ಮಾಣಗೊಂಡ ವಿಮಾನ ನಿಲ್ದಾಣವನ್ನು ಇಂದು ಅದಾನಿಗೆ ಮಾರಾಟ ಮಾಡಲಾಗಿದೆ. ವಿಜಯ ಬ್ಯಾಂಕನ್ನು ಗುಜರಾತ್‌ ಮೂಲದ ನಷ್ಟದಲ್ಲಿದ್ದ ಬರೋಡಾ ಬ್ಯಾಂಕ್‌ ಜೊತೆ ವಿಲೀನಗೊಳಿಸಿ ಸುಂದರ ರಾಮ್‌ ಶೆಟ್ಟಿಯವರ ಹೆಸರನ್ನು ಅಳಿಸಿ ಹಾಕಲಾಗಿದೆ. ಮೋದಿ ಸರಕಾರದ ಈ ಜನವಿರೋಧಿ ನೀತಿಯನ್ನು ಜಿಲ್ಲೆಯ ಜನರು ಕ್ಷಮಿಸಲಾರರು ಎಂದು ಹೇಳಿದರು.

ಇದನ್ನೂ ಓದಿ:ಬಡವರಿಗೆ ಕೇಂದ್ರದ ಯೋಜನೆ ಸಿಗದಂತಾಗಿದೆ. ಮಮತಾ ಜನ ವಿರೋಧಿ: ಅಮಿತ್ ಶಾ ಕಿಡಿ

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಅಭಯಚಂದ್ರ ಜೈನ್‌, ಮಾಜಿ ಶಾಸಕರಾದ ಜೆ.ಆರ್‌.ಲೋಬೊ, ಐವನ್‌ ಡಿಸೋಜಾ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಮ.ನ.ಪಾ ವಿಪಕ್ಷ ನಾಯಕ ಅಬ್ದುಲ್‌ ರವೂಫ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್‌ ಪಿಂಟೊ, ತಾ.ಪಂ. ಅಧ್ಯಕ್ಷ ಮಲಾರ್‌ ಮೋನು, ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳು, ಕಾರ್ಪೊರೇಟರ್‌ಗಳು, ಜಿಲ್ಲಾ ಪಂಚಾಯತ್‌ ಸದಸ್ಯರುಗಳು, ಸ್ಥಳೀಯ ಬ್ಲಾಕ್‌ ಅಧ್ಯಕ್ಷರು ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next